ಚೆನ್ನೈ: ದೇಶದ ಆರ್ಥಿಕ ಸ್ಥಿರತೆ ಮತ್ತು ದೃಢತೆಯನ್ನು ಎಲ್ಲ ಪಾಲುದಾರರು ಸಂರಕ್ಷಿಸಿ ಪೋಷಿಸಬೇಕಿದೆ ಎಂದು ಆರ್‌ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಹೇಳಿದ್ದಾರೆ.
ವರ್ಚ್ಯುವಲ್ ಪ್ಲಾಟ್‌ಫಾರ್ಮ್ ಮೂಲಕ 39ನೇ ನಾನಿ ಪಾಲ್ಖಿವಾಲಾ ಸ್ಮಾರಕ ಉಪನ್ಯಾಸದಲ್ಲಿ ಮಾತನಾಡಿದ ಅವರು, ಅತ್ಯಾಧುನಿಕ ರಾಷ್ಟ್ರೀಯ ಪೇಮೆಂಟ್ ಮೂಲಸೌಕರ್ಯ ಜಾರಿಗೆ ತರಲು ಕೇಂದ್ರ ಬ್ಯಾಂಕ್ ತನ್ನ ನಿರ್ದೇಶನಗಳನ್ನು ನೀಡಿದೆ. ಸುರಕ್ಷಿತ, ದಕ್ಷತೆ ಮತ್ತು ಪರಿಣಾಮಕಾರಿಯಾಗಿ ದೃಢವಾದ ಪಾವತಿಗಳ ವಾತಾವರಣದ ವ್ಯವಸ್ಥೆ ನಿರ್ಮಾಣವಾಗಲಿ ಎಂದರು.