ಕರ್ನಾಟಕ

karnataka

ETV Bharat / business

ಆರ್ಥಿಕತೆಯನ್ನು ಕೋಮಾ ಸ್ಥಿತಿಗೆ ತಳ್ಳುವಲ್ಲಿ ಯಶಸ್ವಿ ಆಗಿದ್ದೇವೆ: ರಘುರಾಮ್ ರಾಜನ್ - ರಘುರಾಮ್ ರಾಜನ್

ಸಿಂಗಪುರದ ಡಿಬಿಎಸ್ ಬ್ಯಾಂಕ್ ಆಯೋಜಿಸಿದ್ದ ಸಮ್ಮೇಳನದಲ್ಲಿ ಮಾತನಾಡಿದ ಆರ್‌ಬಿಐನ ಮಾಜಿ ಗವರ್ನರ್ ರಘುರಾಮ್ ರಾಜನ್, ನಾವು ಆರ್ಥಿಕತೆಯನ್ನು ಕೋಮಾಕ್ಕೆ ತಳ್ಳುವಲ್ಲಿ ಯಶಸ್ವಿಯಾಗಿದ್ದೇವೆ. ಆದರೆ, ಅದು ಜಾಗೃತಗೊಂಡು ಎಲ್ಲರೂ ಮಲಗಿದ್ದ ಹಾಸಿಗೆಯಿಂದ ಹೊರನಡೆದು ಪರಿಪೂರ್ಣ ಜೀವನಕ್ಕೆ ಮರಳುತ್ತದೆ ಎಂದು ಭಾವಿಸುವುದು ವಿಪರೀತ ಆಶಾವಾದ ಆಗಲಿದೆ ಎಂದರು.

raghuram rajan
ರಘುರಾಮ್ ರಾಜನ್

By

Published : Jul 23, 2020, 5:08 PM IST

ಮುಂಬೈ:ಆರ್ಥಿಕ ಕುಸಿತದ ಮಧ್ಯೆಯೂ ಕೇಂದ್ರೀಯ ಬ್ಯಾಂಕ್ ತನ್ನ ಬ್ಯಾಲೆನ್ಸ್ ಶೀಟ್ ವಿಸ್ತರಿಸುತ್ತಿದೆ ಮತ್ತು ಹೆಚ್ಚುವರಿ ದ್ರವ್ಯತೆಯ ಹಿನ್ನೆಲೆಯಲ್ಲಿ ಸರ್ಕಾರದ ಸಾಲವನ್ನು ಖರೀದಿಸುತ್ತಿದೆ. ಇದು ವೆಚ್ಚದಲ್ಲಿ ಬರುವುದರಿಂದ ಶಾಶ್ವತ ಪರಿಹಾರ ಆಗಲಾರದು ಎಂದು ಎಂದು ಆರ್‌ಬಿಐನ ಮಾಜಿ ಗವರ್ನರ್ ರಘುರಾಮ್ ರಾಜನ್ ಎಚ್ಚರಿಸಿದ್ದಾರೆ.

ಅನೇಕ ಉದಯೋನ್ಮುಖ ಮಾರುಕಟ್ಟೆಗಳಲ್ಲಿ ಕೇಂದ್ರೀಯ ಬ್ಯಾಂಕ್​ಗಳು ಇಂತಹ ಕಾರ್ಯತಂತ್ರಗಳನ್ನು ಆಶ್ರಯಿಸುತ್ತಿವೆ. ಇದನ್ನು ಬೆಂಬಲಿಸುವ 'ಆಧುನಿಕ ವಿತ್ತೀಯ ಸಿದ್ಧಾಂತ'ದ ಮತದಾರರೊಂದಿಗೆ ಭಿನ್ನಾಭಿಪ್ರಾಯವಿದೆ. ಉಚಿತ ಊಟಗಳಿಲ್ಲ ಎಂದು ಸ್ಪಷ್ಟಪಡಿಸಿದರು.

ಆರ್​​ಬಿಐ ತನ್ನ ಬ್ಯಾಲೆನ್ಸ್ ಶೀಟ್ ಅನ್ನು ವಿಸ್ತರಿಸುತ್ತಿದೆ ಮತ್ತು ಅದು ಸರ್ಕಾರದ ಸಾಲವನ್ನು ಖರೀದಿಸುತ್ತಿದೆ. ಆ ಪ್ರಕ್ರಿಯೆಯಲ್ಲಿ ಬ್ಯಾಂಕ್​ಗಳಿಂದ ರಿವರ್ಸ್ ರೆಪೊ ದರದಲ್ಲಿ ಸಾಲ ಪಡೆದು ಮತ್ತು ಸರ್ಕಾರಕ್ಕೆ ಸಾಲ ನೀಡುವುದನ್ನು ಅದು ಮಾಡುತ್ತಿದೆ ಎಂದು ಸಿಂಗಪುರದ ಡಿಬಿಎಸ್ ಬ್ಯಾಂಕ್ ಆಯೋಜಿಸಿದ್ದ ಸಮ್ಮೇಳನದಲ್ಲಿ ರಾಜನ್​ ಹೇಳಿದರು.

