ಕರ್ನಾಟಕ

karnataka

ETV Bharat / business

ಇರಾನ್​- ಅಮೆರಿಕ ಕಿತ್ತಾಟಕ್ಕೆ ಸೀತಾರಾಮನ್​ ಬಜೆಟ್​ ಲೆಕ್ಕಾಚಾರದಲ್ಲಿ ಏರಿಳಿತ! -

ದುಬಾರಿ ತೈಲವು ಚಾಲ್ತಿ ಖಾತೆ ಕೊರತೆ ಹೆಚ್ಚಿಸಿಲಿದೆ. ಡಾಲರ್ ಎದುರು ರೂಪಾಯಿ ವಿನಿಮಯ ದರ ಇನ್ನಷ್ಟು ಕಡಿಮೆಯಾಗಲಿದೆ. ಎರಡನೇ ಅವಧಿಗೆ ಪೂರ್ಣ ಪ್ರಮಾಣದ ಬಜೆಟ್​ ಮಂಡಿಸಲಿರುವ ಕೇಂದ್ರ ಸರ್ಕಾರದ ಲೆಕ್ಕಾಚಾರದಲ್ಲಿ ಏರುಪೇರು ಆಗುವ ಸಾಧ್ಯತೆ ಇದೆ.

ಸಾಂದರ್ಭಿಕ ಚಿತ್ರ

By

Published : Jun 22, 2019, 6:22 AM IST

ನವದೆಹಲಿ:ಜಾಗತಿಕ ಮಾರುಕಟ್ಟೆಯಲ್ಲಿ ಬ್ರೆಂಟ್​ ಕಚ್ಚಾ ತೈಲದ ಬೆಲೆಯು ಪ್ರತಿ ಬ್ಯಾರೆಲ್​ಗೆ 64.78 ಡಾಲರ್​ಗೆ ತಲುಪಿದ್ದು, ದೇಶದ ಚಾಲ್ತಿ ಖಾತೆ ಕೊರತೆ ಹೆಚ್ಚಿಸಲಿದೆ.

ತೈಲ ಬೆಲೆಯಲ್ಲಿ ದಿಢೀರನೇ ಏರಿಕೆಗೊಂಡಿದ್ದರಿಂದ ಭಾರತವು ಆಮದು ಮಾಡಿಕೊಳ್ಳುವ ತೈಲಕ್ಕೆ ಹೆಚ್ಚಿನ ಹಣ ಪಾವತಿಸಬೇಕಾಗುತ್ತದೆ. ಇರಾನ್ ಮೇಲೆ ಅಮರಿಕ ದಿಗ್ಬಂಧನ ಹೇರಿದ್ದರಿಂದ ಬೇರೆ ರಾಷ್ಟ್ರಗಳಿಂದ ಭಾರತ ಆಮದು ಮಾಡಿಕೊಳ್ಳುತ್ತಿದೆ. ಒಟ್ಟು ಬೇಡಿಕೆಯ ಶೇ 84ರಷ್ಟು ತೈಲ ವಿದೇಶಗಳನ್ನೇ ಅವಲಂಬಿಸಿದೆ.

ತನ್ನ ಬೇಹುಗಾರಿಕಾ ಡ್ರೋನ್ ಅನ್ನು ಹೊಡೆದುರುಳಿಸಿದ ಇರಾನ್ ವಿರುದ್ಧ ಅಮೆರಿಕ ಪ್ರತೀಕಾರ ಕೈಗೊಳ್ಳುವ ಸಾಧ್ಯತೆ ಅಧಿಕವಾಗಿರುವುದರಿಂದ ತೈಲದ ದರ ಏರಿಕೆ ಹಾದಿಯಲ್ಲಿ ಇದೆ. ತೈಲ ಬೆಲೆಯು ಎರಡು ದಿನಗಳ ಹಿಂದೆಯಷ್ಟೇ ಏಕಾಏಕಿ ಶೇ 5ರಷ್ಟು ಏರಿಕೆ ಕಂಡಿದೆ. ಈ ಮೂಲಕ ಕಳೆದ ವಾರದಲ್ಲಿ ಶೇ 9ರಷ್ಟು ತೈಲ ಬೆಲೆ ಆದಂತ್ತಾಗಿದೆ.

ತೈಲ ಬೆಲೆಯು ಪ್ರತಿ ಬ್ಯಾರೆಲ್​ಗೆ 10 ಡಾಲರ್ ಏರಿಕೆಯಾದರೆ ಅದರಿಂದ ಆರ್ಥಿಕ ವೃದ್ಧಿ ದರವು ಶೇ 0.2ರಿಂದ ಶೇ 0.3ರಷ್ಟು ಕಡಿಮೆಯಾಗಲಿದೆ. ದುಬಾರಿ ತೈಲವು ಚಾಲ್ತಿ ಖಾತೆ ಕೊರತೆ ಹೆಚ್ಚಿಸಿಲಿದೆ. ಡಾಲರ್ ಎದುರು ರೂಪಾಯಿ ವಿನಿಮಯ ದರ ಇನ್ನಷ್ಟು ಕಡಿಮೆಯಾಗಲಿದೆ. ಎರಡನೇ ಅವಧಿಗೆ ಪೂರ್ಣ ಪ್ರಮಾಣದ ಬಜೆಟ್​ ಮಂಡಿಸಲಿರುವ ಕೇಂದ್ರ ಸರ್ಕಾರಕದ ಲೆಕ್ಕಾಚಾರದಲ್ಲಿ ಏರುಪೇರು ಆಗುವ ಸಾಧ್ಯತೆ ಇದೆ ಎಂದು ಆರ್ಥಿಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

For All Latest Updates

TAGGED:

ABOUT THE AUTHOR

...view details