ನವದೆಹಲಿ: ಸಂಚಾರ ನಿಯಮಗಳ ಉಲ್ಲಂಘನೆ ನಿಯಂತ್ರಣಕ್ಕೆ ಸೆಪ್ಟೆಂಬರ್ 1ರಿಂದ ಜಾರಿಗೆ ತರಲಾದ ನೂತನ ಮೋಟಾರು ವಾಹನ ತಿದ್ದುಪಡಿ ಕಾಯ್ದೆಯ ಬಳಿಕ ಹೆಚ್ಚಿನ ವಾಣಿಜ್ಯ ವಾಹನಗಳು ನಿಯಮ ಉಲ್ಲಂಘಿಸುತ್ತಿಲ್ಲ. ಕಳೆದ ಎಂಟು ತಿಂಗಳ ಮಾಸಿಕ ಸರಾಸರಿಗೆ ಹೋಲಿಸಿದರೆ ಸಾರಿಗೆ ಇಲಾಖೆಯ ಎನ್ಫೋರ್ಸ್ಮೆಂಟ್ ವಿಂಗ್ ದಂಡ ವಿಧಿಸಿದ ವಾಹನಗಳ ಸಂಖ್ಯೆಯು ಸೆಪ್ಟೆಂಬರ್‌ನಲ್ಲಿ ಶೇ.70ಕ್ಕಿಂತ ಹೆಚ್ಚಾಗಿದೆ ಎಂಬುದು ಸುದ್ದಿ ಮಾಧ್ಯಮವೊಂದು ವರದಿ ಮಾಡಿದೆ.
ಸೆಪ್ಟೆಂಬರ್‌ನಲ್ಲಿ ಎನ್ಫೋರ್ಸ್ಮೆಂಟ್ ವಿಂಗ್, 6,458 ವಾಹನಗಳನ್ನು ವಿವಿಧ ಅಪರಾಧಗಳಿಗೆ ಸಂಬಂಧಿಸಿದಂತೆ ವಿಚಾರಣೆಗೆ ಒಳಪಡಿಸಿತು. ಇದು ಜನವರಿಯಿಂದ ಅಗಸ್ಟ್‌ವರೆಗೆ ಜರುಗಿಸಿದ ಕಾನೂನು ಕ್ರಮಗಳಿಗೆ ಹೋಲಿಸಿದರೆ ಸರಾಸರಿ 22,044 ವಾಹನಗಳಿಂದ ಶೇ. 70.7ರಷ್ಟು ಕುಸಿತ ಕಂಡು ಬಂದಿದೆ. ತಿಂಗಳಿಗೆ ಒಮ್ಮೆ ಸಂಖ್ಯೆಗಳನ್ನು ಗಣನೆಗೆ ತೆಗೆದುಕೊಂಡರೂ ಅಗಸ್ಟ್‌ನಲ್ಲಿ 17,227 ವಾಹನಗಳನ್ನು ವಿಚಾರಣೆಗೆ ಒಳಪಡಿಸಿದಂತಾಗುತ್ತದೆ ಎಂದು ವರದಿಯಲ್ಲಿದೆ.