ಕರ್ನಾಟಕ

karnataka

ETV Bharat / business

ನೋಟು ರದ್ದತಿ ಬಳಿಕ ಚಲಾವಣೆಯ ನೋಟುಗಳು ಇಳಿಕೆ: ಕೇಂದ್ರ ಸಚಿವ ಅನುರಾಗ್ ಠಾಕೂರ್ - NIC

ದೇಶದ ಆರ್ಥಿಕತೆಯಲ್ಲಿ ಚಲಾವಣೆಯಲ್ಲಿರುವ ನೋಟುಗಳು 2014ರ ಅಕ್ಟೋಬರ್‌ನಿಂದ 2016ರ ಅಕ್ಟೋಬರ್‌ವರೆಗೆ ವರ್ಷದಿಂದ ವರ್ಷಕ್ಕೆ ಸರಾಸರಿ ಶೇ 14.51ರಷ್ಟು ಬೆಳವಣಿಗೆಯಾಗಿದೆ. ಈ ಬೆಳವಣಿಗೆಯ ದರದಲ್ಲಿ ಎನ್‌ಐಸಿಯು(Notes In Circulation) 2019ರ ನವೆಂಬರ್ 25ರ ವೇಳೆಗೆ 25,354.93 ಶತಕೋಟಿ ರೂ.ಗೆ ಏರಿಕೆ ಆಗಬೇಕಿತ್ತು. ಈ ದಿನಾಂಕದವರೆಗೆ ನೈಜ ಎನ್‌ಐಸಿ ಕೇವಲ 22,420 ಶತಕೋಟಿ ಆಗಿ 2,934.80 ಶತಕೋಟಿ ರೂ. ಇಳಿಕೆಯಾಗಿದೆ. ಇದು ನೋಟು ರದ್ದತಿ ಹಾಗೂ ಡಿಜಿಟಲೀಕರಣದ ಪರಿಣಾಮ ಎಂದು ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದೆ.

Notes
ನೋಟು

By

Published : Dec 3, 2019, 5:09 PM IST

ನವದೆಹಲಿ: ಆರ್ಥಿಕತೆಯಲ್ಲಿ ಚಲಾವಣೆಯಲ್ಲಿರುವ ನೋಟುಗಳು (ಎನ್‌ಐಸಿ) 2019ರ ನವೆಂಬರ್‌ನಲ್ಲಿ 22,420 ಶತಕೋಟಿ ರೂ.ಗೆ ಏರಿಕೆ ಆಗಿದ್ದು, 2016ರ ನವೆಂಬರ್ 4ರಂದು ಇವುಗಳ ಪ್ರಮಾಣ 17,741 ಶತಕೋಟಿ ರೂ.ನಷ್ಟಿದ್ವು. ಆದರೆ, 2014-2016ರ ಅವಧಿಗೆ ಹೋಲಿಸಿದರೆ ನೋಟು ರದ್ದತಿ ಬಳಿಕ ಎನ್​ಐಸಿ ಬೆಳವಣಿಗೆಯ ಪ್ರಮಾಣದಲ್ಲಿ ಇಳಿಕೆ ಕಂಡುಬಂದಿದೆ.

ಸಂಸತ್ತಿನಲ್ಲಿ ಪ್ರತಿಪಕ್ಷಗಳ ಪ್ರಶ್ನೆಗೆ ಉತ್ತರಿಸಿ ಮಾತನಾಡಿದ ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ ಅನುರಾಗ್ ಠಾಕೂರ್, ನೋಟು ರದ್ದತಿ ಮತ್ತು ಡಿಜಿಟಲ್ ನಗದು ಕ್ರಮಗಳಿಂದ ಚಲಾವಣೆಯಲ್ಲಿರುವ ನೋಟುಗಳಲ್ಲಿ 2,934.80 ಶತಕೋಟಿ ರೂ. ಕಡಿಮೆಯಾಗಿದೆ ಎಂದರು.

ಸರ್ಕಾರ ನೀಡಿದ ತರ್ಕವೆಂದರೆ, ಎನ್‌ಐಸಿಯು 2014ರ ಅಕ್ಟೋಬರ್‌ನಿಂದ 2016ರ ಅಕ್ಟೋಬರ್‌ವರೆಗೆ ವರ್ಷದಿಂದ ವರ್ಷಕ್ಕೆ ಸರಾಸರಿ 14.51ರಷ್ಟು ಬೆಳವಣಿಗೆಯ ದರದಲ್ಲಿ ಬೆಳೆದಿದೆ. ಈ ಬೆಳವಣಿಗೆಯ ದರದಲ್ಲಿ ಎನ್‌ಐಸಿಯು 2019ರ ನವೆಂಬರ್ 25ರ ವೇಳೆಗೆ 25,354.93 ಶತಕೋಟಿ ರೂ.ಗೆ ಏರಿಕೆ ಆಗಬೇಕಿತ್ತು. ಈ ದಿನಾಂಕದವರೆಗೆ ನೈಜ ಎನ್‌ಐಸಿ ಕೇವಲ 22,420 ಶತಕೋಟಿ ಆಗಿ 2,934.80 ಶತಕೋಟಿ ರೂ. ಇಳಿಕೆಯಾಗಿದೆ. ನೋಟು ರದ್ದತಿ ಹಾಗೂ ಡಿಜಿಟಲೀಕರಣ ಪರಿಣಾಮ ಎಂದು ಸ್ಪಷ್ಟನೆ ನೀಡಿದೆ.

ಆರ್ಥಿಕತೆಯಿಂದ ಕಪ್ಪು ಹಣವನ್ನು ಹೊರಹಾಕುವ, ನಕಲಿ ಕರೆನ್ಸಿ ನೋಟುಗಳ ನಿರ್ಮೂಲನೆ, ಭಯೋತ್ಪಾದಕರಿಗೆ ಹಣಕಾಸಿನ ಮೂಲಗಳ ಕಡಿತ ಸೇರಿದಂತೆ ಹಲವು ಉದ್ದೇಶಗಳೊಂದಿಗೆ 2016ರ ನವೆಂಬರ್ 8ರಂದು ಗರಿಷ್ಠ ಮುಖಬೆಲೆಯ 1,000 ಮತ್ತು 500 ರೂ. ನೋಟುಗಳನ್ನು ರದ್ದುಗೊಳಿಸಲು ಸರ್ಕಾರ ನಿರ್ಧರಿಸಿತ್ತು ಎಂದು ಠಾಕೂರ್ ಹೇಳಿದರು.

ತೆರಿಗೆ ಪಾವತಿ ಹೆಚ್ಚಳ ಮತ್ತು ಉದ್ಯೋಗ ಸೃಷ್ಟಿಯನ್ನು ವಿಸ್ತರಿಸುವ ಉದ್ದೇಶದಿಂದ ಔಪಚಾರಿಕವಲ್ಲದ ಆರ್ಥಿಕತೆಯನ್ನು ಔಪಚಾರಿಕವಾಗಿ ಪರಿವರ್ತಿಸಲು ಹಾಗೂ ನಗದು ಆರ್ಥಿಕತೆಯನ್ನು ಕಡಿಮೆ ಮಾಡಿ ಡಿಜಿಟಲೀಕರಣ ಉತ್ತೇಜಿಸಲು ಈ ನಡೆ ತೆಗೆದುಕೊಳ್ಳಲಾಯಿತು ಎಂದು ಸಚಿವರು ಸ್ಪಷ್ಟಪಡಿಸಿದರು.

ABOUT THE AUTHOR

...view details