ನವದೆಹಲಿ:ಸೌಂದರ್ಯವರ್ಧಕ ಸಾಧನಗಳ ಆನ್‌ಲೈನ್ ಮಾರುಕಟ್ಟೆ ಆಗಿರುವ ನೈಕಾ ಕಂಪನಿಯ ಷೇರುಗಳು ಬುಧವಾರ ಷೇರು ಮಾರುಕಟ್ಟೆ ಪ್ರವೇಶಿಸಿದ್ದು, ಐಪಿಒ ಸಂದರ್ಭದಲ್ಲಿ ನಿಗದಿ ಮಾಡಿದ್ದ ಬೆಲೆಗಿಂತ ಶೇಕಡ 96ರಷ್ಟು ಮೌಲ್ಯವನ್ನು ಹೆಚ್ಚಿಸಿಕೊಂಡು ಹೂಡಿಕೆದಾರರಿಗೆ ಭಾರಿ ಲಾಭ ತಂದುಕೊಟ್ಟಿದೆ. ಒಂದೇ ದಿನದಲ್ಲಿ ನೈಕಾ ಷೇರುಗಳ ಬೆಲೆ ಬರೋಬ್ಬರಿ 2001 ರೂ ನಂತೆ ವಹಿವಾಟು ನಡೆಸಿ, ಈ ಷೇರು ಕೊಂಡವರಿಗೆ ಭರ್ಜರಿ ಲಾಭವನ್ನೇ ಮಾಡಿಕೊಟ್ಟಿದೆ.
ಕಂಪನಿಯ ಷೇರು, ಷೇರು ಮಾರುಕಟ್ಟೆಯಲ್ಲಿ ಬುಧವಾರ ಬೆಳಗ್ಗೆ ₹ 2,001ರಂತೆ ವಹಿವಾಟು ಆರಂಭಿಸಿತು. ಈ ಮೂಲಕ ಷೇರುಗಳ ಮೌಲ್ಯವು ಐಪಿಒ ಸಂದರ್ಭದಲ್ಲಿ ನಿಗದಿಯಾಗಿದ್ದ 1125 ರೂ. ಶೇಕಡಾ 77ರಷ್ಟು ಹೆಚ್ಚು ಮೌಲ್ಯವನ್ನು ಆರಂಭದಲ್ಲಿಯೇ ಪಡೆದುಕೊಂಡು ಮಾರುಕಟ್ಟೆಯಲ್ಲಿ ಸದ್ದು ಮಾಡಿದೆ. ನಿನ್ನೆಯ ವಹಿವಾಟಿನಲ್ಲಿ ನೈಕಾ ಕಂಪನಿ ಷೇರುಗಳ ಬೆಲೆ ಒಂದು ಹಂತದಲ್ಲಿ ಶೇ 99.83ರವರೆಗೂ ಹೆಚ್ಚಳ ಕಂಡಿತ್ತು.