ಕರ್ನಾಟಕ

karnataka

ಕೃಷಿಯಲ್ಲಿ ಖಾಸಗಿಯವರ ಭಾಗವಹಿಸುವಿಕೆ ಹೆಚ್ಚಿಸುವ ಸಮಯ ಬಂದಿದೆ : ಪ್ರಧಾನಿ

By

Published : Mar 1, 2021, 12:53 PM IST

ಗೋಧಿ ಮತ್ತು ಭತ್ತಕ್ಕೆ ಸೀಮಿತವಾಗಿರದಂತೆ ರೈತರಿಗೆ ಪರ್ಯಾಯ ಬೆಳೆಗಳನ್ನು ಬೆಳೆಯುವ ಮಾರ್ಗಗಳನ್ನು ನೀಡಬೇಕು. ದೇಶದ ಕೃಷಿ ಕ್ಷೇತ್ರವನ್ನು ಜಾಗತಿಕ ಸಂಸ್ಕರಿಸಿದ ಆಹಾರ ಮಾರುಕಟ್ಟೆಗೆ ವಿಸ್ತರಿಸಬೇಕು. ಗ್ರಾಮಗಳ ಉದ್ದಕ್ಕೂ ಕೃಷಿ-ಕೈಗಾರಿಕೆಗಳ ಸಮೂಹವನ್ನು ಹೆಚ್ಚಿಸುವುದರ ಮೂಲಕ ಗ್ರಾಮೀಣ ಜನರು ಕೃಷಿಗೆ ಸಂಬಂಧಿಸಿದ ಉದ್ಯೋಗವನ್ನು ಪಡೆಯಬಹುದು..

pm-modi
pm-modi

ನವದೆಹಲಿ :ಸಾರ್ವಜನಿಕ-ಖಾಸಗಿ ಸಹಭಾಗಿತ್ವದ ಮೂಲಕ ದೇಶದಲ್ಲಿ ಆಹಾರ ಸಂಸ್ಕರಣಾ ಕ್ರಾಂತಿ ತರುವ ಅವಶ್ಯಕತೆಯಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ.

ಕೃಷಿ ಕ್ಷೇತ್ರಕ್ಕೆ ಬಜೆಟ್​ನಲ್ಲಿ ಕೈಗೊಂಡಿರುವ ಕ್ರಮಗಳ ಕುರಿತು ವೆಬ್‌ನಾರ್ ಉದ್ದೇಶಿಸಿ ಮಾತನಾಡಿದ ಅವರು, ಮುಂದಿನ ಹಣಕಾಸು ವರ್ಷದಲ್ಲಿ ಬಜೆಟ್‌ನಲ್ಲಿ ಸರ್ಕಾರವು ಕೈಗೊಂಡ ವಿವಿಧ ಉಪಕ್ರಮಗಳನ್ನು ಎತ್ತಿ ತೋರಿಸುತ್ತದೆ. ಕೃಷಿ ಸಾಲದ ಗುರಿಯನ್ನು ಪ್ರಸಕ್ತ ಹಣಕಾಸು ವರ್ಷದಲ್ಲಿ 15 ಲಕ್ಷ ಕೋಟಿ ರೂ.ಗಳಿಂದ 16.5 ಲಕ್ಷ ಕೋಟಿ ರೂ.ಗೆ ಹೆಚ್ಚಿಸಲಾಗಿದೆ ಎಂದರು.

12 ಕೋಟಿ ಸಣ್ಣ ಮತ್ತು ಹಿಡುವಳಿ ರೈತರ ಅನುಕೂಲಕ್ಕಾಗಿ ಸರ್ಕಾರ ವಿವಿಧ ನಿರ್ಧಾರಗಳನ್ನು ತೆಗೆದುಕೊಂಡಿದೆ. ಇವರೆಲ್ಲಾ ಗ್ರಾಮೀಣ ಆರ್ಥಿಕತೆಯ ಪ್ರೇರಕ ಶಕ್ತಿಯಾಗಿದ್ದಾರೆ. ದೇಶದ ಆಹಾರ ಧಾನ್ಯಗಳ ಉತ್ಪಾದನೆಯು ಹೆಚ್ಚುತ್ತಿದೆ.

