ಕರ್ನಾಟಕ

karnataka

ETV Bharat / business

ಬ್ಯಾಂಕೇತರ ಹಣಕಾಸು ಸಂಸ್ಥೆಗಳ ಲಾಭಾಂಶ ಘೋಷಣೆಯಿಂದ ಬ್ಯಾಲೆನ್ಸ್​ಶೀಟ್ ವೃದ್ಧಿ: ಇಂಡಿಯಾ ರೇಟಿಂಗ್ಸ್​ - RBI's draft circular on NBFCs

ಆರ್​ಬಿಐನ ಲಾಭಾಂಶ ಘೋಷಿಸುವ ಕ್ರಮವು ಬ್ಯಾಂಕೇತರ ಹಣಕಾಸು ಸಂಸ್ಥೆಗಳ ಹತೋಟಿ ಅನುಪಾತ ಸುಧಾರಿಸುತ್ತದೆ. ಈ ಮೂಲಕ ಹೊಸ ಸಾಲಕ್ಕಾಗಿ ಮೀಸಲು ಬ್ಯಾಲೆನ್ಸ್ ಶೀಟ್ ಬಲಪಡಿಸಲು ಸಹಾಯಕವಾಗುತ್ತದೆ. ತಪ್ಪಿತಸ್ಥ ಸ್ವತ್ತುಗಳ ವಿರುದ್ಧ ಉತ್ತಮ ನಿಬಂಧನೆ ರಚಿಸುವಲ್ಲಿ ಕೂಡ ನೆರವಾಗುತ್ತದೆ ಎಂದು ಹೇಳಿದೆ.

RBI
ಆರ್​ಬಿಐ

By

Published : Dec 23, 2020, 6:00 PM IST

ಮುಂಬೈ: ಬ್ಯಾಂಕೇತರ ಹಣಕಾಸು ಸಂಸ್ಥೆಗಳು (ಎನ್‌ಬಿಎಫ್‌ಸಿ) ಲಾಭಾಂಶ ಘೋಷಿಸುವ ಕುರಿತು ಭಾರತೀಯ ರಿಸರ್ವ್ ಬ್ಯಾಂಕ್ ಹೊರಡಿಸಿದ ಇತ್ತೀಚಿನ ಕರಡು ಸುತ್ತೋಲೆ, ಸರ್ಕಾರಿ ಸ್ವಾಮ್ಯದ ಎನ್‌ಬಿಎಫ್‌ಸಿಗಳ ಮೇಲೆ ತಟಸ್ಥದಿಂದ ಸಕಾರಾತ್ಮಕ ಪರಿಣಾಮ ಬೀರಲಿದೆ ಎಂದು ಇಂಡಿಯಾ ರೇಟಿಂಗ್ಸ್ ಆ್ಯಂಡ್ ರಿಸರ್ಚ್ (ಇಂಡ್​-ರಾ) ತಿಳಿಸಿದೆ.

ಆರ್​ಬಿಐನ ಈ ಕ್ರಮವು ಅವುಗಳ ಹತೋಟಿ ಅನುಪಾತ ಸುಧಾರಿಸುತ್ತದೆ. ಈ ಮೂಲಕ ಹೊಸ ಸಾಲಕ್ಕಾಗಿ ಮೀಸಲು ಬ್ಯಾಲೆನ್ಸ್ ಶೀಟ್ ಬಲಪಡಿಸಲು ಸಹಾಯಕವಾಗುತ್ತದೆ. ತಪ್ಪಿತಸ್ಥ ಸ್ವತ್ತುಗಳ ವಿರುದ್ಧ ಉತ್ತಮ ನಿಬಂಧನೆ ರಚಿಸುವಲ್ಲಿ ಕೂಡ ನೆರವಾಗುತ್ತದೆ ಎಂದು ಹೇಳಿದೆ.

ಇದನ್ನೂ ಓದಿ: ದೀದಿ ಕ್ಯಾಬಿನೆಟ್​ ಸಭೆಗೆ ಗೈರಾದ ನಾಲ್ವರು ಮಿನಿಸ್ಟರ್ಸ್ಸ್​​.. ಶುರುವಾಯ್ತಾ ರಾಜೀನಾಮೆ ಪರ್ವ..!!?

ಎನ್‌ಬಿಎಫ್‌ಸಿಗಳ ಅಪಾಯದ ವಿವರವು ವೇಗವಾಗಿ ಬದಲಾಗುತ್ತಿದ್ದು, ಲಾಭಾಂಶ ಘೋಷಣೆಗೆ ನಿಯಂತ್ರಕ ಚೌಕಟ್ಟಿನ ಅವಶ್ಯಕತೆಯಿದೆ. ಹೆಚ್ಚುತ್ತಿರುವ ಸಾಲದ ಬೇಡಿಕೆಯೊಂದಿಗೆ ಆರ್ಥಿಕತೆಯಲ್ಲಿ ಎನ್‌ಬಿಎಫ್‌ಸಿಗಳ ಪಾತ್ರ ಹಿರಿದಾಗುತ್ತಿದೆ ಎಂದು ಇಂಡ್​-ರಾ ಅಭಿಪ್ರಾಯಪಟ್ಟಿದೆ.

ಠೇವಣಿ ರಹಿತ ಮತ್ತು ವ್ಯವಸ್ಥಿತವಾಗಿ ಎನ್‌ಬಿಎಫ್‌ಸಿಗಳು ಬಂಡವಾಳದಿಂದ ಅಪಾಯದ ತೂಕದ ಸ್ವತ್ತುಗಳ ಅನುಪಾತವು ಶೇ 15ಕ್ಕಿಂತ ಕಡಿಮೆ ಮತ್ತು ನಿವ್ವಳ ಕಾರ್ಯನಿರ್ವಹಿಸದ ಮುಂಗಡ ಶೇ 6ಕ್ಕಿಂತ ಹೆಚ್ಚಿಲ್ಲ ಎಂಬುದು ಕರಡಿನಲ್ಲಿದೆ.

ಸಾರ್ವಜನಿಕ ಆಸ್ತಿ ನಿರ್ವಹಣಾ ಇಲಾಖೆ (ಡಿಐಪಿಎಎಂ) ಪ್ರಕಾರ, ಕೇಂದ್ರ ಸಾರ್ವಜನಿಕ ವಲಯದ ಉದ್ಯಮಗಳು ತೆರಿಗೆ ಬಳಿಕ ಲಾಭದ ಕನಿಷ್ಠ ವಾರ್ಷಿಕ ಲಾಭಾಂಶ ಅಥವಾ ನಿವ್ವಳ ಮೌಲ್ಯ ಶೇ 5ರಷ್ಟಲ್ಲಿ ಯಾವುದು ಹೆಚ್ಚಿದೆಯೋ ಅದನ್ನು ಪಾವತಿಸಬೇಕಾಗುತ್ತದೆ.

ABOUT THE AUTHOR

...view details