ನವದೆಹಲಿ: ಮುಂಬರುವ ಕೇಂದ್ರ ಬಜೆಟ್ ಬಗ್ಗೆ ಭರವಸೆ ಇರಿಸಿಕೊಂಡಿರುವ ಪ್ರವಾಸೋದ್ಯಮ ಮತ್ತು ಆತಿಥ್ಯ ಕ್ಷೇತ್ರವು ಕೋವಿಡ್-19 ಬಿಕ್ಕಟ್ಟಿನ ಪ್ರಭಾವದಿಂದ ಹೊರಹೊಮ್ಮಲು ನೆರವಾಗುವಂತೆ ಸರ್ಕಾರಕ್ಕೆ ಹಲವು ಶಿಫಾರಸುಗಳನ್ನು ಮಾಡಿದೆ.
ಕೇಂದ್ರ ಮತ್ತು ರಾಜ್ಯಗಳಲ್ಲಿ ವಿಸ್ತರಣೆಗೊಂಡ ಪ್ರವಾಸೋದ್ಯಮ ಕ್ಷೇತ್ರದ ಪುನಶ್ಚೇತನಕ್ಕೆ, ಪ್ರವಾಸೋದ್ಯಮ ಸಚಿವರ ಜೊತೆಗೆ ಪ್ರಧಾನಿ ನೇತೃತ್ವದಲ್ಲಿ ಮುಖ್ಯಮಂತ್ರಿಗಳ ರಾಷ್ಟ್ರೀಯ ಪ್ರವಾಸೋದ್ಯಮ ಮಂಡಳಿ ರಚಿಸಲು ಫೆಡರೇಷನ್ ಆಫ್ ಅಸೋಸಿಯೇಷನ್ಸ್ ಇನ್ ಇಂಡಿಯನ್ ಟೂರಿಸಂ ಆ್ಯಂಡ್ ಹಾಸ್ಪಿಟಾಲಿಟಿ (ಎಫ್ಎಐಟಿಎಚ್) ಉದ್ಯಮವು ಪ್ರಸ್ತಾಪಿಸಿದೆ.
ದೇಶಾದ್ಯಂತ ಪ್ರವಾಸೋದ್ಯಮಕ್ಕೆ ಉದ್ಯಮದ ಸ್ಥಾನಮಾನವನ್ನು ಸಹ ಫೆಡರೇಶನ್ ಕೇಳಿದೆ. ಪ್ರವಾಸೋದ್ಯಮ ಒಕ್ಕೂಟವು ಸರ್ಕಾರದ ವಿವಿಧ ಸದಸ್ಯರೊಂದಿಗೆ ತೊಡಗಿಸಿಕೊಂಡಿದೆ. ಕೇಂದ್ರ ಬಜೆಟ್‌ನಲ್ಲಿ ನ್ಯಾಯಯುತ ಒಪ್ಪಂದ ಪಡೆಯಲು ಉದ್ಯಮ ಎದುರು ನೋಡುತ್ತಿದೆ ಎಂದು ಫೇಯ್ತ್ ಕನ್ಸಲ್ಟಿಂಗ್ ಸಿಇಒ ಆಶಿಶ್ ಗುಪ್ತಾ ಹೇಳಿದ್ದಾರೆ.