ಕರ್ನಾಟಕ

karnataka

ETV Bharat / business

ಅಚ್ಚರಿಯಾದ್ರೂ ಇದು ಸತ್ಯ.. ಹೆಚ್‌-1 ಬಿ ವೀಸಾ ಅಡಿ ಕನಿಷ್ಠ ವೇತನಕ್ಕೆ ಟೆಕ್ಕಿಗಳ ನೇಮಕ - ಅಮೆರಿಕದ ಎಚ್​ 1ಬಿ ವೀಸಾ

ಅಮೆರಿಕದ ಬಹುತೇಕ ಕಂಪನಿಗಳು ಹೆಚ್​-1ಬಿ ಅಡಿ ಭರ್ತಿ ಮಾಡುವ ಉದ್ಯೋಗಗಳಿಗೆ ಸ್ಥಳೀಯ ಸರಾಸರಿ ವೇತನಕ್ಕಿಂತ ಕಡಿಮೆ ಸಂಬಳ ಪಾವತಿಸಲು ಕಾನೂನುಬದ್ಧ ನಿಯಮಗಳ ಲಾಭ ಪಡೆದುಕೊಳ್ಳುತ್ತಾರೆ ಎಂದು ಆರ್ಥಿಕ ನೀತಿ ಸಂಸ್ಥೆ ಬಿಡುಗಡೆ ಮಾಡಿದ ವರದಿಯಲ್ಲಿ ತಿಳಿಸಲಾಗಿದೆ.

US H-1B visa
ಎಚ್‌-1 ಬಿ ವೀಸಾ

By

Published : May 6, 2020, 5:22 PM IST

Updated : May 6, 2020, 5:46 PM IST

ವಾಷಿಂಗ್ಟನ್: ಅಮೆರಿಕದ ಫೇಸ್‌ಬುಕ್, ಗೂಗಲ್, ಆ್ಯಪಲ್ ಮತ್ತು ಮೈಕ್ರೋಸಾಫ್ಟ್ ಸೇರಿ ಇತರ ಕಂಪನಿಗಳು ವಲಸೆ ಕಾರ್ಮಿಕರಿಗೆ ಮಾರುಕಟ್ಟೆ ವೇತನಕ್ಕಿಂತ ಕಡಿಮೆ ವೇತನ ನೀಡಲು ತಾತ್ಕಾಲಿಕ ಕೆಲಸದಡಿ ಹೆಚ್-1 ಬಿ ವೀಸಾ ಯೋಜನೆ ಬಳಸಿಕೊಳ್ಳುತ್ತಿದ್ದಾರೆ ಎಂದು ಹೊಸ ವರದಿಯೊಂದು ಹೇಳಿದೆ.

ಇಲ್ಲಿನ ಬಹುತೇಕ ಕಂಪನಿಗಳು ಹೆಚ್​-1ಬಿ ಅಡಿ ಭರ್ತಿ ಮಾಡುವ ಉದ್ಯೋಗಗಳಿಗೆ ಸ್ಥಳೀಯ ಸರಾಸರಿ ವೇತನಕ್ಕಿಂತ ಕಡಿಮೆ ಸಂಬಳ ಪಾವತಿಸಲು ಕಾನೂನುಬದ್ಧ ನಿಯಮಗಳ ಲಾಭ ಪಡೆದುಕೊಳ್ಳುತ್ತಾರೆ ಎಂದು ಆರ್ಥಿಕ ನೀತಿ ಸಂಸ್ಥೆ ಬಿಡುಗಡೆ ಮಾಡಿದ ವರದಿಯಲ್ಲಿ ತಿಳಿಸಲಾಗಿದೆ.

ಅಮೆಜಾನ್, ಮೈಕ್ರೋಸಾಫ್ಟ್, ವಾಲ್​​ ಮಾರ್ಟ್, ಗೂಗಲ್, ಆ್ಯಪಲ್ ಮತ್ತು ಫೇಸ್​ಬುಕ್ ಸೇರಿದಂತೆ ಅಮೆರಿಕದ ಅಗ್ರ 30 ಸಂಸ್ಥೆಗಳು ಇದರ ಪ್ರಯೋಜನೆ ಪಡೆಯುತ್ತಿವೆ. ಹೆಚ್​-1ಬಿ ಅಡಿ ಭರ್ತಿ ಮಾಡುವ ಉದ್ಯೋಗಗಳಿಗೆ ಸ್ಥಳೀಯ ಸರಾಸರಿ ವೇತನಕ್ಕಿಂತ ಕಡಿಮೆ ಸಂಬಳ ಪಾವತಿಸಲು, ಇಲ್ಲಿನ ಕಾನೂನಿನ ನಿಯಮಗಳ ಲಾಭ ಪಡೆದುಕೊಳ್ಳುತ್ತಿದ್ದಾರೆ ಎಂದು ಆರ್ಥಿಕ ನೀತಿ ಸಂಸ್ಥೆ ಬಿಡುಗಡೆ ಮಾಡಿದ ವರದಿಯಲ್ಲಿದೆ.

ಅಮೆರಿಕ ಕಾರ್ಮಿಕ ಇಲಾಖೆ (ಡಿಒಎಲ್), ಹೆಚ್-1ಬಿ ಹುದ್ದೆಗಳಲ್ಲಿ 60 ಪ್ರತಿಶತದಷ್ಟು ಸ್ಥಳೀಯ ಸರಾಸರಿ ವೇತನಕ್ಕಿಂತ ಕಡಿಮೆ ವೇತನ ಮಟ್ಟ ನಿಗದಿಪಡಿಸುವ ನಿಯಮವಿದೆ ಎಂದು ಡೇನಿಯಲ್ ಕೋಸ್ಟಾ ಮತ್ತು ರಾನ್ ಹಿರಾ ಬರೆದಿರುವ ರಿಪೋರ್ಟ್​ ಹೇಳುತ್ತಿದೆ.

Last Updated : May 6, 2020, 5:46 PM IST

ABOUT THE AUTHOR

...view details