ನವದೆಹಲಿ :ಕಳೆದು ತಿಂಗಳು ಕೋವಿಡ್ ಸಾಂಕ್ರಾಮಿಕ ಪರಿಸ್ಥಿತಿಯಿಂದಾಗಿ ಆರ್ಥಿಕತೆ ಹದಗೆಟ್ಟಿದೆ. ಇಂದೊಂದು 'ದೇವರ ಆಟ'(ಆ್ಯಕ್ಟ್ ಆಫ್ ಗಾಡ್) ಎಂಬ ಹೇಳಿಕೆ ನೀಡಿದ್ದರು. ಈ ಬಗ್ಗೆ ಪ್ರತಿಪಕ್ಷಗಳ ವ್ಯಾಪಕವಾಗಿ ಟೀಕಿಸಿದ್ದು, ಸದನದಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ತಿರುಗೇಟು ನೀಡಿದ್ದಾರೆ.
ನಾ ನೆರೆ ಮನೆ ಆಂಟಿಯಂತೆ ಕಾಣುವೆ, 'ದೇವರ ಆಟ' ಹೇಳಿಕೆಗೆ ವ್ಯಂಗ್ಯವಾಡುತ್ತಿದ್ದಾರೆ : ಸೀತಾರಾಮನ್ ಬೇಸರ - ಲೋಕಸಭೆ ಅಧಿವೇಶನ
ಕಷ್ಟಕರ ಸ್ಥಿತಿಯಲ್ಲಿ ಜನ ಮಜೂರ್ ಎಂಬ ಲ್ಯಾಟಿನ್ ಅಭಿವ್ಯಕ್ತಿಯನ್ನು ಇಚ್ಚಿಸುತ್ತಾರೆ. ಓರ್ವ ಸರಳ ಹಣಕಾಸು ಸಚಿವೆಯಾದ ನಾನು ದೇವರ ಆಟ ಎಂದು ಹೇಳಿದೆ. ಅದನ್ನು ವ್ಯಂಗ್ಯವಾಗಿ ತೆಗೆದುಕೊಳ್ಳಲಾಗಿದೆ..
ಓರ್ವ ಸರಳ ಹಣಕಾಸು ಸಚಿವೆಯ ದೇವರ ಆಟ ಎಂದು ಹೇಳಿದ ಮಾತು ವ್ಯಂಗ್ಯವಾಗಿ ತೆಗೆದುಕೊಳ್ಳಲಾಗುತ್ತಿದೆ. ಲ್ಯಾಟಿನ್ನ ಫೋರ್ಸ್ ಮಜೂರ್ ಎಂಬ ಶಬ್ಬವನ್ನು ಚೆನ್ನಾಗಿ ಸ್ವೀಕರಿಸಿದ್ದಾರೆ ಎಂದು ಲೋಕಸಭೆಯಲ್ಲಿ ಹೇಳಿದರು. ನನ್ನ ಹೇಳಿಕೆಗಳನ್ನು ವಿರೋಧ ಪಕ್ಷದವರು ಸೇರಿ ಹಲವರು ವ್ಯಂಗ್ಯವಾಡಿದ್ದಾರೆ. ಯಾಕೆಂದರೆ, ನಾನು ನೋಡಲು ಸರಳವಾಗಿ ನೆರೆ ಮನೆಯ ಆಂಟಿಯಂತೆ ಕಾಣುತ್ತೇನೆ. ಆದರೆ, ಅಂದು ನಾನು ಆಡಿರುವ ಮಾತುಗಳನ್ನು ತಿರುಚಿದ್ದು ನೋಡಿದ್ರೆ, ಪ್ರತಿಪಕ್ಷಗಳ ಬೇಜವಾಬ್ದಾರಿತನದ ವರ್ತನೆ ಎತ್ತಿ ತೋರಿಸುತ್ತದೆ ಎಂದರು.
ಹಲವರು ರಾಜ್ಯಗಳ ಜಿಎಸ್ಟಿಪರಿಹಾರದ ಬಗ್ಗೆ ಮಾತನಾಡಿದ್ದರು. ನನ್ನ ಆ್ಯಕ್ಟ್ ಆಫ್ ಗಾಡ್ ಹೇಳಿಕೆ ಹಲವು ರೀತಿ ಉಲ್ಲೇಖಿಸಿ ಟೀಕಿಸಿದ್ದಾರೆ. ಅದಕ್ಕಾಗಿ ನನಗೆ ಸಂತೋಷವಿದೆ. ಕಷ್ಟಕರ ಸ್ಥಿತಿಯಲ್ಲಿ ಜನ ಮಜೂರ್ ಎಂಬ ಲ್ಯಾಟಿನ್ ಅಭಿವ್ಯಕ್ತಿಯನ್ನು ಇಚ್ಚಿಸುತ್ತಾರೆ. ಓರ್ವ ಸರಳ ಹಣಕಾಸು ಸಚಿವೆಯಾದ ನಾನು ದೇವರ ಆಟ ಎಂದು ಹೇಳಿದೆ. ಅದನ್ನು ವ್ಯಂಗ್ಯವಾಗಿ ತೆಗೆದುಕೊಳ್ಳಲಾಗಿದೆ. ಇದೆಲ್ಲ ಏನು ಎಂದು ಲೋಕಸಭಾ ಅಧ್ಯಕ್ಷರನ್ನು ಅಸಮಾಧಾನದಿಂದ ಪ್ರಶ್ನಿಸಿದರು.