ನವದೆಹಲಿ: ಹೊಸ ಕೃಷಿ ಕಾನೂನುಗಳ ವಿರುದ್ಧ ರೈತರು ತಮ್ಮ ಪ್ರತಿಭಟನೆ ಮುಂದುವರಿಸುತ್ತಿರುವ ಬೆನ್ನಲ್ಲೇ ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ ರೈತರ ಕೋಪದ ಬಗ್ಗೆ ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ಚಿದಂಬರಂತಮ್ಮ ಟ್ವಿಟರ್ನಲ್ಲಿ, ನನ್ನ ನೆಚ್ಚಿನ ಕವಿ ಸಂತ ತಿರುವಳ್ಳುವರ್ 2000 ವರ್ಷಗಳ ಹಿಂದೆಯೇ 'ರೈತರು ಕೈಕಟ್ಟಿ ಕುಳಿತುಕೊಂಡರೆ ಅತೀವ ಜೀವನ ಉತ್ಸಾಹ ಇರುವ ಮನಷ್ಯ ಕೂಡ ಬದುಕುಳಿಯಲು ಸಾಧ್ಯವಿಲ್ಲ' ಎಂದು ಬರೆದಿದ್ದರು. ಅದು ಇಂದು ಎಷ್ಟು ನಿಜವಾಗಿದೆ. ತಾವು ಮೋಸ ಹೋಗುತ್ತಿದ್ದೇವೆ ಎಂದು ನಂಬುವ ರೈತರ ಕೋಪವನ್ನು ಯಾವುದೇ ಸರ್ಕಾರ ಎದುರಿಸಲು ಸಾಧ್ಯವಿಲ್ಲ ಎಂದು ಪ್ರಧಾನಿ ಮೋದಿ ಸರ್ಕಾರಕ್ಕೆ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.