ವಾಷಿಂಗ್ಟನ್: ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅವರು ಅಮೆರಿಕ ಜೊತೆಗಿನ ಉನ್ನತ ಮಟ್ಟದ ಭೇಟಿಗೆ ಸಜ್ಜಾಗುತ್ತಿದ್ದಂತೆ, ವಾಷಿಂಗ್ಟನ್ ಮತ್ತು ಬೀಜಿಂಗ್ ನಡುವಿನ ವ್ಯವಹಾರಗಳ ನಿರ್ವಹಣೆಯನ್ನು ಆರ್ಥಿಕ ತಜ್ಞರು ಡಬಲ್ ಗೇಮ್ಗೆ ಹೋಲಿಸಿ ಕುಹಕವಾಡಿದ್ದಾರೆ.
ಚೀನಾದ ಪರಮಾಪ್ತ ರಾಷ್ಟ್ರವಾದ ಪಾಕ್ ಬೀಜಿಂಗ್ನ ಪ್ರತಿ ಕಾರ್ಯತಂತ್ರದ ಗುರಿ ಮತ್ತು ಅದರ ಪ್ರಾಬಲ್ಯ ನಾಯಕತ್ವದ ಜೊತೆಗಿದ್ದು, ಅದಕ್ಕೆ ಬೆಂಬಲಿಸಿ ಸಹಕಾರ ನೀಡಿಕೊಂಡು ಬರುತ್ತಿದೆ.
ಚೀನಾದೊಂದಿಗೆ ಇಂತಹ ಬಂಧನ ಹೊಂದಿರುವ ಪಾಕ್, ಅಮೆರಿಕದಿಂದ ತನಗೆ ಅಗತ್ಯವಾದ ಆರ್ಥಿಕ ಮತ್ತು ಮಿಲಿಟರಿ ನೆರವಿನಿಂದ ದೊರೆಯಬಹುದಾದ ಸಾಣೆಕಲ್ಲಿನ ಅವಕಾಶವನ್ನು ತಪ್ಪಿಸಿಕೊಳ್ಳಲು ಬಯಸುವುದಿಲ್ಲ. ಇದೊಂದು ರೀತಿಯಲ್ಲಿ ಚೀನಾ ಜತೆಗೆ ಮದುವೆ, ಅಮೆರಿಕದೊಂದಿಗೆ ಸಂಬಂಧ ಎಂಬುವಂತಿದೆ ಎಂದು ಆರ್ಥಿಕ ತಜ್ಞರು ವಿಶ್ಲೇಷಿಸುತ್ತಿದ್ದಾರೆ.
ಆರ್ಥಿಕ ಪ್ರಕ್ಷುಬ್ಧತೆಯನ್ನು ಎದುರಿಸುತ್ತಿರುವ ಪಾಕಿಸ್ತಾನಕ್ಕೆ ಅಮೆರಿಕದಿಂದ ಸಿಗುವ ಆರ್ಥಿಕ ಮತ್ತು ಮಿಲಿಟರಿ ನೆರವು ಅಗತ್ಯವಾಗಿದೆ. ಪಾಕ್ ಒಳಗೆ ಚೀನಾ ಹೂಡಿಕೆಗಳ ಸಂಬಂಧಿಸಿದಂತೆ ಅಮೆರಿಕ ಪರಿಶೀಲನೆಗೆ ಮುಂದಾಗಬಹುದು. ಮುಖ್ಯವಾಗಿ ಚೀನಾ- ಪಾಕಿಸ್ತಾನದ ಆರ್ಥಿಕ ಕಾರಿಡಾರ್ ಬಗ್ಗೆ ಎಂದು ಪಾಕಿಸ್ತಾನದಿಂದ ಗಡಿಪಾರಾಗಿ ಪ್ಯಾರಿಸ್ನಲ್ಲಿರುವ ಪತ್ರಕರ್ತ ತಾಹಾ ಸಿದ್ಧಿಕಿ ಎಚ್ಚರಿಸಿದ್ದಾರೆ.
ಪಾಕ್ ನೆಲದಲ್ಲಿ ಚೀನಾದ ವಿಸ್ತರಣೆಯ ಹೆಜ್ಜೆಗುರುತುಗಳನ್ನು ಅಮೆರಿಕ ನಿರ್ಬಂಧಿಸಲು ಬಯಸುತ್ತದೆ. ಇಂತಹ ಸಂದರ್ಭದಲ್ಲಿ ಪಾಕಿಸ್ತಾನವು ಡಬಲ್ ಗೇಮ್ ಆಡಬಹುದು. ಇಸ್ಲಾಮಾಬಾದ್ನೊಂದಿಗೆ ತೊಡಗಿಸಿಕೊಂಡಿರುವ ಅಮೆರಿಕ ಮತ್ತು ಚೀನಾ ಇಬ್ಬರೂ ಗರಿಷ್ಠ ಆರ್ಥಿಕ ಲಾಭ ಪಡೆಯಲು ಬಯಸುತ್ತಾರೆ. ಈ ಮೂಲಕ ಭೌಗೋಳಿಕ ಸ್ಥಾನದ ಗಿಟ್ಟಿಸಿಕೊಳ್ಳುತ್ತಾರೆ ಎಂದು ಸಿದ್ಧಿಕಿ ವಿಶ್ಲೇಷಿಸಿದ್ದಾರೆ.