ನವದೆಹಲಿ :ಆಧಾರ್ ಕಾರ್ಡ್ ಜತೆಪ್ಯಾನ್ ಕಾರ್ಡ್‌ನ ಲಿಂಕ್ ಮಾಡುವ ಗಡುವು ಸಮೀಪಿಸುತ್ತಿದೆ. ಜೋಡಣೆ ಮಾಡುವ ದಿನಾಂಕ 2021ರ ಮಾರ್ಚ್ 31ಕ್ಕೆ ಕೊನೆಯಾಗಲಿದೆ.
ಆದಾಯ ತೆರಿಗೆ ಇಲಾಖೆಯ ಸೂಚನೆಯ ಅನ್ವಯ, ಪ್ಯಾನ್ ಕಾರ್ಡ್ ಮತ್ತು ಆಧಾರ್ ಲಿಂಕ್ ಜೋಡಣೆಯ ವಾಯ್ದೆ ಇದೇ ಮಾರ್ಚ್ 31ಕ್ಕೆ ಕೊನೆಯಾಗಲಿದೆ. ಜೋಡಣೆಯಾಗದ ಕಾರ್ಡ್‌ಗಳು ನಿಷ್ಕ್ರಿಯಗೊಳ್ಳಲಿವೆ. ಒಮ್ಮೆ ಪ್ಯಾನ್ ಕಾರ್ಡ್ ನಿಷ್ಕ್ರಿಯಗೊಂಡರೆ ಅಗತ್ಯವಿರುವ ವ್ಯವಹಾರಗಳು ಕೈಗೊಳ್ಳಲು ಸಾಧ್ಯವಾಗುವುದಿಲ್ಲ. ಹೀಗಾಗಿ, ಕಾರ್ಡ್ ತನ್ನ ಮೌಲ್ಯ ಕಳೆದುಕೊಳ್ಳುವ ಮುನ್ನ 12 ಸಂಖ್ಯೆಯನ್ನೊಳಗೊಂಡ ವಿಶಿಷ್ಟ ಗುರುತಿನ ಚೀಟಿಯ ಆಧಾರ್‌ನ ಬ್ಯಾಂಕ್ ಖಾತೆಯ ಶಾಶ್ವತ ಖಾತೆ ಸಂಖ್ಯೆ (ಪ್ಯಾನ್ ಕಾರ್ಡ್) ಜೋಡಣೆಯ ವಿಧಾನ ಇಲ್ಲಿದೆ.
ಜೋಡಣೆ ಮಾಡುವ ವಿಧಾನ
* https://www.incometaxindiaefiling.gov.ingಗೆ ಭೇಟಿ ನೀಡಿ
* ಮುಖಪುಟದ ಎಡಭಾಗದಲ್ಲಿನ ಕೆಂಪು ಅಕ್ಷರದ ಲಿಂಕ್ ಆಧಾರ್ (Link Aadhar) ಆಯ್ಕೆ ಕ್ಲಿಕ್ ಮಾಡಿ
* ಲಿಂಕ್ ಆಧಾರ್ ಡೈಲಾಗ್ ಬಾಕ್ಸ್ ತೆರೆದುಕೊಳ್ಳುತ್ತದೆ.
* ಡೈಲಾಗ್ ಬಾಕ್ಸ್ನಲ್ಲಿ ಸೂಚಿಸಲಾದ ಪ್ಯಾನ್ ನಂ, ಆಧಾರ್ ನಂಬರ್, ಆಧಾರ್ ಕಾರ್ಡ್ನಲ್ಲಿ ನಮೋದಿತ ಹೆಸರು ಭರ್ತಿ ಮಾಡಿ