ಕರ್ನಾಟಕ

karnataka

ETV Bharat / business

ಹಣದುಬ್ಬರ ಹತೋಟಿಯಲ್ಲಿದ್ದು ಶೂನ್ಯಕ್ಕೆ ಹತ್ತಿರವಾಗಿದೆ: ಪ್ರಧಾನ ಆರ್ಥಿಕ ಸಲಹೆಗಾರ - ವಾಣಿಜ್ಯ ಸುದ್ದಿ

1991ರ ಭಾರತೀಯ ಆರ್ಥಿಕ ಬಿಕ್ಕಟ್ಟಿನೊಂದಿಗೆ ಹೋಲಿಕೆ ಮಾಡಿದ ಕೇಂದ್ರ ಸರ್ಕಾರದ ಪ್ರಧಾನ ಆರ್ಥಿಕ ಸಲಹೆಗಾರ, 1991ರಲ್ಲಿ ನಾವು ಸ್ಥೂಲ ಆರ್ಥಿಕ ಸಮತೋಲನದಲ್ಲಿ ಸ್ಥಗಿತತೆ ಹೊಂದಿದ್ದವು. ಅದು ಈಗ ಅಂತಹ ಸ್ಥಿತಿಯಲಿಲ್ಲ. ನಮ್ಮ ಹಣದುಬ್ಬರವನ್ನು ಚೆನ್ನಾಗಿ ನಿಯಂತ್ರಿಸಲಾಗಿದ್ದು, ಅದು ಶೂನ್ಯಕ್ಕೆ ಹತ್ತಿರದಲ್ಲಿದೆ ಎಂದರು.

Sanyal
ಸಂಜೀವ್ ಸನ್ಯಾಲ್

By

Published : Jul 9, 2020, 7:20 PM IST

ನವದೆಹಲಿ: ಭಾರತದ ಹಣದುಬ್ಬರವು ಉತ್ತಮವಾಗಿ ನಿಯಂತ್ರಿಸಲ್ಪಟ್ಟಿದೆ ಮತ್ತು ಶೂನ್ಯಕ್ಕೆ ಹತ್ತಿರವಾಗಿದೆ ಎಂದು ಗುರುವಾರ ನಡೆದ 'ಇಂಡಿಯಾ ಗ್ಲೋಬಲ್ ವೀಕ್ 2020' ವರ್ಚುವಲ್ ಫೋರಂನಲ್ಲಿ ಕೇಂದ್ರ ಸರ್ಕಾರದ ಪ್ರಧಾನ ಆರ್ಥಿಕ ಸಲಹೆಗಾರ ಸಂಜೀವ್ ಸನ್ಯಾಲ್ ಹೇಳಿದ್ದಾರೆ.

ನಮ್ಮ ಹಣದುಬ್ಬರವನ್ನು ಚೆನ್ನಾಗಿ ನಿಯಂತ್ರಿಸಲಾಗಿದೆ. ಇದು ಶೂನ್ಯಕ್ಕೆ ಹತ್ತಿರದಲ್ಲಿದೆ. ವಿದೇಶಿ ವಿನಿಮಯ ಸಂಗ್ರಹವು ಅರ್ಧ ಟ್ರಿಲಿಯನ್ ಡಾಲರ್‌ಗೆ ಹತ್ತಿರದಲ್ಲಿದೆ ಎಂದು ಸನ್ಯಾಲ್ ತಿಳಿಸಿದರು.

1991ರ ಭಾರತೀಯ ಆರ್ಥಿಕ ಬಿಕ್ಕಟ್ಟಿನೊಂದಿಗೆ ಹೋಲಿಕೆ ಮಾಡಿದ ಸನ್ಯಾಲ್, 1991ರಲ್ಲಿ ನಾವು ಸ್ಥೂಲ ಆರ್ಥಿಕ ಸಮತೋಲನದಲ್ಲಿ ಸ್ಥಗಿತತೆ ಹೊಂದಿದ್ದವು. ಅದು ಈಗ ಅಂತಹ ಸ್ಥಿತಿಯಲಿಲ್ಲ. ನಮ್ಮ ಹಣದುಬ್ಬರವನ್ನು ಚೆನ್ನಾಗಿ ನಿಯಂತ್ರಿಸಲಾಗಿದ್ದು, ಅದು ಶೂನ್ಯಕ್ಕೆ ಹತ್ತಿರದಲ್ಲಿದೆ ಎಂದರು.

ಕೆಲವು ವಲಯಗಳ ಭಾಗಗಳಲ್ಲಿ ಆರ್ಥಿಕತೆಯು ಸ್ಥಿರವಾಗಿದೆ. ನಾವು ದೊಡ್ಡ ಪ್ರಮಾಣದ ಬದಲಾವಣೆಗಳನ್ನು ಮಾಡುತ್ತಿದ್ದೇವೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ಮಟ್ಟದಲ್ಲಿ ಸಾಕಷ್ಟು ಕೆಲಸಗಳಿವೆ ಎಂದು ಹೇಳಿದರು.

ABOUT THE AUTHOR

...view details