ಕರ್ನಾಟಕ

karnataka

ಪಾಕ್​ಗೆ ಭಾರತೀಯ ಎಲೆಕ್ಟ್ರಾನಿಕ್ ಮೀಡಿಯಾ ಭಯ: ಆನ್‌ಲೈನ್ ಸಬ್​ಸ್ಕ್ರೈಬ್​ಗೆ ನಿಷೇಧ!

By

Published : Nov 13, 2020, 9:36 PM IST

ಡಿಟಿಹೆಚ್ ಸೌಲಭ್ಯ ಹೊಂದಿರುವವರು ಹೆಚ್ಚಾಗಿ ಭಾರತೀಯ ಮೀಡಿಯಾಗಳ ಕಂಟೆಂಟ್​​ ಬಳಸುತ್ತಿದ್ದಾರೆ. ಅವರು ಆನ್‌ಲೈನ್ ಪಾವತಿ ಮಾಡುತ್ತಾರೆ. ಚಂದಾದಾರರು ಪಾಕಿಸ್ತಾನದಿಂದ ನೇರ ಪಾವತಿಸಲು ಸಾಧ್ಯವಿಲ್ಲ. ಆದರೆ ಭಾರತೀಯ ಪೂರೈಕೆದಾರರು ಯುನೈಟೆಡ್ ಅರಬ್ ಎಮಿರೇಟ್ಸ್‌ನಂತಹ ಇತರ ದೇಶಗಳಿಂದ ಪಾವತಿ ಪಡೆಯಬಹುದಾಗಿದೆ.

media
ಮೀಡಿಯಾ

ಇಸ್ಲಾಮಾಬಾದ್​:ಭಾರತೀಯ ಮೂಲದ ಎಲೆಕ್ಟ್ರಾನಿಕ್ ಮೀಡಿಯಾ ಕಂಟೆಂಟ್​ ಚಂದಾದಾರಿಕೆಯ ಆನ್‌ಲೈನ್ ಪಾವತಿಗಳನ್ನು ತಕ್ಷಣ ನಿಷೇಧಿಸುವಂತೆ ಪಾಕಿಸ್ತಾನ ಸರ್ಕಾರವು ತನ್ನ ಬ್ಯಾಂಕ್‌ಗಳಿಗೆ ಸೂಚಿಸಿದೆ ಎಂದು ಮಾಧ್ಯಮ ವರದಿ ತಿಳಿಸಿದೆ.

ನವೆಂಬರ್ 9ರಂದು ಕ್ಯಾಬಿನೆಟ್​​ನಲ್ಲಿ ನಿಷೇಧ ಬಗ್ಗೆ ನಿರ್ಧಾರ ತೆಗೆದುಕೊಂಡಿದೆ ಎಂದು ಡಾನ್ ಪತ್ರಿಕೆ ವರದಿ ಮಾಡಿದೆ. ನವೆಂಬರ್ 13ರ ಒಳಗೆ ದೇಶದ ಕೇಂದ್ರ ಬ್ಯಾಂಕ್ ಆಗಿರುವ ಸ್ಟೇಟ್ ಬ್ಯಾಂಕ್ ಆಫ್ ಪಾಕಿಸ್ತಾನಕ್ಕೆ ಈ ಕುರಿತು ವರದಿ ಸಲ್ಲಿಸುವಂತೆ ಬ್ಯಾಂಕಿಂಗ್ ಅಧಿಕಾರಿಗಳನ್ನು ಸರ್ಕಾರ ಕೋರಿದೆ.

ಪಾಕಿಸ್ತಾನದ ಸರ್ಕಾರದ ಕ್ಯಾಬಿನೆಟ್ ವಿಭಾಗದ ಪತ್ರವೊಂದನ್ನು ನಾವು ಸ್ವೀಕರಿಸಿದ್ದೇವೆ. ಕ್ರೆಡಿಟ್ ಕಾರ್ಡ್‌ಗಳು ಸೇರಿದಂತೆ ವಿವಿಧ ರೀತಿಯ ಪಾವತಿಗಳನ್ನು ನಿಲ್ಲಿಸುವಂತೆ ನಮಗೆ ಸೂಚನೆ ನೀಡಿದ್ದಾರೆ. ಪಾಕಿಸ್ತಾನದಲ್ಲಿ ಭಾರತೀಯ ಕಂಟೆಂಟ್​ ಚಂದಾದಾರರಾಗಲು ಹಲವು ಮೀಡಿಯಾಗಳು ಆಹ್ವಾನ ನೀಡುತ್ತಿವೆ.

ಪಾಕಿಸ್ತಾನದಲ್ಲಿ ಈಗಾಗಲೇ ಭಾರತೀಯ ಕಂಟೆಂಟ್​​ ನಿಷೇಧಿಸಲಾಗಿದೆ. ಹೊಸ ಸುತ್ತೋಲೆ ಡೈರೆಕ್ಟ್ ಟು ಹೋಮ್ (ಡಿಟಿಎಚ್) ಸೇವೆಗೆ ಆನ್‌ಲೈನ್ ಪಾವತಿ ತಡೆಯೊಡ್ಡಲಿದೆ ಎಂದು ಪಾಕಿಸ್ತಾನ ಎಲೆಕ್ಟ್ರಾನಿಕ್ ಮೀಡಿಯಾ ರೆಗ್ಯುಲೇಟರಿ ಅಥಾರಿಟಿ (ಪೆಮ್ರಾ) ಮಾಜಿ ಅಧ್ಯಕ್ಷ ಅಬ್ಸರ್ ಆಲಂ ಹೇಳಿದ್ದಾರೆ.

ಡಿಟಿಹೆಚ್ ಸೌಲಭ್ಯ ಹೊಂದಿರುವವರು ಹೆಚ್ಚಾಗಿ ಭಾರತೀಯ ಮೀಡಿಯಾಗಳ ಕಂಟೆಂಟ್​​​ ಬಳಸುತ್ತಿದ್ದಾರೆ. ಅವರು ಆನ್‌ಲೈನ್ ಪಾವತಿ ಮಾಡುತ್ತಾರೆ. ಚಂದಾದಾರರು ಪಾಕಿಸ್ತಾನದಿಂದ ನೇರ ಪಾವತಿಸಲು ಸಾಧ್ಯವಿಲ್ಲ. ಆದರೆ ಭಾರತೀಯ ಪೂರೈಕೆದಾರರು ಯುನೈಟೆಡ್ ಅರಬ್ ಎಮಿರೇಟ್ಸ್‌ನಂತಹ ಇತರ ದೇಶಗಳಿಂದ ಪಾವತಿ ಪಡೆಯಬಹುದಾಗಿದೆ.

ABOUT THE AUTHOR

...view details