ಕರ್ನಾಟಕ

karnataka

ETV Bharat / business

'ನಿರ್ಮಲ' ಬಜೆಟ್​ಗೆ 'ರಾವಣ'ನಂತೆ ಅಡ್ಡ ಬಂದ 'ನೇರ ತೆರಿಗೆ' ಸಂಗ್ರಹ ಕುಸಿತ - ವಾಣಿಜ್ಯ ಸುದ್ದಿ

ಅಭಿವೃದ್ಧಿಯ ಹಣಕಾಸು ನಿರ್ವಹಣೆ ಮತ್ತು ವಿತ್ತೀಯ ಕೊರತೆ ನಿವಾರಣೆಯ ಸರ್ಕಾರದ ಸಾಮರ್ಥ್ಯವನ್ನು ಇದು ಪರೀಕ್ಷಿಸುತ್ತದೆ. ಮುಂಬರುವ ಬಜೆಟ್‌ನಲ್ಲಿ ಯಾವುದೇ ದೊಡ್ಡ ತೆರಿಗೆ ಕಡಿತ ಪ್ರಕಟಣೆಯ ಇದು ದೂರಾಗಿಸುತ್ತದೆ. ಮೂಲಗಳ ಪ್ರಕಾರ, ನೇರ ತೆರಿಗೆ ಸಂಗ್ರಹವು 2020ರ ಹಣಕಾಸು ವರ್ಷದ ಏಪ್ರಿಲ್-ಜನವರಿ 15ರ ಅವಧಿಯಲ್ಲಿ 7.26 ಲಕ್ಷ ಕೋಟಿ ರೂ.ಗಳಿಷ್ಟಿತ್ತು. ಹಿಂದಿನ ವರ್ಷದ ಇದೇ ಅವಧಿಯಲ್ಲಿನ 7.73 ಲಕ್ಷ ಕೋಟಿ ರೂ. ಹೋಲಿಸಿದರೇ 47,000 ಕೋಟಿ ರೂ.ಯಷ್ಟು ಕಡಿಮೆ ಆಗಿದೆ.

Budget
ಬಜೆಟ್

By

Published : Jan 21, 2020, 11:36 PM IST

ನವದೆಹಲಿ:ಭಾರತೀಯ ಆರ್ಥಿಕತೆಯ ಕೆಟ್ಟ ಓಟ ಮುಂದುವರಿದಿದೆ. ನೇರ ತೆರಿಗೆ ಸಂಗ್ರಹ ಇದೇ ಪ್ರಥಮ ಬಾರಿಗೆ ನಕರಾತ್ಮಕ ಹಾದಿಯಲ್ಲಿ ಸಾಗುತ್ತಿದೆ.

ಪ್ರಸಕ್ತ ಹಣಕಾಸು ವರ್ಷದಲ್ಲಿ ಜನವರಿ 15ರವರೆಗಿನ ನೇರ ತೆರಿಗೆ ಸಂಗ್ರಹವು ಈ ಹಿಂದಿನ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇ 6.1ರಷ್ಟು ಕುಸಿದಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.

ಅಭಿವೃದ್ಧಿಯ ಹಣಕಾಸು ನಿರ್ವಹಣೆ ಮತ್ತು ವಿತ್ತೀಯ ಕೊರತೆ ನಿವಾರಣೆಯ ಸರ್ಕಾರದ ಸಾಮರ್ಥ್ಯವನ್ನು ಇದು ಪರೀಕ್ಷಿಸುತ್ತದೆ. ಮುಂಬರುವ ಬಜೆಟ್‌ನಲ್ಲಿ ಯಾವುದೇ ದೊಡ್ಡ ತೆರಿಗೆ ಕಡಿತ ಪ್ರಕಟಣೆಯ ಇದು ದೂರಾಗಿಸುತ್ತದೆ. ಮೂಲಗಳ ಪ್ರಕಾರ, ನೇರ ತೆರಿಗೆ ಸಂಗ್ರಹವು 2020ರ ಹಣಕಾಸು ವರ್ಷದ ಏಪ್ರಿಲ್-ಜನವರಿ 15ರ ಅವಧಿಯಲ್ಲಿ 7.26 ಲಕ್ಷ ಕೋಟಿ ರೂ.ಗಳಿಷ್ಟಿತ್ತು. ಹಿಂದಿನ ವರ್ಷದ ಇದೇ ಅವಧಿಯಲ್ಲಿನ 7.73 ಲಕ್ಷ ಕೋಟಿ ರೂ. ಹೋಲಿಸಿದರೇ 47,000 ಕೋಟಿ ರೂ.ಯಷ್ಟು ಕಡಿಮೆ ಆಗಿದೆ.

ದೀರ್ಘ ಅವಧಿಯ ಬಳಿಕ ತೆರಿಗೆ ಸಂಗ್ರಹವು ಹಿಂದಿನದ ದರಕ್ಕಿಂತ ಕಡಿಮೆಯಾಗಿದೆ. ಈಗಾಗಲೇ ಅಭಿವೃದ್ಧಿಯು ಪ್ರಸ್ತುತ ಆರ್ಥಿಕ ಬಿಕ್ಕಟ್ಟುಗಳಿಂದ ಇನ್ನಷ್ಟು ಕೆಳಕ್ಕೆ ಕುಸಿಯಬಹುದು. ಚೇತರಿಸಿಕೊಳ್ಳಲು ಹೆಚ್ಚು ಸಮಯ ತೆಗೆದುಕೊಳ್ಳಬಹುದು ಎಂಬ ಎಚ್ಚರಿಕೆಯ ಗಂಟೆಹೊಡೆದಿದೆ.