ಸುಗ್ಗಿಯ ಬಳಿಕ ಕ್ರಾಂತಿ ಅಥವಾ ಆಹಾರ ಸಂಸ್ಕರಣಾ ಕ್ರಾಂತಿ ಹಾಗೂ ಮೌಲ್ಯವರ್ಧನೆಗಳ ಅವಶ್ಯಕತೆಯಿದೆ. ಇದನ್ನು 2-3 ದಶಕಗಳ ಹಿಂದೆಯೇ ಮಾಡಿದ್ದರೆ ದೇಶಕ್ಕೆ ಇನ್ನಷ್ಟು ಒಳ್ಳೆಯದು ಆಗುತ್ತಿತ್ತು ಎಂದರು.

ಆಹಾರ ಸಂಸ್ಕರಣಾ ಕ್ಷೇತ್ರವನ್ನು ತ್ವರಿತಗತಿಯಲ್ಲಿ ಅಭಿವೃದ್ಧಿಪಡಿಸುವ ಅಗತ್ಯವಿದೆ. ಇದಕ್ಕಾಗಿ ರೈತರ ಮತ್ತು ಸಾರ್ವಜನಿಕ ಖಾಸಗಿ ಸಹಭಾಗಿತ್ವ ಹೆಚ್ಚಿಸಬೇಕಿದೆ. ಕೃಷಿ ವಲಯದಲ್ಲಿ ಸಾರ್ವಜನಿಕ ವಲಯವು ಮುಖ್ಯವಾಗಿ ಆರ್‌&ಡಿಯತ್ತ ಕೊಡುಗೆ ನೀಡಿದೆ. ಈಗ ಖಾಸಗಿ ವಲಯದ ಭಾಗವಹಿಸುವಿಕೆಯನ್ನು ಹೆಚ್ಚಿಸುವ ಸಮಯ ಬಂದಿದೆ ಎಂದು ಪ್ರಧಾನಿ ಹೇಳಿದರು.

ಇದನ್ನೂ ಓದಿ: ಜನರಿಗೆ ಪೆಟ್ರೋಲ್ ಗಾಯದ ಮೇಲೆ ಸಿಲಿಂಡರ್ ಬರೆ: 5 ದಿನದಲ್ಲಿ ಮತ್ತೆ LPG ದರ ಏರಿಕೆ!

ಗೋಧಿ ಮತ್ತು ಭತ್ತಕ್ಕೆ ಸೀಮಿತವಾಗಿರದಂತೆ ರೈತರಿಗೆ ಪರ್ಯಾಯ ಬೆಳೆಗಳನ್ನು ಬೆಳೆಯುವ ಮಾರ್ಗಗಳನ್ನು ನೀಡಬೇಕು. ದೇಶದ ಕೃಷಿ ಕ್ಷೇತ್ರವನ್ನು ಜಾಗತಿಕ ಸಂಸ್ಕರಿಸಿದ ಆಹಾರ ಮಾರುಕಟ್ಟೆಗೆ ವಿಸ್ತರಿಸಬೇಕು. ಗ್ರಾಮಗಳ ಉದ್ದಕ್ಕೂ ಕೃಷಿ-ಕೈಗಾರಿಕೆಗಳ ಸಮೂಹವನ್ನು ಹೆಚ್ಚಿಸುವುದರ ಮೂಲಕ ಗ್ರಾಮೀಣ ಜನರು ಕೃಷಿಗೆ ಸಂಬಂಧಿಸಿದ ಉದ್ಯೋಗವನ್ನು ಪಡೆಯಬಹುದು ಎಂದರು.

ಕೃಷಿ ಸಂಬಂಧಿತ ಉದ್ಯಮಗಳು ಸಾಂಕ್ರಾಮಿಕ ಅವಧಿಯಲ್ಲಿ ಉತ್ತಮ ಪ್ರದರ್ಶನ ನೀಡಿವೆ. ಗ್ರಾಮ ಮಟ್ಟದಲ್ಲಿ ಮಣ್ಣಿನ ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸುವುದು ಮತ್ತು ರೈತರಿಗೆ ತಂತ್ರಜ್ಞಾನದ ಪ್ರವೇಶದ ಬಗ್ಗೆಯೂ ಪ್ರಧಾನಿ ಒತ್ತಿ ಹೇಳಿದರು.

ABOUT THE AUTHOR

...view details