ಕರ್ನಾಟಕ

karnataka

ETV Bharat / business

ಸಾಲಗಾರರ ಚಕ್ರ ಬಡ್ಡಿ ಮನ್ನಾಕ್ಕೆ ಅರ್ಜಿ ಸಲ್ಲಿಸಬೇಕೇ: ವಿತ್ತ ಸಚಿವಾಲಯ ಹೇಳುವುದೇನು? - six month loan moratorium

ಸಾಲಗಾರರು ಆರು ತಿಂಗಳ ಸಾಲ ನಿಷೇಧಕ್ಕೆ ಚಕ್ರ ಬಡ್ಡಿ ಮನ್ನಾ ಯೋಜನೆಗೆ ಅರ್ಜಿ ಸಲ್ಲಿಸುವ ಅಗತ್ಯವಿಲ್ಲ. ಸಾಲದಾತರ ಅರ್ಹರ ಖಾತೆಗಳಿಗೆ ಎಕ್ಸ್ ಗ್ರೇಷಿಯಾ ಪರಿಹಾರ ಮೊತ್ತವನ್ನು ಕ್ರೆಡಿಟ್ ಮಾಡುವಂತೆ ಸಾಲದಾತರಿಗೆ ಕೋರಲಾಗಿದೆ ಎಂದು ಹಣಕಾಸು ಸಚಿವಾಲಯ ತಿಳಿಸಿದೆ.

Cash
ಹಣ

By

Published : Oct 29, 2020, 4:18 PM IST

ನವದೆಹಲಿ: ಕೊರೊನಾ ಪ್ರೇರೇಪಿತ ರಾಷ್ಟ್ರವ್ಯಾಪಿ ಲಾಕ್​ಡೌನ್​ ಸಂದರ್ಭದಲ್ಲಿ ನಿಷೇಧ ಹೇರಲಾಗಿದ್ದ ಇಎಂಐ ಸಂಬಂಧಿತ ಸಾಲಗಾರರ ಚಕ್ರ ಬಡ್ಡಿ ಮನ್ನಾ ಮಾಡುವ ಬಗ್ಗೆ ಭಾರತೀಯ ರಿಸರ್ವ್ ​ಬ್ಯಾಂಕ್ ಹಾಗೂ ಕೇಂದ್ರ ಹಣಕಾಸು ಸಚಿವಾಲಯ ಅಧಿಸೂಚನೆ ಹೊರಡಿಸಿದ್ದು, ಈ ಬಗ್ಗೆ ಸುಪ್ರೀಂಕೋರ್ಟ್​ಗೆ ಅಫಿಡಿವಿಟ್ ಸಲ್ಲಿಸಿವೆ.

ಸಾಲಗಾರರು ಆರು ತಿಂಗಳ ಸಾಲ ನಿಷೇಧಕ್ಕೆ ಚಕ್ರ ಬಡ್ಡಿ ಮನ್ನಾ ಯೋಜನೆಗೆ ಅರ್ಜಿ ಸಲ್ಲಿಸುವ ಅಗತ್ಯವಿಲ್ಲ. ಸಾಲದಾತರ ಅರ್ಹರ ಖಾತೆಗಳಿಗೆ ಎಕ್ಸ್ ಗ್ರೇಷಿಯಾ ಪರಿಹಾರ ಮೊತ್ತವನ್ನು ಕ್ರೆಡಿಟ್ ಮಾಡುವಂತೆ ಸಾಲದಾತರಿಗೆ ಕೋರಲಾಗಿದೆ ಎಂದು ಹಣಕಾಸು ಸಚಿವಾಲಯ ತಿಳಿಸಿದೆ.

ಸಚಿವಾಲಯವು ಎಫ್​ಎಕ್ಯೂ (ಸಾಮಾನ್ಯ ಪ್ರಶ್ನೆಗಳು) ರೂಪದಲ್ಲಿ ಯೋಜನೆಯ ಕುರಿತು 20 ಸ್ಪಷ್ಟೀಕರಣಗಳನ್ನು ನೀಡಿತು. ಸಾಲ ನೀಡುವ ಸಂಸ್ಥೆಗಳು ಸರ್ಕಾರವು ನಿಗದಿಪಡಿಸಿದ ಮಾನದಂಡಗಳ ಅಡಿಯಲ್ಲಿ ಅರ್ಹರಾಗಿರುವ ತಮ್ಮ ಸಾಲಗಾರರ ಪಟ್ಟಿಯನ್ನು ರಚಿಸುತ್ತದೆ. ಸಂಯುಕ್ತ ಬಡ್ಡಿ ಮತ್ತು ನಡುವಿನ ವ್ಯತ್ಯಾಸವನ್ನು ಮರುಪಾವತಿಸಲಾಗುತ್ತದೆ. ಮಾರ್ಚ್ 1 ಮತ್ತು ಆಗಸ್ಟ್ 31ರ ನಡುವೆ ಪಾವತಿಸಿದ ಸರಳ ಬಡ್ಡಿಗೆ ಅನ್ವಯಿಸುತ್ತದೆ ಎಂದಿದೆ.

ನಿಷೇಧವ ಆಯ್ದುಕೊಂಡವರು ಸೇರಿದಂತೆ ಎಲ್ಲಾ ಅರ್ಹ ಸಾಲಗಾರರಿಗೆ ಈ ಪ್ರಯೋಜನ ಲಭ್ಯವಿದೆ. ಸಾಲ ನೀಡುವವರು ಸರ್ಕಾರದಿಂದ ಮರುಪಾವತಿ ಪಡೆಯಬಹುದು. ಕ್ರಿಸಿಲ್ ವರದಿಯ ಪ್ರಕಾರ, ಶೇ 75ರಷ್ಟು ಸಾಲಗಾರರನ್ನು ಈ ಯೋಜನೆಯಡಿ ಒಳಪಡಿಸಲಾಗುವುದು. ಇದರಿಂದ ಸರ್ಕಾರಕ್ಕೆ 7,500 ಕೋಟಿ ರೂ.ಯಷ್ಟು ಹೊರೆಯಾಗಲಿದೆ.

ABOUT THE AUTHOR

...view details