ನವದೆಹಲಿ: ಮುಂಬರುವ ಕೇಂದ್ರ ಬಜೆಟ್ 2021-22ರ ಸಂಬಂಧ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಉದ್ಯಮ, ಸೇವೆಗಳು ಮತ್ತು ವ್ಯಾಪಾರ ಮುಖ್ಯಸ್ಥರ ಜತೆ ಒಂಬತ್ತನೇ ಬಜೆಟ್ ಪೂರ್ವ ಸಮಾಲೋಚನೆ ನಡೆಸಿದರು.
ಸೀತಾರಾಮನ್ ಅವರಲ್ಲದೇ ಹಣಕಾಸು ಕಾರ್ಯದರ್ಶಿ ಡಾ.ಬಿ.ಪಾಂಡೆ, ವೆಚ್ಚ ಕಾರ್ಯದರ್ಶಿ ಟಿ.ವಿ.ಸೋಮನಾಥನ್, ಡಿಇಎ ಕಾರ್ಯದರ್ಶಿ ತರುಣ್ ಬಜಾಜ್ ಮತ್ತು ಮುಖ್ಯ ಆರ್ಥಿಕ ಸಲಹೆಗಾರ ಕೆ.ವಿ.ಸುಬ್ರಮಣಿಯನ್ ಅವರು ಸಭೆಯಲ್ಲಿ ಉಪಸ್ಥಿತರಿದ್ದರು.