ನವದೆಹಲಿ:ಮಹಾಮಾರಿ ಕೊರೊನಾ ವೈರಸ್ನಿಂದಾಗಿ ಅನೇಕ ಕ್ಷೇತ್ರಗಳು ಆರ್ಥಿಕ ಸಂಕಷ್ಟಕ್ಕೊಳಗಾಗಿದ್ದು, ಇನ್ನಿಲ್ಲದ ತೊಂದರೆ ಅನುಭವಿಸಿವೆ. ಇದರ ಮಧ್ಯೆ ಹುರೂನ್ ಇಂಡಿಯಾ ಸಿದ್ಧಪಡಿಸಿರುವ ಪಟ್ಟಿವೊಂದರ ಪ್ರಕಾರ, ಭಾರತದಲ್ಲಿ 1,007 ವ್ಯಕ್ತಿಗಳ ಸಂಪತ್ತು 1 ಸಾವಿರ ಕೋಟಿ ರೂ. ಎಂದು ತಿಳಿದು ಬಂದಿದೆ.
ದೇಶದ 119 ನಗರಗಳ 1007 ವ್ಯಕ್ತಿಗಳ ಸಂಪತ್ತು ಒಂದು ಸಾವಿರ ಕೋಟಿ ರೂಪಾಯಿ ಅಥವಾ ಅದಕ್ಕಿಂತಲೂ ಹೆಚ್ಚು ಎಂದು ತಿಳಿದು ಬಂದಿದೆ.
- ರಿಲಯನ್ಸ್ ಇಂಡಸ್ಟ್ರೀಸ್ನ ಅಧ್ಯಕ್ಷ ಮುಖೇಶ್ ಅಂಬಾನಿ ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿ. ಕಳೆದ 10 ವರ್ಷಗಳಿಂದಲೂ ಭಾರತದ ಶ್ರೀಮಂತ ವ್ಯಕ್ತಿಗಳ ಪಟ್ಟಿಯಲ್ಲಿ ಮೊದಲನೇ ಸ್ಥಾನದಲ್ಲಿರುವ ಅಂಬಾನಿ, ಒಟ್ಟು ಸಂಪತ್ತು 7.18 ಲಕ್ಷ ಕೋಟಿ ರೂ. ಆಗಿದೆ.
- ನಂತರದ ಸ್ಥಾನದಲ್ಲಿ ಅದಾನಿ ಸಮೂಹದ ಗೌತಮ್ ಅದಾನಿ ಇದ್ದಾರೆ. ಅದಾನಿ 5.05 ಲಕ್ಷ ಕೋಟಿ ಸಂಪತ್ತು ಹೊಂದಿದ್ದು ಪ್ರತಿ ದಿನ 1.002 ಕೋಟಿ ರೂ. ಹಣ ಗಳಿಕೆ ಮಾಡ್ತಿದ್ದಾರೆಂದು ತಿಳಿದು ಬಂದಿದೆ.
- ಪಟ್ಟಿಯಲ್ಲಿನ 894 ವ್ಯಕ್ತಿಗಳ ಸಂಪತ್ತಿನಲ್ಲಿ ಹೆಚ್ಚಳವಾಗಿದ್ದು, ಉಳಿದಂತೆ ಪಟ್ಟಿಯಲ್ಲಿ 229 ಹೊಸ ಮುಖಗಳು ಸೇರ್ಪಡೆಯಾಗಿವೆ.