ನವದೆಹಲಿ:ಕೇಂದ್ರ ಸರ್ಕಾರಿ ನೌಕರರ ನಿವೃತ್ತಿ ವಯಸ್ಸನ್ನು ಬದಲಾಯಿಸುವ ಯಾವುದೇ ಪ್ರಸ್ತಾಪವಿಲ್ಲ ಎಂದು ರಾಜ್ಯ ಸಿಬ್ಬಂದಿ ಸಚಿವ ಜಿತೇಂದ್ರ ಸಿಂಗ್ ಬುಧವಾರ ಸ್ಪಷ್ಟಪಡಿಸಿದ್ದಾರೆ.
30 ವರ್ಷಗಳ ಸೇವೆ ಬಳಿಕ ಸರ್ಕಾರಿ ನೌಕರರ ನಿವೃತ್ತಿ ಪ್ರಶ್ನೆಗೆ ಕೇಂದ್ರ ಉತ್ತರಿಸಿದ್ದು ಹೀಗೆ... - ಲೋಕಸಭೆ
30 ವರ್ಷಗಳ ಗರಿಷ್ಠ ಸೇವಾ ಅವಧಿ ಪೂರೈಸಿದ ನಂತರ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನೌಕರರನ್ನು ನಿವೃತ್ತಿ ಮಾಡುವ ಪ್ರಸ್ತಾಪವಿದೆಯೇ ಎಂದು ಕೇಂದ್ರವನ್ನು ಪ್ರಶ್ನಿಸಲಾಗಿತ್ತು. ಸರ್ಕಾರದ ಮುಂದೆ ಉದ್ಯೋಗಿಗಳ ನಿವೃತ್ತಿ ವಯಸ್ಸು ಬದಲಾಯಿಸುವ ಯಾವುದೇ ಪ್ರಸ್ತಾಪವಿಲ್ಲ ಎಂದು ಕೇಂದ್ರ ಸ್ಪಷ್ಟಪಡಿಸಿದೆ.
ಸರ್ಕಾರಿ ನೌಕರ
ಕೇಂದ್ರ ಸರ್ಕಾರಿ ನೌಕರರ ಮೇಲ್ವಿಚಾರಣೆಯ ವಯೋಮಿತಿ ಬದಲಾಯಿಸುವ ಪ್ರಸ್ತಾಪವಿಲ್ಲ. ರಾಜ್ಯ ಸರ್ಕಾರಿ ನೌಕರರನ್ನು ಆಯಾ ರಾಜ್ಯ ಸರ್ಕಾರಗಳು ರೂಪಿಸಿರುವ ನಿಯಮ / ನಿಬಂಧನೆಗಳಿಂದ ನಿಯಂತ್ರಿಸಲಾಗುತ್ತದೆ ಎಂದು ಅವರು ಲೋಕಸಭೆಗೆ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.
30 ವರ್ಷಗಳ ಗರಿಷ್ಠ ಸೇವಾ ಅವಧಿ ಪೂರೈಸಿದ ನಂತರ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನೌಕರರನ್ನು ನಿವೃತ್ತಿ ಮಾಡುವ ಪ್ರಸ್ತಾಪವಿದೆಯೇ ಎಂದು ಕೇಂದ್ರವನ್ನು ಪ್ರಶ್ನಿಸಲಾಗಿತ್ತು.