ನವದೆಹಲಿ:ಮಾಲೀಕರು/ ಚಾಲಕರು ತಮ್ಮ ವಾಹನಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಕಡ್ಡಾಯವಾಗಿ ಕೊಂಡೊಯ್ಯುವ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ವಾಹನ ನಿಯಮಾವಳಿ 1989ಕ್ಕೆ ತಿದ್ದುಪಡಿ ತಂದಿದ್ದು, ಈ ಮೂಲಕ ಕೆಲವು ನಿಯಮಗಳನ್ನ ಬದಲಾವಣೆ ಮಾಡಿದೆ.
ಉದ್ದೇಶಿತ ಈ ಹೊಸ ಟ್ರಾಫಿಕ್ ನಿಯಮಗಳು ಅಕ್ಟೋಬರ್ 1ರಿಂದ (ಗುರುವಾರ) ಜಾರಿಗೆ ಬರಲಿವೆ. ಡಿಜಿಟಲೀಕರಣ ಹೆಚ್ಚಿಸಲು ಮತ್ತು ಸಂಚಾರ ಪೊಲೀಸ್ ಅಧಿಕಾರಿಗಳಿಂದ ಚಾಲಕರಿಗೆ ಕಿರುಕುಳ ನೀಡುವುದನ್ನು ತಡೆಗಟ್ಟಲು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯ (ಎಂಒಆರ್‌ಟಿಎಚ್) 2020ರ ಅಕ್ಟೋಬರ್ 1ರಿಂದ ಕೇಂದ್ರ ಮೋಟಾರು ವಾಹನ ನಿಯಮ 1989 ರಲ್ಲಿ ವಿವಿಧ ತಿದ್ದುಪಡಿಗಳನ್ನು ತಂದಿದೆ.
1) ವಾಹನ ದಾಖಲೆಗಳ ಭೌತಿಕ ಪರಿಶೀಲನೆ ಸ್ಥಗಿತ
ಎಲೆಕ್ಟ್ರಾನಿಕ್ ವಿಧಾನಗಳ ಮೂಲಕ ಎಲ್ಲಾ ವಾಹನ ದಾಖಲೆಗಳನ್ನು ಪರಿಶೀಲನೆಗೆ ಒಳಪಡಿಸಲಾಗುತ್ತದೆ. ಸಂಚಾರ ನಿಯಮ ಉಲ್ಲಂಘಿಸುವವರ ಪರಿಶೀಲನೆಗೆ ಇ - ಚಲನ್‌ಗಳು ಸಹ ಸರ್ಕಾರದ ಡಿಜಿಟಲ್ ಪೋರ್ಟಲ್‌ನಲ್ಲಿ ಲಭ್ಯವಾಗುತ್ತವೆ. ದೇಶಾದ್ಯಂತ ಏಕರೂಪದ ವಾಹನ ಚಾಲನಾ ಪರವಾನಗಿ (ಡಿಎಲ್) ಮತ್ತು ನೋಂದಣಿ ಪ್ರಮಾಣ ಪತ್ರಗಳನ್ನು (ಆರ್‌ಸಿ) ವಿತರಿಸಲಾಗುತ್ತದೆ.
2) ಡಿಎಲ್ ರದ್ದತಿ
ರಸ್ತೆ ನಿಯಮ ಉಲ್ಲಂಘಿಸಿದ ಚಾಲಕರ ಚಾಲನಾ ಪರವಾನಗಿಯನ್ನು ರದ್ದು ಹಾಗೂ ಹಿಂತೆಗೆದುಕೊಳ್ಳುವ ಬಗ್ಗೆ ವರದಿ ಮಾಡಬೇಕಾದ ಪರಿಸ್ಥಿತಿ ಎದುರಾದರೆ, ಅಧಿಕಾರಿಗಳು ಡಿಜಿಟಲ್ ಪೋರ್ಟಲ್‌ನಲ್ಲಿ ದಾಖಲಿಸಬಹುದು ಮತ್ತು ವರದಿ ಮಾಡಬಹುದು. ಪೋರ್ಟಲ್ ಅನ್ನು ಆಗಾಗ ನವೀಕರಿಸಲಾಗುತ್ತದೆ.
3) ಹೊಸ ವ್ಯವಸ್ಥೆಯಿಂದ ಯಾರೂ ತಪ್ಪಿಸಿಕೊಳ್ಳುವಂತಿಲ್ಲ