ಕರ್ನಾಟಕ

karnataka

ETV Bharat / business

ಪ್ಯಾನ್- ಆಧಾರ್​ ಲಿಂಕ್​ಗೆ 3 ದಿನ ಬಾಕಿ: ಕಾರ್ಡ್ ನಿಷ್ಕ್ರಿಯಗೊಂಡರೆ ವ್ಯವಹಾರ ಬಂದ್... ಇಲ್ಲಿದೆ ಜೋಡಣೆ ವಿಧಾನ​

ಒಮ್ಮೆ ಪ್ಯಾನ್ ಕಾರ್ಡ್ ನಿಷ್ಕ್ರಿಯಗೊಂಡರೆ ಅಗತ್ಯವಿರುವ ವ್ಯವಹಾರಗಳು ಕೈಗೊಳ್ಳಲು ಸಾಧ್ಯವಾಗುವುದಿಲ್ಲ. ಹೀಗಾಗಿ, ಕಾರ್ಡ್​ ತನ್ನ ಮೌಲ್ಯ ಕಳೆದುಕೊಳ್ಳುವ ಮುನ್ನ 12 ಸಂಖ್ಯೆ ಒಳಗೊಂಡ ವಿಶಿಷ್ಟ ಗುರುತಿನ ಚೀಟಿಯ ಆಧಾರ್ ಅನ್ನು ಬ್ಯಾಂಕ್‌ ಖಾತೆಯ ಶಾಶ್ವತ ಖಾತೆ ಸಂಖ್ಯೆ (ಪ್ಯಾನ್‌ ಕಾರ್ಡ್‌) ಜೋಡಣೆಯ ವಿಧಾನ ಇಲ್ಲಿದೆ.

ಸಾಂದರ್ಭಿಕ ಚಿತ್ರ

By

Published : Sep 26, 2019, 7:05 PM IST

Updated : Sep 26, 2019, 7:27 PM IST

ನವದೆಹಲಿ: ಆದಾಯ ತೆರಿಗೆ ಇಲಾಖೆಯ ಸೂಚನೆಯ ಅನ್ವಯ, ಪ್ಯಾನ್ ಮತ್ತು ಆಧಾರ್ ಲಿಂಕ್​ ಜೋಡಣೆಯ ವಾಯ್ದೆ ಇದೇ ಸೆಪ್ಟೆಂಬರ್​ 30ಕ್ಕೆ ಕೊನೆಯಾಗಲಿದ್ದು, ಜೋಡಣೆಯಾಗದ ಕಾರ್ಡ್​ಗಳು ಅಕ್ಟೋಬರ್ 1ರಿಂದ ನಿಷ್ಕ್ರಿಯಗೊಳ್ಳಲಿವೆ.

ಒಮ್ಮೆ ಪ್ಯಾನ್ ಕಾರ್ಡ್ ನಿಷ್ಕ್ರಿಯಗೊಂಡರೆ ಅಗತ್ಯವಿರುವ ವ್ಯವಹಾರಗಳು ಕೈಗೊಳ್ಳಲು ಸಾಧ್ಯವಾಗುವುದಿಲ್ಲ. ಹೀಗಾಗಿ, ಕಾರ್ಡ್​ ತನ್ನ ಮೌಲ್ಯ ಕಳೆದುಕೊಳ್ಳುವ ಮುನ್ನ 12 ಸಂಖ್ಯೆ ಒಳಗೊಂಡ ವಿಶಿಷ್ಟ ಗುರುತಿನ ಚೀಟಿಯ ಆಧಾರ್ ಅನ್ನು ಬ್ಯಾಂಕ್‌ ಖಾತೆಯ ಶಾಶ್ವತ ಖಾತೆ ಸಂಖ್ಯೆ (ಪ್ಯಾನ್‌ ಕಾರ್ಡ್‌) ಜೋಡಣೆಯ ವಿಧಾನ ಇಲ್ಲಿದೆ.

ಕಳೆದ ಕೆಲ ತಿಂಗಳ ಹಿಂದೆಷ್ಟೇ ಸುಪ್ರೀಂಕೋರ್ಟ್​ ಕೂಡ ಆದಾಯ ತೆರಿಗೆ ಕಾಯ್ದೆ, ಸೆಕ್ಷನ್​ 139ಎಎ ಅನ್ವಯ ಪ್ಯಾನ್-ಆಧಾರ್ ಜೋಡಣೆ ಕಡ್ಡಾಯವೆಂದು ಆದೇಶ ಹೊರಡಿಸಿತ್ತು.

ಜೋಡಣೆ ಮಾಡುವ ವಿಧಾನ

* https://www.incometaxindiaefiling.gov.inಗೆ ಭೇಟಿ ನೀಡಿ

* ಮುಖಪುಟದ ಎಡಭಾಗದಲ್ಲಿನ ಕೆಂಪು ಅಕ್ಷರದ ಲಿಂಕ್ ಆಧಾರ್​ (Link Aadhar​) ಆಯ್ಕೆ ಕ್ಲಿಕ್ ಮಾಡಿ

* ಲಿಂಕ್ ಆಧಾರ್ ಡೈಲಾಗ್ ಬಾಕ್ಸ್​ ತೆರೆದುಕೊಳ್ಳುತ್ತದೆ.

* ಡೈಲಾಗ್​ ಬಾಕ್ಸ್​ನಲ್ಲಿ ಸೂಚಿಸಲಾದ ಪ್ಯಾನ್​ ನಂ, ಆಧಾರ್ ನಂಬರ್​, ಆಧಾರ್​ ಕಾರ್ಡ್​ನಲ್ಲಿ ನಮೋದಿತ ಹೆಸರು ಭರ್ತಿ ಮಾಡಿ

*ಕ್ಯಾಪ್ಚನ್​ ಕೋಡ್​ ಸಂಖ್ಯೆ ನಮೋದಿಸಿ: (ದಿವ್ಯಾಂಗರಿಗೆ ಓಟಿಪಿ ನಂಬರ್​ ಪಡೆಯುವ ಅವಕಾಶವಿದೆ)

* ಹಸಿರು ಪೆಟ್ಟಿಗೆಯಲ್ಲಿನ ಲಿಂಕ್ ಆಧಾರ್​ (Link Aadhar) ಆಯ್ಕೆ ಮಾಡಿಕೊಂಡರೆ ಆಧಾರ್ ಜೋಡಣೆಯಾದ ಬಾಕ್ಸ್ ತೆರೆದುಕೊಳ್ಳುತ್ತದೆ

Last Updated : Sep 26, 2019, 7:27 PM IST

ABOUT THE AUTHOR

...view details