ನವದೆಹಲಿ:ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಮಹತ್ವಾಕಾಂಕ್ಷಿ 'ಒನ್ ನೇಷನ್ ಒನ್ ರೇಷನ್ ಕಾರ್ಡ್' ಯೋಜನೆಯನ್ನು ಈವರೆಗೆ 20 ರಾಜ್ಯಗಳಲ್ಲಿ ಜಾರಿಗೆ ತರಲಾಗಿದೆ. ಕೇಂದ್ರ ಸರ್ಕಾರ ಮುಂದಿನ ವರ್ಷದ ಮಾರ್ಚ್ 31ರೊಳಗೆ ಇಡೀ ದೇಶವನ್ನು ಗುರಿಯಾಗಿಸಿಕೊಂಡಿದೆ.
ಒಡಿಶಾ, ಸಿಕ್ಕಿಂ ಮತ್ತು ಮಿಜೋರಾಂ 'ಒನ್ ನೇಷನ್ ಒನ್ ರೇಷನ್ ಕಾರ್ಡ್' ಯೋಜನೆಗೆ ಸೇರ್ಪಡೆಯಾದ ನಂತರ 20 ರಾಜ್ಯಗಳು ಈಗ ಐಎಂಪಿಡಿಎಸ್ಗೆ (ಇಂಟಿಗ್ರೇಟೆಡ್ ಮ್ಯಾನೇಜ್ಮೆಂಟ್ ಆಫ್ ಪಬ್ಲಿಕ್ ಡಿಸ್ಟ್ರಿಬ್ಯೂಷನ್ ಸಿಸ್ಟಮ್) ಸಂಪರ್ಕ ಹೊಂದಿವೆ ಎಂದು ಕೇಂದ್ರ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವ ರಾಮ್ ವಿಲಾಸ್ ಪಾಸ್ವಾನ್ ಹೇಳಿದ್ದಾರೆ.