ಕರ್ನಾಟಕ

karnataka

ETV Bharat / business

ಚೀನಾ ತಾಳಕ್ಕೆ ಪಾಕ್​​ ಏಕೆ ಕುಣಿಯುತ್ತೆ... ಕೊನೆಗೂ ಬಹಿರಂಗವಾಯ್ತು ಕಾರಣ - Pak

ಮುಂದಿನ ಮೂರು ವರ್ಷಗಳಲ್ಲಿ ಪಾಕ್​ ಚೀನಾಕ್ಕೆ ಅಂತಾರಾಷ್ಟ್ರೀಯ ಹಣಕಾಸು ನಿಧಿಗೆ(ಐಎಂಎಫ್) ನೀಡಬೇಕಾದ ಮೊತ್ತಕ್ಕಿಂತ ಎರಡು ಪಟ್ಟು ಹೆಚ್ಚು ಸಾಲದ ಹಣ ಮರುಪಾವತಿಸಬೇಕಾಗಿದೆ. ವಿದೇಶಿ ವಿನಿಮಯ ಸಂಗ್ರಹ ಹೆಚ್ಚಿಸಲು ಮತ್ತು ಹಣಕಾಸಿನ ಅಂತರ ನಿವಾರಿಸಲು ಸಾಲದ ಪ್ರಮಾಣ ಹೆಚ್ಚಳವಾಗುತ್ತಿದೆ.

ಸಾಂದರ್ಭಿಕ ಚಿತ್ರ

By

Published : Oct 3, 2019, 12:49 PM IST

ನವದೆಹಲಿ:ಪಾಕಿಸ್ತಾನವು ಸ್ವತಂತ್ರ ರಾಷ್ಟ್ರವಾದರೂ ತನ್ನ ನೆರೆಯ ಚೀನಾ ಆಣತಿಯಂತೆ ನಡೆದುಕೊಂಡು ಬರುತ್ತಿದೆ. ಇದಕ್ಕೆ ಮುಖ್ಯ ಕಾರಣ ಏನು ಎಂಬುದು ಈಗ ಸ್ಪಷ್ಟವಾಗಿ ಬಹಿರಂಗವಾಗಿದೆ.

ಮುಂದಿನ ಮೂರು ವರ್ಷಗಳಲ್ಲಿ ಪಾಕ್​ ಚೀನಾಕ್ಕೆ ಅಂತಾರಾಷ್ಟ್ರೀಯ ಹಣಕಾಸು ನಿಧಿಗೆ ನೀಡಬೇಕಾದ ಮೊತ್ತಕ್ಕಿಂತ ಎರಡು ಪಟ್ಟು ಹೆಚ್ಚು ಸಾಲದ ಹಣ ಮರುಪಾವತಿಸಬೇಕಾಗಿದೆ. ವಿದೇಶಿ ವಿನಿಮಯ ಸಂಗ್ರಹ ಹೆಚ್ಚಿಸಲು ಮತ್ತು ಹಣಕಾಸಿನ ಅಂತರ ನಿವಾರಿಸಲು ಸಾಲದ ಪ್ರಮಾಣ ಹೆಚ್ಚಳವಾಗುತ್ತಿದೆ.

ಐಎಂಎಫ್ ಅನ್ವಯ, ದಕ್ಷಿಣ ಏಷ್ಯಾದ ಕೆಲ ರಾಷ್ಟ್ರಗಳು 2022ರ ಜೂನ್ ವೇಳೆಗೆ ಚೀನಾಕ್ಕೆ 6.7 ಬಿಲಿಯನ್ ಡಾಲರ್​ನಷ್ಟು​ (₹ 47 ಸಾವಿರ ಕೋಟಿ) ವಾಣಿಜ್ಯ ಸಾಲ ನೀಡಬೇಕಿದೆ. ಇಸ್ಲಾಮಾಬಾದ್ ಇದೇ ಅವಧಿಯಲ್ಲಿ ಬಹುಪಕ್ಷೀಯ ಸಾಲಗಾರನಿಗೆ 2.8 ಬಿಲಿಯನ್ ಡಾಲರ್​ (₹ 19 ಸಾವಿರ ಕೋಟಿ) ಸಾಲ ಪಾವತಿಸಬೇಕಾಗಿದೆ. ಚೀನಾದ ಸಾಲದ ಒತ್ತಡಕ್ಕೆ ಒಳಗಾಗದಿರಲು ಅದರ ಆಣತಿಯಂತೆ ಪಾಕಿಸ್ತಾನ ನಡೆದುಕೊಳ್ಳುತ್ತಿದೆ ಎಂಬ ಮಾಹಿತಿ ಹೊರಬಿದ್ದಿದೆ.

ABOUT THE AUTHOR

...view details