ಬ್ಯಾಂಕ್​ಗಳು ಆರ್‌ಬಿಐನೊಂದಿಗೆ ಹಣವನ್ನು ರಿವರ್ಸ್ ರೆಪೊ ವಿಂಡೋದಲ್ಲಿ ನಿಲ್ಲಿಸುತ್ತಿವೆ ಹಾಗೂ ಬಹಳ ಕಡಿಮೆ ಆದಾಯ ಗಳಿಸುತ್ತಿವೆ.

ಈ ಪ್ರಕ್ರಿಯೆಯು ಯಾವಾಗ ಕೊನೆಗೊಳ್ಳುತ್ತದೆ? ಹಣ ಗಳಿಕೆಯ ವ್ಯಾಪ್ತಿಯ ಬಗ್ಗೆ ಜನರು ಭಯಭೀತರಾಗಲು ಪ್ರಾರಂಭಿಸಿದಾಗ, ಹಣದುಬ್ಬರದ ಬಗ್ಗೆ ಚಿಂತೆ ಮಾಡಲು ಪ್ರಾರಂಭಿಸಿದಾಗ, ಸಂಗ್ರಹವಾದ ಸಾಲವನ್ನು ಮರುಪಾವತಿಸಲಾಗುತ್ತದೆಯೇ ಎಂದು ಅವರು ಚಿಂತಿಸಲು ಆರಂಭಿಸಿದಾಗ ಒಮ್ಮೆ ಬೆಳವಣಿಗೆ ಮೇಲ್ಮುಖವಾಗಿ ಸಾಗಲು ಪ್ರಾರಂಭಿಸಿದಾಗ ಮತ್ತು ಬ್ಯಾಂಕ್​ಗಳು ಇತರ ಉಪಯೋಗಗಳನ್ನು ಕಂಡುಕೊಳ್ಳುತ್ತವೆ ಎಂದು ರಘುರಾಮ್​ ರಾಜನ್​ ವಿವರಿಸಿದರು.

ಸದ್ಯಕ್ಕೆ ಹೆಚ್ಚಿನ ಸಾಲಗಳು ನಡೆಯದಿದ್ದಾಗ, ಕೇಂದ್ರ ಬ್ಯಾಂಕ್​ ಹಣಗಳಿಕೆಗೆ ಮುಂದಾಗಬಹುದು ಮತ್ತು ಅದು ಕೇಂದ್ರ ಬ್ಯಾಂಕ್ ಮತ್ತು ಸರ್ಕಾರದ ನಡುವಿನ ಸಹಕಾರಕ್ಕೆ ಕಾರಣವೂ ಆಗಬಹುದು. ಆ ಸಮಯದವರೆಗೆ ಕೆಲವು ಮಿತಿಗಳಿವೆ. ಭಾರತದಂತಹ ಆರ್ಥಿಕತೆಗಳು ಏಕಾಏಕಿ ತೆರೆದುಕೊಂಡರೇ ಲಾಕ್‌ಡೌನ್‌ಗಳಿಂದ ಕಾರ್ಪೊರೇಟ್ ವಲಯದ ಮೇಲೆ ಉಂಟಾದ ಹಾನಿ ಬಹಿರಂಗವಾಗುತ್ತದೆ ಎಂದು ಖ್ಯಾತ ಅರ್ಥಶಾಸ್ತ್ರಜ್ಞ ರಾಜನ್​ ಹೇಳಿದರು.

ಕ್ರಮೇಣ ಈ ವೆಚ್ಚಗಳನ್ನು ಹಣಕಾಸು ವಲಯಕ್ಕೆ ವರ್ಗಾಯಿಸಲಾಗುತ್ತದೆ. ಪರಿಸ್ಥಿತಿಯನ್ನು ನಿಭಾಯಿಸಲು ಸಾಲದಾತರು ಸಮರ್ಪಕವಾಗಿ ಬಂಡವಾಳ ಹೂಡುವುದನ್ನು ಸರ್ಕಾರ ಖಚಿತಪಡಿಸಿಕೊಳ್ಳಬೇಕು. ಈ ಕುಸಿತವನ್ನು ಆರ್ಥಿಕ ವಲಯದ ಸಮಸ್ಯೆಯನ್ನಾಗಿ ಮಾಡಲು ಬಿಡಬಾರದು. ನಾವು ಆರ್ಥಿಕತೆಯನ್ನು ಕೋಮಾಕ್ಕೆ ತಳ್ಳುವಲ್ಲಿ ಯಶಸ್ವಿಯಾಗಿದ್ದೇವೆ. ಆದರೆ, ಅದು ಜಾಗೃತಗೊಂಡು ಎಲ್ಲರೂ ಮಲಗಿದ್ದ ಹಾಸಿಗೆಯಿಂದ ಹೊರನಡೆದು ಪರಿಪೂರ್ಣ ಜೀವನಕ್ಕೆ ಮರಳುತ್ತದೆ ಎಂದು ಭಾವಿಸುವುದು ವಿಪರೀತ ಆಶಾವಾದ ಆಗಲಿದೆ ಎಂದು ವ್ಯಂಗ್ಯವಾಡಿದ್ದಾರೆ.

ABOUT THE AUTHOR

...view details