ಕರ್ನಾಟಕ

karnataka

ETV Bharat / business

ಫಾಸ್ಟ್​ಟ್ಯಾಗ್​ನಿಂದ ಶುಕ್ರದೆಸೆ.. ಟೋಲ್​ ಸೋರಿಕೆಗೆ ಮುಕ್ತಿ, ಕಲೆಕ್ಷನ್​ ದುಪ್ಪಟ್ಟು.. - ಭಾರತದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ

ಜೈಪುರ ಪ್ರದೇಶದ ಜೋಧ್‌ಪುರ ಟೋಲ್ ಪ್ಲಾಜಾ ಫಾಸ್ಟ್‌ಟ್ಯಾಗ್‌ಗಳ ಅನುಷ್ಠಾನದಲ್ಲಿ ಇತರರನ್ನು ಮೀರಿಸಿದೆ. ಶೇ.91ರಷ್ಟು ಟೋಲ್ ಸಂಗ್ರಹವು ಫಾಸ್ಟ್‌ಟ್ಯಾಗ್‌ಗಳ ಮೂಲಕ ನಡೆಯುತ್ತಿದೆ. ಭೋಪಾಲ್ ಮತ್ತು ಗಾಂಧಿನಗರದ ಟೋಲ್ ಪ್ಲಾಜಾಗಳು ಫಾಸ್ಟ್​ಟ್ಯಾಗ್ ಅನುಷ್ಠಾನದಲ್ಲಿ ಉತ್ತಮ ಪ್ರದರ್ಶನ ನೀಡುತ್ತಿವೆ ಎಂದು ಮಾಹಿತಿ ನೀಡಿದರು.

FASTags
ಫಾಸ್ಟ್​ಟ್ಯಾಗ್​

By

Published : Jan 15, 2020, 5:06 PM IST

ನವದೆಹಲಿ: ಭಾರತದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್​ಎಚ್​ಎಐ) ಕಳೆದ ಭಾನುವಾರ ಒಂದೇ ದಿನ ಅತ್ಯಧಿಕ ಅಂದ್ರೆ ₹86.2 ಕೋಟಿ ಟೋಲ್ ಮೊತ್ತ​ ಸಂಗ್ರಹಿಸಿದೆ ಎಂದು ಮುಖ್ಯಸ್ಥ ಸುಖ್ಬೀರ್ ಸಿಂಗ್ ಸಂಧು ಹೇಳಿದ್ದಾರೆ.

ಫಾಸ್ಟ್‌ಟ್ಯಾಗ್‌ಗಳ ಎಲೆಕ್ಟ್ರಾನಿಕ್ ಸಿಸ್ಟಮ್ ಮೂಲಕ ಅತಿಹೆಚ್ಚು ದೈನಂದಿನ ಟೋಲ್ ಸಂಗ್ರಹವು 2020ರ ಜನವರಿಯಲ್ಲಿ 50 ಕೋಟಿ ರೂ. (ಒಂದೇ ದಿನದ ಸಂಗ್ರಹ) ದಾಖಲಾಗಿದೆ. 2019ರ ನವೆಂಬರ್‌ನಲ್ಲಿ 23 ಕೋಟಿ ರೂ. ಈ ಹಿಂದಿನ ಗರಿಷ್ಠ ದಾಖಲೆ ಆಗಿತ್ತು.

ಎನ್‌ಎಚ್‌ಎಐ, ಕಳೆದ ಎರಡು ದಿನಗಳ ಹಿಂದೆ ಅತಿಹೆಚ್ಚು ಟೋಲ್ ಸಂಗ್ರಹವಾದ ₹86.2 ಕೋಟಿ ದಾಖಲಿಸಿದೆ. ಫಾಸ್ಟ್‌ಟ್ಯಾಗ್‌ಗಳ ಮೂಲಕ ದೈನಂದಿನ ವಹಿವಾಟು 2019ರ ಜನವರಿಯಲ್ಲಿ 8 ಲಕ್ಷದಿಂದ 2020ರ ಜನವರಿಗೆ ದಿನಕ್ಕೆ ಸುಮಾರು 30 ಲಕ್ಷ ರೂ.ಗೆ ಏರಿಕೆಯಾಗಿದೆ ಎಂದು ರಾಷ್ಟ್ರೀಯ ಹೆದ್ದಾರಿಗಳ ಶ್ರೇಷ್ಠ ಪ್ರಶಸ್ತಿ- 2019 ಕಾರ್ಯಕ್ರಮದಲ್ಲಿ ಹೇಳಿದರು.

ಜೈಪುರ ಪ್ರದೇಶದ ಜೋಧ್‌ಪುರ ಟೋಲ್ ಪ್ಲಾಜಾ ಫಾಸ್ಟ್‌ಟ್ಯಾಗ್‌ಗಳ ಅನುಷ್ಠಾನದಲ್ಲಿ ಇತರರನ್ನು ಮೀರಿಸಿದೆ. ಶೇ.91ರಷ್ಟು ಟೋಲ್ ಸಂಗ್ರಹವು ಫಾಸ್ಟ್‌ಟ್ಯಾಗ್‌ಗಳ ಮೂಲಕ ನಡೆಯುತ್ತಿದೆ. ಭೋಪಾಲ್ ಮತ್ತು ಗಾಂಧಿನಗರದ ಟೋಲ್ ಪ್ಲಾಜಾಗಳು ಫಾಸ್ಟ್​ಟ್ಯಾಗ್ ಅನುಷ್ಠಾನದಲ್ಲಿ ಉತ್ತಮ ಪ್ರದರ್ಶನ ನೀಡುತ್ತಿವೆ ಎಂದು ಮಾಹಿತಿ ನೀಡಿದರು.

ABOUT THE AUTHOR

...view details