ನವದೆಹಲಿ: 2020ರಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಪ್ಯಾಕೇಜ್ ರೂಪದಲ್ಲಿ ನಾಲ್ಕೈದು ಕಿರು ಬಜೆಟ್ ನೀಡಬೇಕಾಗಿತ್ತು. ಮುಂಬರುವ ಬಜೆಟ್ ಅನ್ನು ಸಹ ಆ ಸರಣಿಯ ಭಾಗವಾಗಿ ನೋಡಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಸಂಸತ್ತಿನ ಬಜೆಟ್ ಅಧಿವೇಶನ ಪ್ರಾರಂಭವಾಗುವ ಮೊದಲು ಅವರು ಮಾಧ್ಯಮಗಳಿಗೆ ಹೇಳಿಕೆ ನೀಡಿದ ಅವರು, ಈ ದಶಕದ ಮೊದಲ ಅಧಿವೇಶನವು ಶುಕ್ರವಾರದಿಂದ ಪ್ರಾರಂಭವಾಗುತ್ತಿದೆ. ಭಾರತದ ಉಜ್ವಲ ಭವಿಷ್ಯಕ್ಕಾಗಿ ಈ ದಶಕವು ಬಹಳ ಮುಖ್ಯವಾಗಿದೆ ಎಂದು ಒತ್ತಿ ಹೇಳಿದರು.
ಇದನ್ನೂ ಓದಿ: ರಾಷ್ಟ್ರಪತಿ ರಾಮನಾಥ್ ಕೋವಿಂದ್ ಭಾಷಣ ಬಹಿಷ್ಕರಿಸಿದ ಬಿಎಸ್ಪಿ..!
ಪ್ರಸ್ತುತ ದಶಕವನ್ನು ಗಮನದಲ್ಲಿ ಇರಿಸಿಕೊಂಡು ಈ ಅಧಿವೇಶನದಲ್ಲಿ ವಿಭಿನ್ನ ಅಭಿಪ್ರಾಯಗಳ ಚರ್ಚೆಗಳಿರಬೇಕು. ಜನರ ಆಕಾಂಕ್ಷೆಗಳನ್ನು ಈಡೇರಿಸಲು ಸಂಸತ್ತನ್ನು ಪೂರ್ಣವಾಗಿ ಬಳಸಿಕೊಳ್ಳಲು ಸಂಸದರು ಹಿಂದೆ ಸರಿಯುವುದಿಲ್ಲ ಎಂದು ಪ್ರಧಾನಿ ವಿಶ್ವಾಸ ವ್ಯಕ್ತಪಡಿಸಿದರು.
ಬಹುಶಃ ಭಾರತದ ಇತಿಹಾಸದಲ್ಲಿ ಮೊದಲ ಬಾರಿಗೆ ಹಣಕಾಸು ಸಚಿವರು 2020ರಲ್ಲಿ ನಾಲ್ಕು- ಐದು ಮಿನಿ ಬಜೆಟ್‌ಗಳನ್ನು ವಿಭಿನ್ನ ಪ್ಯಾಕೇಜ್‌ಗಳ ರೂಪದಲ್ಲಿ ನೀಡಬೇಕಾಗಿತ್ತು. ಆದ್ದರಿಂದ, ಈ ಬಜೆಟ್ ಅನ್ನು ನಾಲ್ಕು - ಐದು ಮಿನಿ ಬಜೆಟ್ಗಳ ಸರಣಿಯ ಭಾಗವಾಗಿ ನೋಡಲಾಗುವುದು ಎಂಬ ವಿಶ್ವಾಸ ನನಗಿದೆ ಎಂದು ಮೋದಿ ಹೇಳಿದರು.
ಈ ದಶಕವು ದೇಶದ ಭವಿಷ್ಯಕ್ಕಾಗಿ ಅತ್ಯಂತ ನಿರ್ಣಾಯಕವಾಗಿದೆ. ಇದು ಈ ದಶಕದ ಮೊದಲ ಅಧಿವೇಶನ. ಭಾರತದ ಉಜ್ವಲ ಭವಿಷ್ಯಕ್ಕಾಗಿ ಈ ದಶಕವು ಅತ್ಯಂತ ನಿರ್ಣಾಯಕವಾಗಿದೆ. ಅದಕ್ಕಾಗಿಯೇ ದಶಕದ ಆರಂಭದಿಂದಲೇ ಭಾರತದ ಸ್ವಾತಂತ್ರ್ಯ ಹೋರಾಟಗಾರರ ಕನಸುಗಳನ್ನು ತ್ವರಿತವಾಗಿ ಸಾಕಾರಗೊಳಿಸಲು ಸುವರ್ಣಾವಕಾಶ ದೇಶದ ಮುಂದಿದೆ ಎಂದು ಹೇಳಿದರು.