ನವದೆಹಲಿ: ಕೇಂದ್ರ ಸರ್ಕಾರದ ನೀತಿ ನಿರೂಪಣಾ ಸಂಸ್ಥೆಯಾಗಿರುವ ನೀತಿ ಆಯೋಗವು ತನ್ನ ಎರಡನೇ ರಾಜ್ಯವಾರು ಇನ್ನೋವೇಷನ್ ಸೂಚ್ಯಂಕ ಶ್ರೇಣಿಯನ್ನು ಬಿಡುಗಡೆ ಮಾಡಿದ್ದು, ಕರ್ನಾಟಕ ಸತತ ಎರಡನೇ ವರ್ಷವೂ ನಂ.1 ಸ್ಥಾನ ಪಡೆದಿದೆ.
ಬುಧವಾರ ಬಿಡುಗಡೆಯಾದ ಎರಡನೇ ಇನ್ನೋವೇಷನ್ ಇಂಡೆಕ್ಸ್‌ನಲ್ಲಿ ಕರ್ನಾಟಕ, ಮಹಾರಾಷ್ಟ್ರ, ತಮಿಳುನಾಡು, ತೆಲಂಗಾಣ ಮತ್ತು ಕೇರಳ ನಾವೀನ್ಯತೆಗಳಲ್ಲಿ ಅಗ್ರ ಐದು ರಾಜ್ಯಗಳಾಗಿ ಸ್ಥಾನ ಪಡೆದಿವೆ. ಆಯೋಗನ ಉಪಾಧ್ಯಕ್ಷ ರಾಜೀವ್ ಕುಮಾರ್ ಮತ್ತು ಸಿಇಒ ಅಮಿತಾಭ್ ಕಾಂತ್ ಬಿಡುಗಡೆ ಮಾಡಿದ ಸೂಚ್ಯಂಕವನ್ನು ಜಾಗತಿಕ ಇನ್ನೋವೇಷನ್ ಸೂಚ್ಯಂಕದ ಪ್ರಕಾರ ಅಭಿವೃದ್ಧಿಪಡಿಸಲಾಗಿದೆ. ಶ್ರೇಯಾಂಕದಲ್ಲಿ ಜಾರ್ಖಂಡ್, ಛತ್ತೀಸ್‌ಗಢ ಮತ್ತು ಬಿಹಾರವು ಸೂಚ್ಯಂಕದ ಕೆಳಭಾಗದಲ್ಲಿವೆ.
ಒಕ್ಕೂಟದ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳು ಮತ್ತು ಸಣ್ಣ- ಗುಡ್ಡಗಾಡು ರಾಜ್ಯಗಳು ಒಳಗೊಂಡಂತೆ ನೀತಿ ಆಯೋಗವು ಪ್ರಥಮ ಬಾರಿಗೆ ಇಂಡಿಯಾ ಇನ್ನೋವೇಷನ್ ಇಂಡೆಕ್ಸ್ ( ಭಾರತದ ನಾವೀನ್ಯತೆ ಸೂಚ್ಯಂಕ) ಮೂಲಕ ರಾಜ್ಯಗಳ ಸಾಮರ್ಥ್ಯ ಮತ್ತು ಕಾರ್ಯಕ್ಷಮತೆ ಪರಿಶೀಲಿಸುವ ಉದ್ದೇಶದಿಂದ ಈ ಶ್ರೇಣಿ ಪ್ರಕಟಿಸಿದೆ.