ಕರ್ನಾಟಕ

karnataka

ETV Bharat / business

ಮಾ.31ರ ಬಳಿಕ ಮಾರಾಟವಾದ ಬಿಎಸ್-IV ವಾಹನಗಳಿಗೆ ನೋಂದಣಿಯಿಲ್ಲ: ಸುಪ್ರೀಂಕೋರ್ಟ್ - COVID-19 lockdown

ನ್ಯಾ.ಅರುಣ್ ಮಿಶ್ರಾ ನೇತೃತ್ವದ ಸುಪ್ರೀಂಕೋರ್ಟ್‌ನ ನ್ಯಾಯಪೀಠವು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಕೋವಿಡ್​-19ನ ಲಾಕ್​​ಡೌನ್ ಸಮಯದಲ್ಲಿ ಬಿಎಸ್-IV ವಾಹನಗಳ ಮಾರಾಟ ಸಂಬಂಧ ವಿಚಾರಣೆ ನಡೆಸಿ, 2020ರ ಮಾರ್ಚ್ 31ರ ನಂತರ ಯಾವುದೇ ಬಿಎಸ್- IV ವಾಹನಗಳನ್ನು ಮಾರಾಟ ಮಾಡಿದರೆ ನೋಂದಾಯಿಸಕೂಡದು ಎಂದು ತಿಳಿಸಿದೆ.

Supreme Court
ಸುಪ್ರೀಂಕೋರ್ಟ್

By

Published : Jul 8, 2020, 4:49 PM IST

ನವದೆಹಲಿ:2020ರ ಮಾರ್ಚ್ 31ರ ನಂತರ ಯಾವುದೇ ಬಿಎಸ್- IV ವಾಹನಗಳನ್ನು ಮಾರಾಟ ಮಾಡಿದರೆ ನೋಂದಾಯಿಸಕೂಡದು ಎಂದು ಸುಪ್ರೀಂಕೋರ್ಟ್ ವಾಹನ ವಿತರಕರು ಮತ್ತು ವಾಹನ ಕಂಪನಿಗಳಿಗೆ ಸೂಚಿಸಿದೆ.

ನ್ಯಾ.ಅರುಣ್ ಮಿಶ್ರಾ ನೇತೃತ್ವದ ಅಪೆಕ್ಸ್ ಕೋರ್ಟ್​ನ ನ್ಯಾಯಪೀಠವು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಕೋವಿಡ್​ -19ನ ಲಾಕ್​​ಡೌನ್ ಸಮಯದಲ್ಲಿ ಬಿಎಸ್-IV ವಾಹನಗಳ ಮಾರಾಟ ಸಂಬಂಧದ ಅರ್ಜಿ ವಿಚಾರಣೆ ನಡೆಸಿತು.

ಸುಪ್ರೀಂಕೋರ್ಟ್​ ಮಾರ್ಚ್ 27ರ ಹಿಂದೆಯೇ ಬಿಎಸ್-4 ವಾಹನಗಳನ್ನು ಲಾಕ್​ಡೌನ್​ ತೆರವಾದ 10 ದಿನಗಳ ತನಕ ಮಾರಾಟ ಮಾಡಲು ಅನುಮತಿ ನೀಡಿತ್ತು. ಈ ಬಳಿಕ ಕೋರ್ಟ್, ವಾಹನ ವಿತರಕರು ಮತ್ತು ವಾಹನ ಕಂಪನಿಗಳಿಗೆ ಕನಿಷ್ಠ ಪರಿಹಾರವನ್ನು ನೀಡಿ, ಶೇ 10ರಷ್ಟು ದಾಸ್ತಾನು ಮಾರಾಟಕ್ಕೆ ಅನುಮತಿಸಿತು.

ನ್ಯಾ.ಅರುಣ್ ಮಿಶ್ರಾ, ದಯವಿಟ್ಟು ಈ ನ್ಯಾಯಾಲಯದ ಜತೆ ವಂಚನೆಯ ಆಟವಾಡುವ ಮೂಲಕ ಲಾಭ ಪಡೆಯಬೇಡಿ. ಯಾವುದೇ ಮಾರಾಟ ನಡೆದಿಲ್ಲ ಎಂದು ನೀವು ನಮಗೆ ತಿಳಿಸಿದ್ದೀರಿ. ನಿಮ್ಮ ಮೌಲ್ಯಗಳನ್ನು ನೀವೇ ಕಡಿಮೆ ಮಾಡಿಕೊಳ್ಳುತ್ತಿದ್ದೀರಿ ಎಂದು ಬೇಸರ ವ್ಯಕ್ತಪಡಿಸಿದರು.

ನಮ್ಮ ಆದೇಶವಿಲ್ಲದೆ ಯಾವುದೇ ವಾಹನವನ್ನು ನೋಂದಣಿ ಮಾಡುವಂತಿಲ್ಲ. ನೀವು ಅನುಮತಿಸಿದ್ದಕ್ಕಿಂತ ಹೆಚ್ಚಿನದನ್ನು ಮಾರಾಟ ಮಾಡಿದ್ದೀರಿ ಎಂದು ಹೇಳಿದರು.

ಎಫ್‌ಎಡಿಎ ಪರ ವಕೀಲ ಕೆ.ವಿ.ವಿಶ್ವನಾಥನ್ ಮಾತನಾಡಿ, ಸುಪ್ರೀಂಕೋರ್ಟ್ 2020ರ ಮಾರ್ಚ್‌ನಲ್ಲಿ ನೋಂದಣಿಗೆ ಅನುಮತಿ ನೀಡಿತು ಎಂದರು. ಲಾಕ್​ಡೌನ್ ಸಮಯದಲ್ಲಿ ವಾಹನಗಳನ್ನು ಹೇಗೆ ಮಾರಾಟ ಮಾಡಲಾಗಿದೆ? ಎಂದು ನ್ಯಾಯಪೀಠ ಪ್ರಶ್ನಿಸಿತು. ಲಾಕ್​ಡೌನ್ ತೆರವಿನ ನಂತರ ನಾವು ಮಾರಾಟಕ್ಕೆ ಅವಕಾಶ ನೀಡಿದರೆ ಅದು ನ್ಯಾಯಾಲಯದ ಆದೇಶದ ಉಲ್ಲಂಘನೆಯಾಗುತ್ತದೆ ಎಂದು ಕೋರ್ಟ್ ಹೇಳಿದೆ.

ABOUT THE AUTHOR

...view details