ನವದೆಹಲಿ: 2018ರಲ್ಲಿ ನಿರುದ್ಯೋಗಿಗಳು ಹಾಗೂ ಸ್ವಯಂ ಉದ್ಯೋಗಿಗಳ ಆತ್ಮಹತ್ಯೆ ಪ್ರಮಾಣ ಎಷ್ಟಿತ್ತು ಗೊತ್ತೇ?ಅಧಿಕೃತ ಅಂಕಿಅಂಶಗಳ ಪ್ರಕಾರ, ದೇಶದಲ್ಲಿ ಪ್ರತಿನಿತ್ಯ (ಸರಾಸರಿ) ಆತ್ಮಹತ್ಯೆ ಮಾಡಿಕೊಳ್ಳುವ ನಿರುದ್ಯೋಗಿಗಳ ಸಂಖ್ಯೆ 35 ಹಾಗು ಸ್ವಯಂ ಉದ್ಯೋಗಿಗಳ ಸಂಖ್ಯೆ 36 ಎಂಬ ಆತಂಕಕಾರಿ ವಿಚಾರ ಬಯಲಾಗಿದೆ!
ರೈತರಿಗಿಂತ ನಿರುದ್ಯೋಗಿಗಳು ಹಾಗೂ ಸ್ವಯಂ ಉದ್ಯೋಗಿಗಳ ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗಿದ್ದು, ಕಳೆದೊಂದು ವರ್ಷದಲ್ಲಿ 26,085 ಜನ ಸಾವನ್ನಪ್ಪಿದ್ದಾರೆ ಎಂದು ನ್ಯಾಷನಲ್ ಕ್ರೈಂ ರೆಕಾರ್ಡ್ಸ್ ಬ್ಯೂರೋ (ಎನ್ಸಿಆರ್ಬಿ) ಇತ್ತೀಚಿನ ಅಂಕಿಅಂಶಗಳ ಮೂಲಕ ತಿಳಿಸಿದೆ.
2017-18ರ ಸಾಲಿನಲ್ಲಿ ದೇಶದಲ್ಲಿ ಸುಮಾರು 12,936 ನಿರುದ್ಯೋಗಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ದೇಶದಲ್ಲಿ ಸಂಭವಿಸಿರುವ ಒಟ್ಟು ನಿರುದ್ಯೋಗಿಗಳ ಆತ್ಮಹತ್ಯೆ ಪ್ರಮಾಣ ಶೇ 9.6ರಷ್ಟಿದೆ. ಪ್ರತಿ ಎರಡು ಗಂಟೆಗೆ ಮೂವರು ನಿರುದ್ಯೋಗ ಸಮಸ್ಯೆಯಿಂದಾಗಿ ಜೀವನವನ್ನು ಮುಗಿಸುತ್ತಿದ್ದಾರೆ.