ನವದೆಹಲಿ:ರಸ್ತೆ ಸುರಕ್ಷತೆಯ ಹಿತದೃಷ್ಟಿಯಿಂದ ಮೋಟಾರು ವಾಹನ (ತಿದ್ದುಪಡಿ) ಮಸೂದೆ 2019ಕ್ಕೆ ಸಂಸತ್ತು ಬುಧವಾರ ಅನುಮೋದನೆ ನೀಡಿದೆ.
ಸಂಚಾರ ನಿಯಮ ಉಲ್ಲಂಘನೆಗೆ ಭಾರಿ ದಂಡ ಮತ್ತು ತಂತ್ರಜ್ಞಾನ ಅಳವಡಿಕೆ ಮೂಲಕ ಭ್ರಷ್ಟಾಚಾರ ತಡೆಯುವುದು ಈ ಮಸೂದೆಯ ಗುರಿ ಎಂದು ಸರ್ಕಾರ ಹೇಳಿದೆ. ಪರಿಷ್ಕೃತ ನೂತನ ಕಾಯ್ದೆಯಲ್ಲಿ ನಿಯಮ ಉಲ್ಲಂಘಿಸುವ ವಾಹನ ಸಂಚಾರರಿಗೆ ಬೀಳಲಿರುವ ದಂಡದ ಪಾವತಿಯ ವಿವರ ಇಲ್ಲಿದೆ.
ಮೋಟಾರು ವಾಹನ (ತಿದ್ದುಪಡಿ) ಮಸೂದೆ 2019 ಅನ್ವಯ, ಸಂಚಾರ ನಿಯಮ ಉಲ್ಲಂಘನೆಯ ದಂಡದ ವಿವರ ಮಸೂದೆಯಲ್ಲಿನ ಪ್ರಮುಖ ಪ್ರಸ್ತಾವನೆಗಳು:
ಸರಕು ಸಾಗಾಟ ಮತ್ತು ಪ್ರಯಾಣಿಕ ಸಂಚಾರ ವ್ಯವಸ್ಥಿತಗೊಳಿಸಲು ಮಾರ್ಗದರ್ಶಿ ಸೂತ್ರ ರಚನೆ
ಚಾಲನ ಕಲಿಕಾ ಪರವಾನಗಿ ನೀಡಲು ಆನ್ಲೈನ್ ವ್ಯವಸ್ಥೆ
ಅಪಘಾತ ಸಂತ್ರಸ್ತರಿಗೆ ಮತ್ತು ಅವರ ಕುಟುಂಬದವರಿಗೆ ವಿಮಾ ಪರಿಹಾರಕ್ಕೆ ತ್ವರಿತ ಕ್ರಮ
ಅಪಘಾತದಲ್ಲಿ ನೆರವಾದವರಿಗೆ ರಕ್ಷಣೆ
ನಿಯಮಗಳ ಉಲ್ಲಂಘನೆಗೆ ವಿಧಿಸಲಾಗುವ ದಂಡ
ತುರ್ತು ವಾಹನಗಳಿಗೆ ದಾರಿ ಬಿಡದಿದ್ದರೆ- ₹ 10,000 ದಂಡ, 6 ತಿಂಗಳು ಜೈಲು
ಅತಿ ವೇಗದ ಚಾಲನೆ- ₹ 1000- ₹ 2000 ದಂಡ, ತಿಂಗಳು ಜೈಲು
ವಿಮೆ ಇಲ್ಲದೆ ಡ್ರೈವಿಂಗ್- ₹ 2000
ಹೆಲ್ಮೆಟ್ ಧರಿಸದೆ ಡ್ರೈವಿಂಗ್- ₹ 1000
ಬಾಲಾಪರಾಧಿಗಳ ರಸ್ತೆ ಅಪರಾಧ ಪ್ರಕರಣ- ₹ 25,000
ಕುಡಿದು ವಾಹನ ಚಾಲನೆ- ₹ 10,000 ದಂಡ, 6 ತಿಂಗಳ ಜೈಲು
ಸಿಗ್ನಲ್ ಜಂಪ್, ಚಾಲನೆ ವೇಳೆ ಮೊಬೈಲ್ ಬಳಕೆ ಇತರೆ ₹ 5,000 ದಂಡ, 6-12 ತಿಂಗಳು ಜೈಲು