ನವದೆಹಲಿ: ಫೇಸ್ಲೆಸ್ ಯೋಜನಾ ಸೇವೆ ಆರಂಭಿಸಿದ ಐಟಿ ಇಲಾಖೆ, ಪರಿಶೀಲನಾ (ಸಮಗ್ರ ಶೋಧನೆ) ನೋಟಿಸ್ ಪಡೆದವರು ಆದಾಯ ತೆರಿಗೆ ಮೌಲ್ಯಮಾಪಕರ ಯಾವುದೇ ಕಚೇರಿಗೆ ಭೇಟಿ ನೀಡುವ ಅಥವಾ ಯಾವುದೇ ಅಧಿಕಾರಿಯನ್ನು ಸಂಪರ್ಕಿಸುವ ಅಗತ್ಯವಿಲ್ಲ ಎಂದು ಹೇಳಿದೆ.
ನೀವು ಆದಾಯ ತೆರಿಗೆ ಇಲಾಖೆಯಿಂದ ಪರಿಶೀಲನಾ ನೋಟಿಸ್ ಪಡೆದರೆ, ಚಿಂತಿಸಬೇಡಿ! ಐಟಿ ಕಚೇರಿಗೆ ಹೋಗಬೇಕಾಗಿಲ್ಲ ಅಥವಾ ಸ್ಥಳೀಯ ಐಟಿ ಅಧಿಕಾರಿಯನ್ನು ಭೇಟಿ ಮಾಡುವ ಅಗತ್ಯವಿಲ್ಲ! ಮುಖರಹಿತ (ಫೇಸ್ಲೆಸ್) ಮೌಲ್ಯಮಾಪನ ಯೋಜನೆಯನ್ನು ಬಳಸಿ. ನಿಮ್ಮ ಪ್ರತಿಕ್ರಿಯೆಗಳನ್ನು ಆನ್‌ಲೈನ್‌ನಲ್ಲಿ ಸಲ್ಲಿಸಿ. ತೆರಿಗೆ ಪಾವತಿದಾರ ಮತ್ತು ಐಟಿ ಇಲಾಖೆ ನಡುವೆ ಯಾವುದೇ ಮುಖಾಮುಖಿ ಭೇಟಿ ಇಲ್ಲ ಎಂದು ಆದಾಯ ತೆರಿಗೆ ಇಲಾಖೆ ಟ್ವಿಟರ್‌ನಲ್ಲಿ ತಿಳಿಸಿದೆ.
ಕೇಂದ್ರ ಕಚೇರಿಯ ನೇರ ತೆರಿಗೆ ಮಂಡಳಿ (ಸಿಬಿಡಿಟಿ) ಅಧ್ಯಕ್ಷ ಮೋಡಿ ಮಾತನಾಡಿ, ತೆರಿಗೆ ಕಚೇರಿಗೆ ಭೇಟಿ ನೀಡುವ ಅಥವಾ ಯಾವುದೇ ಅಧಿಕಾರಿಯನ್ನು ಭೇಟಿ ಮಾಡುವ ಅಗತ್ಯವಿಲ್ಲದೇ ಇಂತಹ ಎಲ್ಲಾ ನೋಟಿಸ್‌ಗಳನ್ನು ವಿದ್ಯುನ್ಮಾನವಾಗಿ ಪ್ರತಿಕ್ರಿಯಿಸುವ ಅಗತ್ಯವಿದೆ ಎಂದು ಹೇಳಿದರು.
ತೆರಿಗೆ ಪಾವತಿದಾರರು ತಾವು ಸ್ವೀಕರಿಸಿದ ನೋಟಿಸ್‌ಗಳನ್ನು ವೆಬ್ಸೈಟ್ ಮೂಲಕ ನೀಡುವ ಪ್ರತಿಕ್ರಿಯೆ ಅಥವಾ ಉತ್ತರಗಳಿಗೆ ನಗರಗಳಲ್ಲಿ ಇರುವ ಆದಾಯ ತೆರಿಗೆ ಅಧಿಕಾರಿಗಳು ಪರಿಶೀಲಿಸಲಿದ್ದಾರೆ ಎಂದು ತಿಳಿಸಿದೆ.
ಈ ಮೊದಲು ಪರಿಶೀಲನಾ ಪ್ರಕರಣಗಳಲ್ಲಿನ ಮೌಲ್ಯಮಾಪನ ಪ್ರಕ್ರಿಯೆಯಲ್ಲಿ ತೆರಿಗೆದಾರರು ಆದಾಯ ತೆರಿಗೆ ಕಚೇರಿಗೆ ಅನೇಕ ಬಾರಿ ಭೇಟಿ ನೀಡಬೇಕಾಗಿತ್ತು. ಇನ್ನು ಮುಂದೆ ತೆರಿಗೆ ಕಚೇರಿಗಳಿಗೆ ಭೇಟಿ ನೀಡುವ ಹೊರೆ ಕಡಿಮೆ ಆಗುವುದರಿಂದ ಇದು ತೆರಿಗೆದಾರರ ವಿಶ್ವಾಸವನ್ನು ಸುಧಾರಿಸುತ್ತದೆ ಎಂದು ಮೋಡಿ ಹೇಳಿದರು.