ಸೆಪ್ಟೆಂಬರ್‌ನಲ್ಲಿ ಕಾರ್ಪೊರೇಟ್ ತೆರಿಗೆ ದರ ಕಡಿತಗೊಳಿಸುವುದಾಗಿ ಕೇಂದ್ರ ಸರ್ಕಾರದ ನಿರ್ಧರಿಸಿತ್ತು. ಆರ್ಥಿಕ ಕುಸಿತ ಮತ್ತು ಇಲಾಖೆಯಲ್ಲಿನ ಪುನಾರಚನೆಯ ಸಂಯೋಜನೆಯೇ ಈ ಕೊರತೆಗೆ ಮುಖ್ಯ ಕಾರಣ ಎಂದು ಕಂದಾಯ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.

ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಅವರು ಕಾರ್ಪೊರೇಟ್‌ಗಳ ಮೇಲಿನ ತೆರಿಗೆ ದರವನ್ನು ಶೇ 35ರಿಂದ 25ಕ್ಕೆ ಇಳಿಸಿದರು. ಎಲ್ಲ ವಿನಾಯಿತಿಗಳನ್ನು ತ್ಯಜಿಸಲು ಸಿದ್ಧವಿರುವ ಕಂಪನಿಗಳಿಗೆ ಶೇ 22ರಷ್ಟು ತೆರಿಗೆ ದರ ಘೋಷಿಸಿದರು. ಇದರ ಜತೆಗೆ ಹೊಸದಾಗಿ ಉತ್ಪಾದನಾ ಘಟಕ ಸ್ಥಾಪಿಸುವ ಕಂಪನಿಗಳಿಗೆ ಶೇ 15 ತೆರಿಗೆ ವಿಧಿಸುವುದಾಗಿ ಹೇಳಿದರು.

ಕಾರ್ಪೊರೇಟ್ ತೆರಿಗೆ ಸರ್ಕಾರದ ಒಟ್ಟಾರೆ ನೇರ ತೆರಿಗೆಯಲ್ಲಿ ಸಿಂಹ ಪಾಲು ಹೊಂದಿದೆ. 2020ರ ಹಣಕಾಸಿನ ವರ್ಷದ ಮೂರನೇ ತ್ರೈಮಾಸಿಕದಲ್ಲಿ ಆದಾಯ ಸಂಗ್ರಹಕ್ಕೆ ಬಲವಾದ ಪೆಟ್ಟು ಕಾರ್ಪೊರೇಟ್​ ತೆರಿಗೆ ನೀಡಿದೆ. ತತ್ಪರಿಣಾಮ ಜನವರಿ ತಿಂಗಳಲ್ಲಿಯೂ ಸಂಗ್ರಹವು ಇಳಿಕೆಯಾಗಿದೆ

ಈ ವರ್ಷ ಏಪ್ರಿಲ್ ಮತ್ತು ಜನವರಿ 15ರ ನಡುವೆ ಕಾರ್ಪೊರೇಟ್ ತೆರಿಗೆ 3.87 ಲಕ್ಷ ಕೋಟಿ ರೂ., ವೈಯಕ್ತಿಕ ಆದಾಯ ತೆರಿಗೆ ಸಂಗ್ರಹವು 3.29 ಲಕ್ಷ ಕೋಟಿ ರೂ. ಆಗಿದೆ. ಭದ್ರತಾ ವ್ಯವಹಾರ ತೆರಿಗೆಯ (ಎಸ್‌ಟಿಟಿ) ಒಟ್ಟು ಸಂಗ್ರಹವು 9,030 ಕೋಟಿ ರೂ. ಆಗಿದ್ದು, 887 ಕೋಟಿ ರೂ.ಗಳು ಈಕ್ವಲೈಸೇಶನ್ ಮೂಲಕ ಬಂದಿದೆ.

ಅತ್ಯಧಿಕ ತೆರಿಗೆ ತಂದುಕೊಡುತ್ತಿದ್ದ ಮುಂಬೈ, ದೆಹಲಿ, ಬೆಂಗಳೂರು, ಚೆನ್ನೈ, ಪುಣೆ, ಹೈದರಾಬಾದ್ ಮತ್ತು ಕೋಲ್ಕತ್ತಾ ಸೇರಿದಂತೆ ಇತರ ನಗರಗಳ ಆದಾಯ ಸಂಗ್ರಹ ಇಳಿಮುಖವಾಗಿದೆ. 2020ರ ಹಣಕಾಸು ವರ್ಷದಲ್ಲಿ 13.5 ಲಕ್ಷ ಕೋಟಿ ರೂ. ಸಂಗ್ರಹದ ನಿರೀಕ್ಷೆ ಇರಿಸಿಕೊಂಡಿದ್ದ ಕೇಂದ್ರವು, ನವೆಂಬರ್​ ಮಧ್ಯಂತರ ವೇಳೆಗೆ ಕೇವಲ 6 ಲಕ್ಷ ಕೋಟಿ ರೂ.ಯಷ್ಟೆ (ಶೇ 50ರಷ್ಟು) ಸಂಗ್ರಹಿಸಲು ಸಾಧ್ಯವಾಗಿದೆ.

ABOUT THE AUTHOR

...view details