ಕರ್ನಾಟಕ

karnataka

ETV Bharat / business

ವಾಹನ ಸವಾರರೇ ಎಚ್ಚರ..! ಸೇತುವೆ, ಹೆದ್ದಾರಿಗಳಲ್ಲಿ ಈ ವೇಗ ದಾಟುವಂತಿಲ್ಲ..!

ಮೋಟಾರು ವಾಹನ ಕಾಯ್ದೆಯಡಿ ಹೆಚ್ಚುವರಿ ಪೊಲೀಸ್ ಆಯುಕ್ತ (ಸಂಚಾರ) ಪ್ರವೀಣ್ ಪಡ್ವಾಲ್ ಅವರು ಆರ್ಟಿಲರಿ ರಸ್ತೆಗಳಲ್ಲಿ ವೇಗ ಮಿತಿಯನ್ನು ಪರಿಷ್ಕರಿಸಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.

Bridge
ಸೇತುವೆ

By

Published : Feb 28, 2020, 10:59 PM IST

ಮುಂಬೈ: ನಗರದ ಫ್ಲೈಓವರ್‌ಗಳು, ಸೇತುವೆಗಳು ಮತ್ತು ಹೆದ್ದಾರಿಗಳಲ್ಲಿ ಚಲಿಸುವ ವಾಹನಗಳಿಗೆ ಮುಂಬೈ ಸಂಚಾರ ಪೊಲೀಸ್ ಇಲಾಖೆ ನೂತನ ವೇಗ ಮಿತಿಗಳನ್ನು ನಿಗದಿಪಡಿಸಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ನಗರದಲ್ಲಿ ವಾಹನಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮತ್ತು ಅಪಘಾತಗಳನ್ನು ತಡೆಗಟ್ಟುವ ಉದ್ದೇಶದಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಹೇಳಿದರು.

ಮೋಟಾರು ವಾಹನ ಕಾಯ್ದೆಯಡಿ ಹೆಚ್ಚುವರಿ ಪೊಲೀಸ್ ಆಯುಕ್ತ (ಸಂಚಾರ) ಪ್ರವೀಣ್ ಪಡ್ವಾಲ್ ಅವರು ಆರ್ಟಿಲರಿ ರಸ್ತೆಗಳಲ್ಲಿ ವೇಗ ಮಿತಿಯನ್ನು ಪರಿಷ್ಕರಿಸಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಬಾಂದ್ರಾ ವರ್ಲಿ ಸೀ ಲಿಂಕ್ ಮತ್ತು ಈಸ್ಟರ್ನ್ ಫ್ರೀವೇ ವೇಗದ ಮಿತಿ 80 ಕಿ.ಮೀ ವೇಗದಲ್ಲಿದ್ದರೆ, ಈಸ್ಟರ್ನ್ ಎಕ್ಸ್‌ಪ್ರೆಸ್, ಸಿಯಾನ್ ಪನ್ವೆಲ್ ಹೆದ್ದಾರಿ, ಸಾಂತಕ್ರೂಜ್- ಚೆಂಬೂರ್ ಲಿಂಕ್ ರಸ್ತೆ (ಎಸ್‌ಸಿಎಲ್‌ಆರ್) ಮತ್ತು ಲಾಲ್‌ಬಾಗ್ ಫ್ಲೈಓವರ್‌ನಲ್ಲಿ ಸಂಚರಿಸುವ ವಾಹನ ಚಾಲಕರು 70 ಕಿ.ಮೀ ವೇಗದಲ್ಲಿ ಚಲಿಸಬಹುದು ಎಂದು ಅವರು ಹೇಳಿದರು.

ಜೆಜೆ ಫ್ಲೈಓವರ್‌ನಲ್ಲಿ ವಾಹನ ಚಾಲಕರು 35 ಕಿ.ಮೀ. ನಿಂದ60 ಕಿ.ಮೀ. ವೇಗದಲ್ಲಿ ಓಡಿಸಬಹುದು. ಆದರೆ, ಮರೀನ್ ಡ್ರೈವ್‌ನಲ್ಲಿ ವೇಗದ ಮಿತಿಯನ್ನು 65 ಕಿ.ಮೀ.ಗೆ ನಿಗದಿಪಡಿಸಲಾಗಿದೆ.

ABOUT THE AUTHOR

...view details