ನವದೆಹಲಿ: ಆಧಾರ್ ಮತ್ತು ಪಾನ್‌ಕಾರ್ಡ್ ಸಂಖ್ಯೆ ಜೋಡಣೆಗೆ ಕಾಲಮಿತಿಯನ್ನು ಆದಾಯ ತೆರಿಗೆ ಇಲಾಖೆ 2020ರ ಮಾರ್ಚ್ 31ಕ್ಕೆ ನಿಗದಿಪಡಿಸಿದೆ.
ಇದಕ್ಕೂ ಮುನ್ನ ಐಟಿ ಇಲಾಖೆಯು ಹಲವು ಬಾರು ಅಂತಿಮ ಗಡವು ನೀಡಿ ಮತ್ತೆ ಅವಧಿ ವಿಸ್ತರಿಸಿತ್ತು. ಈಗ ನೀಡಿರುವ ಸಮಯದಿಂದ ಪಾನ್ ಮತ್ತು ಆಧಾರ್ ಸಂಖ್ಯೆಗಳನ್ನು ಜೋಡಿಸಲು ಹೆಚ್ಚಿನ ಸಮಯ ದೊರೆಯಲಿದೆ. ಕೇಂದ್ರೀಯ ನೇರ ತೆರಿಗೆಗಳ ಮಂಡಳಿ ಇದೀಗ 6ನೇ ಬಾರಿಗೆ ಕಾಲಾವಧಿ ವಿಸ್ತರಿಸಿದಂತಾಗಿದೆ.
2020ರ ಜನವರಿ 27ರವರೆಗೆ ಒಟ್ಟಾರೆ 30.75 ಕೋಟಿ ಪಾನ್ಕಾರ್ಡ್ಗಳ ಜೋಡಣೆ ಆಗಿದೆ. ಇನ್ನೂ 17.58 ಕೋಟಿ ಪಾನ್ಗಳು ಜೋಡಣೆ ಆಗಬೇಕಿದೆ. ಕಳೆದ ವರ್ಷ ಸೆಪ್ಟೆಂಬರ್ನಲ್ಲಿ ಸುಪ್ರೀಂಕೋರ್ಟ್ ಕೇಂದ್ರ ಸರ್ಕಾರದ ಮಹತ್ವದ ಆಧಾರ್ ಯೋಜನೆಗೆ ಸಾಂವಿಧಾನಿಕ ಮಾನ್ಯತೆ ನೀಡಿತ್ತು. ವೈಯಕ್ತಿಕ ಬೆರಳಚ್ಚು ಗುರುತನ್ನು ಪಾನ್ ಸಂಖ್ಯೆ ಪಡೆಯಲು ಮತ್ತು ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆಗೆ ಇದನ್ನು ಕಡ್ಡಾಯಗೊಳಿಸಿತ್ತು.
ಗಡುವು ನೀಡಿದ ದಿನಾಂಕದ ಒಳಗೆ ಪಾನ್‌ಕಾರ್ಡ್ ಹೊಂದಿದವರು ಆಧಾರ್ಗೆ ಜೋಡಣೆ ಮಾಡದೆ ಇದ್ದರೇ ಅಂತಹ ವ್ಯಕ್ತಿಯ ಶಾಶ್ವತ ಖಾತೆ ಸಂಖ್ಯೆ ಈ ದಿನಾಂಕದ ನಂತರ ನಿಷ್ಕ್ರಿಯಗೊಳ್ಳುತ್ತದೆ ಎಂದು ಕೇಂದ್ರೀಯ ನೇರ ತೆರಿಗೆ ಮಂಡಳಿ (ಸಿಬಿಡಿಟಿ) ಪ್ರಕಟಣೆಯಲ್ಲಿ ತಿಳಿಸಿದೆ.
ಒಮ್ಮೆ ಪಾನ್ ಕಾರ್ಡ್ ನಿಷ್ಕ್ರಿಯಗೊಂಡರೆ ಅಗತ್ಯವಿರುವ ವ್ಯವಹಾರಗಳು ಕೈಗೊಳ್ಳಲು ಸಾಧ್ಯವಾಗುವುದಿಲ್ಲ. ಹೀಗಾಗಿ, ಕಾರ್ಡ್ ತನ್ನ ಮೌಲ್ಯ ಕಳೆದುಕೊಳ್ಳುವ ಮುನ್ನ 12 ಸಂಖ್ಯೆ ಒಳಗೊಂಡ ವಿಶಿಷ್ಟ ಗುರುತಿನ ಚೀಟಿಯ ಆಧಾರ್ ಅನ್ನು ಬ್ಯಾಂಕ್ ಖಾತೆಯ ಶಾಶ್ವತ ಖಾತೆ ಸಂಖ್ಯೆ (ಪ್ಯಾನ್ ಕಾರ್ಡ್) ಜೋಡಣೆಯ ವಿಧಾನ ಇಲ್ಲಿದೆ.
ಕಳೆದ ಕೆಲ ತಿಂಗಳ ಹಿಂದೆಷ್ಟೇ ಸುಪ್ರೀಂಕೋರ್ಟ್ ಕೂಡ ಆದಾಯ ತೆರಿಗೆ ಕಾಯ್ದೆ, ಸೆಕ್ಷನ್ 139ಎಎ ಅನ್ವಯ ಪ್ಯಾನ್-ಆಧಾರ್ ಜೋಡಣೆ ಕಡ್ಡಾಯವೆಂದು ಆದೇಶ ಹೊರಡಿಸಿತ್ತು.