ನವದೆಹಲಿ:ಒವರ್-ದಿ-ಟಾಪ್ (ಒಟಿಟಿ) ಪ್ಲಾಟ್‌ಫಾರ್ಮ್‌ಗಳಿಗೆ ಮಾಹಿತಿ ಮತ್ತು ಪ್ರಸಾರ (ಐ / ಬಿ) ಸಚಿವಾಲಯ ರೂಪಿಸಿರುವ ಹೊಸ ಮಾರ್ಗಸೂಚಿಗಳು ಹೊಸ ನಿಯಮಗಳ ಸ್ವಯಂ ವರ್ಗೀಕರಣದ ಮೇಲೆ ಕೇಂದ್ರೀಕರಿಸಲಾಗಿದೆ ಎಂದು ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಹೇಳಿದ್ದಾರೆ.
ಆಲ್ಟ್ ಬಾಲಾಜಿ, ಹಾಟ್‌ಸ್ಟಾರ್, ಅಮೆಜಾನ್ ಪ್ರೈಮ್, ನೆಟ್‌ಫ್ಲಿಕ್ಸ್, ಜಿಯೋ, ಝೀ 5, ವಯಾಕಾಮ್ 18, ಶೆಮರೂ ಮತ್ತು ಎಂಎಕ್ಸ್‌ಪ್ಲೇಯರ್ ಸೇರಿದಂತೆ ವಿವಿಧ ಒಟಿಟಿ ಪ್ಲಾಟ್‌ಫಾರ್ಮ್ ಪ್ರತಿನಿಧಿಗಳ ಸಮ್ಮುಖದಲ್ಲಿ ನಡೆದ ಕಾರ್ಯಕ್ರಮದಲ್ಲಿ ಈ ಹೇಳಿಕೆ ನೀಡಿದ್ದಾರೆ.
ಉದ್ಯಮದ ಪ್ರತಿನಿಧಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ಈ ಹಿಂದೆ ಒಟಿಟಿ ಉದ್ಯಮಿಗಳ ಜತೆ ಸರ್ಕಾರ ಹಲವು ಸುತ್ತಿನ ಸಮಾಲೋಚನೆ ನಡೆಸಿದೆ. ಸ್ವಯಂ ನಿಯಂತ್ರಣದ ಅಗತ್ಯವನ್ನು ಒತ್ತಿ ಹೇಳಲಾಗಿದೆ. ಸಿನೆಮಾ ಮತ್ತು ಟಿವಿ ಉದ್ಯಮಗಳಿಂದ ಪ್ರಾತಿನಿಧ್ಯಗಳನ್ನು ಸ್ವೀಕರಿಸಿದ್ದೇವೆ. ಅವುಗಳಿಗೆ ನಿಯಮಗಳು ಇದ್ದರೂ ಒಟಿಟಿ ಉದ್ಯಮಕ್ಕೆ ಯಾವುದೂ ಧಕ್ಕೆಯಾಗುವುದಿಲ್ಲ ಎಂದು ಭರವಸೆ ನೀಡಿದರು.
ಒಟಿಟಿ ಉದ್ಯಮಿಗಳಿಗೆ ಸರ್ಕಾರವು ಪ್ರಗತಿಪರ ಸಾಂಸ್ಥಿಕ ಕಾರ್ಯವಿಧಾನ ಹೊರತರಲಿದೆ. ಸ್ವಯಂ ನಿಯಂತ್ರಣದ ಕಲ್ಪನೆಯೊಂದಿಗೆ ಒಂದು ಮಟ್ಟದ ವಾತಾವರಣದ ಮೈದಾನವೊಂದನ್ನು ಅಭಿವೃದ್ಧಿಪಡಿಸುತ್ತದೆ. ಅನೇಕ ಒಟಿಟಿ ಪ್ಲಾಟ್‌ಫಾರ್ಮ್‌ಗಳು ಈ ನಿಯಮಗಳನ್ನು ಸ್ವಾಗತಿಸಿವೆ ಎಂದು ಸಚಿವರು ಶ್ಲಾಘಿಸಿದರು.