ಕರ್ನಾಟಕ

karnataka

ಆರ್ಥಿಕತೆ ಅಗತ್ಯಗಳನ್ನು ಪೂರೈಸಲು ಸಾಲದ ಹರಿವು ಹೆಚ್ಚಿಸಬೇಕು: ಪ್ರಧಾನಿ ಮೋದಿ

By

Published : Feb 26, 2021, 3:01 PM IST

ಹಣಕಾಸು ಕ್ಷೇತ್ರದ ಬಜೆಟ್ ಪ್ರಸ್ತಾಪಗಳ ಕುರಿತು ವೆಬಿ​ನಾರ್ ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ನಮ್ಮ ಆರ್ಥಿಕತೆಯು ಬೆಳೆಯುತ್ತಿರುವಾಗ ಮತ್ತು ವೇಗವಾಗಿ ವೃದ್ಧಿಸುತ್ತಿರುವಾಗ ಸಾಲದ ಹರಿವು ಕೂಡ ಅಷ್ಟೇ ಮುಖ್ಯವಾಗಿದೆ. ಹೊಸ ಉದ್ಯಮಗಳಿಗೆ ಕ್ರೆಡಿಟ್ ಹೇಗೆ ತಲುಪುತ್ತದೆ ಎಂಬುದರತ್ತ ಕೂಡ ನೋಡಬೇಕು ಎಂದರು.

Modi
Modi

ನವದೆಹಲಿ: ವೇಗವಾಗಿ ಆರ್ಥಿಕತೆಯ ಅಗತ್ಯತೆಗಳನ್ನು ಪೂರೈಸಲು ವಹಿವಾಟುಗಳಿಗೆ ಸಾಲದ ಹರಿವು ಹೆಚ್ಚಿಸುವ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಒತ್ತಿ ಹೇಳಿದರು. ಫಿನ್​ಟೆಕ್ (ಹಣಕಾಸಿನ ತಂತ್ರಜ್ಞಾನ) ಮತ್ತು ಸ್ಟಾರ್ಟ್ಅಪ್​​ಳಿಗೆ ಹಣಕಾಸು ಉತ್ಪನ್ನಗಳನ್ನು ತಕ್ಕಂತೆ ಮಾಡಬೇಕಾಗುತ್ತದೆ ಎಂದರು.

ಖಾಸಗಿ ವಲಯವನ್ನು ಉತ್ತೇಜಿಸಲು ಸರ್ಕಾರದ ಪ್ರಯತ್ನವಾಗಿದ್ದರೂ ಬ್ಯಾಂಕಿಂಗ್ ಮತ್ತು ವಿಮೆಯಲ್ಲಿ ಸಾರ್ವಜನಿಕ ವಲಯದ ಉಪಸ್ಥಿತಿಯ ಅಗತ್ಯವಿದೆ ಎಂದು ಹೇಳಿದರು.

ನಮ್ಮ ಆರ್ಥಿಕತೆಯು ಬೆಳೆಯುತ್ತಿರುವಾಗ ಮತ್ತು ವೇಗವಾಗಿ ವೃದ್ಧಿಸುತ್ತಿರುವಾಗ ಸಾಲದ ಹರಿವು ಕೂಡ ಅಷ್ಟೇ ಮುಖ್ಯವಾಗಿದೆ. ಹೊಸ ಉದ್ಯಮಗಳಿಗೆ ಕ್ರೆಡಿಟ್ ಹೇಗೆ ತಲುಪುತ್ತದೆ ಎಂಬುದರತ್ತ ಕೂಡ ನೋಡಬೇಕು. ಈಗ ನೀವು ಸ್ಟಾರ್ಟ್ಅಪ್ ಮತ್ತು ಫಿನ್​ಟೆಕ್​ಗೆ ಹೊಸ ಮತ್ತು ಉತ್ತಮ ಹಣಕಾಸು ಉತ್ಪನ್ನಗಳ ರಚನೆಯತ್ತ ಗಮನ ಹರಿಸಬೇಕಾಗುತ್ತದೆ ಎಂದು ಹಣಕಾಸು ಕ್ಷೇತ್ರದ ಬಜೆಟ್ ಪ್ರಸ್ತಾಪಗಳ ಕುರಿತು ವೆಬ್​ನಾರ್ ಉದ್ದೇಶಿಸಿ ಹೇಳಿದರು.

ಇದನ್ನೂ ಓದಿ: ಸದ್ಯಕ್ಕೆ ನಿರಾಳ.. ದಿಢೀರ್​ ಏರಿಕೆಯಾಗಿ ಕಂಗಾಲು ಮಾಡುತ್ತಾ ಇಂಧನ ದರ?

ಹಣಕಾಸು ಸೇವಾ ವಲಯನ್ನು ಸದೃಢವಾಗಿಸಲು ಸರ್ಕಾರ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಸರಿಯಾದ ಉದ್ದೇಶದಿಂದ ತೆಗೆದುಕೊಳ್ಳುವ ಎಲ್ಲ ವ್ಯವಹಾರ ನಿರ್ಧಾರಗಳಿಗೆ ಸರ್ಕಾರ ಬದ್ಧವಾಗಿ ನಿಲ್ಲುತ್ತದೆ ಎಂದು ಭರವಸೆ ನೀಡಿದರು.

ABOUT THE AUTHOR

...view details