ನವದೆಹಲಿ:12 ಸಂಖ್ಯೆ ಒಳಗೊಂಡ ವಿಶಿಷ್ಟ ಗುರುತಿನ ಚೀಟಿ ಆಧಾರ್ ಬ್ಯಾಂಕ್ ಖಾತೆಯ ಶಾಶ್ವತ ಖಾತೆ ಸಂಖ್ಯೆ (ಪ್ಯಾನ್ ಕಾರ್ಡ್) ಜೋಡಣೆಗೆ ಸೆಪ್ಟೆಂಬರ್ 30 ಕೊನೆಯ ದಿನವೆಂದು ಆದಾಯ ತೆರಿಗೆ ಇಲಾಖೆ ಸೂಚಿಸಿದೆ.
ವಾಯಿದೆ ಗಡುವಿಗೆ ಇನ್ನೂ 16 ದಿನವಷ್ಟೇ ಬಾಕಿ ಇದೆ. ಇದಕ್ಕೂ ಮೊದಲು ಆಧಾರ್- ಪ್ಯಾನ್ ಜೋಡಣೆಗೆ ಮಾರ್ಚ್ 31 ಅಂತಿಮ ಗಡುವು ನೀಡಿತ್ತು. ನಿರೀಕ್ಷಿತ ಪ್ರಮಾಣದಲ್ಲಿ ಜನತೆ ಸ್ಪಂದಿಸದೇ ಇರುವುದರಿಂದ ಕೊನೆಯ ದಿನಾಂಕವನ್ನು ಸೆಪ್ಟೆಂಬರ್ 30ಕ್ಕೆ ವಿಸ್ತರಿಸಿದೆ.
ಕಳೆದ ಕೆಲ ತಿಂಗಳ ಹಿಂದೆಷ್ಟೇ ಸುಪ್ರೀಂಕೋರ್ಟ್ ಕೂಡ ಆದಾಯ ತೆರಿಗೆ ಕಾಯ್ದೆ, ಸೆಕ್ಷನ್ 139ಎಎ ಅನ್ವಯ ಪ್ಯಾನ್-ಆಧಾರ್ ಜೋಡಣೆ ಕಡ್ಡಾಯವೆಂದು ಆದೇಶ ಹೊರಡಿಸಿತ್ತು.
ಜೋಡಣೆ ಮಾಡುವ ವಿಧಾನ
* https://www.incometaxindiaefiling.gov.ingಗೆ ಭೇಟಿ ನೀಡಿ
* ಮುಖಪುಟದ ಎಡಭಾಗದಲ್ಲಿನ ಕೆಂಪು ಅಕ್ಷರದ ಲಿಂಕ್ ಆಧಾರ್ (Link Aadhar) ಆಯ್ಕೆ ಕ್ಲಿಕ್ ಮಾಡಿ
* ಲಿಂಕ್ ಆಧಾರ್ ಡೈಲಾಗ್ ಬಾಕ್ಸ್ ತೆರೆದುಕೊಳ್ಳುತ್ತದೆ.
* ಡೈಲಾಗ್ ಬಾಕ್ಸ್ನಲ್ಲಿ ಸೂಚಿಸಲಾದ ಪ್ಯಾನ್ ನಂ, ಆಧಾರ್ ನಂಬರ್, ಆಧಾರ್ ಕಾರ್ಡ್ನಲ್ಲಿ ನಮೋದಿತ ಹೆಸರು ಭರ್ತಿ ಮಾಡಿ