ನವದೆಹಲಿ:ಜಗತ್ತಿನಲ್ಲಿ ಉತ್ಪಾದನೆಯಾಗುವ ಒಟ್ಟಾರೆ ಆಹಾರ ಪದಾರ್ಥಗಳಲ್ಲಿ ಮೂರನೇ ಒಂದು ಭಾಗದಷ್ಟು ಆಹಾರ ಜನರ ಹೊಟ್ಟೆ ತಲುಪದೆ ತಿಪ್ಪೆ ಸೇರುತ್ತಿದೆ. ವಿಶ್ವದಾದ್ಯಂತ ಪ್ರತಿ ವರ್ಷ ಸುಮಾರು 1.3 ಶತಕೋಟಿ ಟನ್ನಷ್ಟು ತಿನ್ನಲು ಅರ್ಹವಾಗಿರುವ ಆಹಾರ ಪದಾರ್ಥಗಳು ನಾಶವಾಗುತ್ತಿವೆ ಎಂದು ವಿಶ್ವಸಂಸ್ಥೆಯ ಅರಣ್ಯೀಕರಣ ತಡೆ ಒಪ್ಪಂದ (ಯುಎನ್ಸಿಸಿಡಿ) ವರದಿ ತಿಳಿಸಿದೆ.
ಜಗತ್ತಿನಲ್ಲಿ ಎಲ್ಲರಿಗೂ ಸಾಕಾಗುಷ್ಟು ಅನ್ನವಿದೆ. ಆದರೆ, ಅದರ ಬಳಕೆ ಸಮರ್ಪಕವಾಗಿ ಆಗುತ್ತಿಲ್ಲ. ಹಸಿದವರಿಗೆ ಸರಿಯಾಗಿ ಆಹಾರ ವಿತರಣೆ ಆಗದೆ ತಿಂದವರೇ ತಿನ್ನುತ್ತಿದ್ದಾರೆ. ಇದ್ದವರಿಗೆ ಎಲ್ಲವೂ ಲಭ್ಯವಾಗುತ್ತಿದೆ. ಇಲ್ಲದವರಿಗೆ ಏನೂ ಇಲ್ಲ ಎಂಬುವಂತಿದೆ ಬಡ ರಾಷ್ಟ್ರಗಳ ಆಹಾರ ಪೂರೈಕೆಯ ಸ್ಥಿತಿ. ಅಭಿವೃದ್ಧಿ ಹೊಂದಿದ ರಾಷ್ಟ್ರಗಳು ತಿನ್ನಲು ಯೋಗ್ಯವಿರುವ ಆಹಾರವನ್ನು ಪೋಲು ಮಾಡುತ್ತಿವೆ. ಬಡ ರಾಷ್ಟ್ರಗಳಲ್ಲಿ ಆಹಾರ ಪದರ್ಥಗಳು ನಾಶವಾಗುತ್ತಿದ್ದು, ಸರ್ಮಪಕವಾಗಿ ಬಳಕೆಯಾಗದೆ ಹಸಿದವರ ಹೊಟ್ಟೆ ಸೇರುತ್ತಿಲ್ಲ ಎಂದು ವರದಿಗಳು ಹೇಳುತ್ತಿವೆ.