ನವದೆಹಲಿ:ಪ್ರಸ್ತುತ ನಡೆಯುತ್ತಿರುವ ಮುಂಗಾರು ಅಧಿವೇಶನದಲ್ಲಿ ಕೇಂದ್ರ ಸರ್ಕಾರವು ಬುಧವಾರ ಲೋಕಸಭೆಯಲ್ಲಿ ಅಂಗೀಕಾರ ಪಡೆಯಲು 2020ರ ಬ್ಯಾಂಕಿಂಗ್ ನಿಯಂತ್ರಣ (ತಿದ್ದುಪಡಿ) ಮಸೂದೆ ಮತ್ತು ಇತರ ಎರಡು ಮಸೂದೆಗಳನ್ನು ಮಂಡಿಸಲಿದೆ.
ರೈತರ ಉತ್ಪಾದನೆ ವ್ಯಾಪಾರ ಮತ್ತು ವಾಣಿಜ್ಯ (ಪ್ರಚಾರ ಮತ್ತು ಸೌಲಭ್ಯ) ಮಸೂದೆ- 2020 ಮತ್ತು ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ ಮಸೂದೆ- 2020ರ ರೈತರ (ಸಬಲೀಕರಣ ಮತ್ತು ಸಂರಕ್ಷಣೆ) ಒಪ್ಪಂದಂತಹ ಇತರ ಎರಡು ಮಸೂದೆಗಳಾಗಿವೆ.
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆ, 1949ಅನ್ನು ತಿದ್ದುಪಡಿ ಮಾಡಲು 2020ರ ಬ್ಯಾಂಕಿಂಗ್ ನಿಯಂತ್ರಣ (ತಿದ್ದುಪಡಿ) ಮಸೂದೆ ಮಂಡಿಸಲಿದ್ದಾರೆ.
ಸಹಕಾರಿ ಬ್ಯಾಂಕ್ಗಳ ಮೇಲೆ ಕೇಂದ್ರೀಯ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ನಿಯಂತ್ರಣವನ್ನು ಬಲಪಡಿಸಲು ಈ ವಿಧೇಯಕವನ್ನು ಸೋಮವಾರದಂದು ಸಂಸತ್ತಿನಲ್ಲಿ ಮಂಡಿಸಲಾಯಿತು. ಇದಕ್ಕೆ ಪ್ರತಿ ಪಕ್ಷಗಳು ತೀವ್ರ ವಿರೋಧ ವ್ಯಕ್ತಪಡಿಸಿದವು.
ಕಳೆದ ವರ್ಷ ಪಂಜಾಬ್- ಮಹಾರಾಷ್ಟ್ರ ಕೋಪರೇಟಿವ್ ಬ್ಯಾಂಕ್ನಲ್ಲಿ ನಡೆದ 6,500 ಕೋಟಿ ರೂ.ಗಳ ಹಗರಣದ ಪರಿಣಾಮ ಸಹಕಾರಿ ಬ್ಯಾಂಕ್ಗಳ ನಿಯಂತ್ರಣ ಮುನ್ನೆಲೆಗೆ ಬಂತು.
ಸೀತಾರಾಮನ್ ಹೊಸ ತಿದ್ದುಪಡಿಗಳೊಂದಿಗೆ ಮಸೂದೆ ಮಂಡಿಸಲಿದ್ದಾರೆ. ಅಧಿವೇಶನದ ಮೊದಲ ದಿನ, ಅವರು ಮಸೂದೆಯನ್ನು ಹಿಂತೆಗೆದುಕೊಂಡರು. ಗಂಭೀರ ಅಗತ್ಯವಿರುವ ತೊಂದರೆಗೀಡಾದ ಸಹಕಾರಿ ಬ್ಯಾಂಕ್ಗಳನ್ನು ಪುನರ್ರಚಿಸಲು ಭಾರತೀಯ ರಿಸರ್ವ್ ಬ್ಯಾಂಕ್ಗೆ ಅವಕಾಶ ನೀಡುವ ಕೆಲವು ಹೊಸ ಸಂಗತಿ ಸೇರಿಸಲು ಹಿಂತೆಗೆದುಕೊಳ್ಳಲಾಗುತ್ತಿದೆ ಎಂದು ಸ್ಪಷ್ಟನೆ ನೀಡಿದರು. ಈ ವರ್ಷದ ಮಾರ್ಚ್ 3ರಂದು ಬಜೆಟ್ ಅಧಿವೇಶನದಲ್ಲಿ ಸುಗ್ರೀವಾಜ್ಞೆ ಮೂಲಕ ಅಂಗೀಕರಿಸಲಾಯಿತು.
ಈ ಮಸೂದೆ ಪರಿಣಾಮ ಹಲವು ರಾಜ್ಯಗಳಲ್ಲಿನ ಸಹಕಾರ ಬ್ಯಾಂಕ್‌ಗಳು ಬಿಕ್ಕಟ್ಟಿಗೆ ಸಿಲುಕಿದ ವೇಳೆ ಠೇವಣಿದಾರರ ಹಿತಾಸಕ್ತಿ ದೃಷ್ಟಿಯಿಂದ ನಿರ್ದೇಶಕರ ಆಡಳಿತ ಮಂಡಳಿಯನ್ನು ಸೂಪರ್‌ಸೀಡ್ ಮಾಡುವ ಅಧಿಕಾರು ಆರ್‌ಬಿಐಗೆ ಸಿಗಲಿದೆ. ಇದೇ ವೇಳೆ ಸಹಕಾರ ಬ್ಯಾಂಕ್‌ಗಳು ಆರ್‌ಬಿಐ ಅನುಮತಿ ಪಡೆದು ಈಕ್ವಿಟಿ ಷೇರು ಬಿಡುಗಡೆ ಮಾಡುವ ಹಾದಿ ಸುಗಮವಾಗಲಿದೆ.
ಲೋಕಸಭೆಯಲ್ಲಿ ಇಂದು ಮಂಡನೆ ಆಗಲಿರುವ ವಿಧೇಯಕಗಳು
ಬ್ಯಾಂಕಿಂಗ್ ನಿಯಂತ್ರಣ (ತಿದ್ದುಪಡಿ) ಮಸೂದೆ- 2020
ಕೃಷಿಕರ ಉತ್ಪಾದನೆ ವ್ಯಾಪಾರ ಮತ್ತು ವಾಣಿಜ್ಯ (ಪ್ರಚಾರ ಮತ್ತು ಸೌಲಭ್ಯ) ಮಸೂದೆ- 2020
ಬೆಲೆ ಅಭಯ ಮತ್ತು ಕೃಷಿ ಸೇವೆಗಳ ಕೃಷಿಕರ (ಸಬಲೀಕರಣ ಮತ್ತು ಸಂರಕ್ಷಣೆ) ಒಪ್ಪಂದ ಮಸೂದೆ- 2020