ನವದೆಹಲಿ :ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರು ಭಾರತದ ಆರ್ಥಿಕತೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಜಾಗತಿಕ ರೇಟಿಂಗ್ ಏಜೆನ್ಸಿ ಮೂಡೀಸ್ ಕಳಪೆಗಿಂತ ಕೇವಲ ಒಂದು ಹೆಜ್ಜೆ ಮೇಲೆ ಇದೆ ಎಂದು ಹೇಳಿದ್ದಾರೆ.
ಮೋದಿ ನಿರ್ವಹಿಸುತ್ತಿರುವ ಭಾರತದ ಆರ್ಥಿಕತೆಯು ಮೂಡೀಸ್ ರೇಟಿಂಗ್‌ನ ಕಳಪೆಗಿಂತ ಒಂದು ಹಂತ ಮೇಲಿದೆ. ಬಡವರಿಗೆ ಮತ್ತು ಎಂಎಸ್‌ಎಂಇ ವಲಯಕ್ಕೆ ಬೆಂಬಲದ ಕೊರತೆ ಇರುವುದರಿಂದ ಮತ್ತಷ್ಟು ಕೆಟ್ಟ ಪರಿಸ್ಥಿತಿ ಬರಬಹುದು ಎಂದು ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ.
ಮೂಡೀಸ್ ಇನ್ವೆಸ್ಟರ್ ಸರ್ವೀಸ್ ಭಾರತದ ಕ್ರೆಡಿಟ್ ರೇಟಿಂಗ್‌ನ ಕಡಿಮೆ ಮಾಡಿದೆ. ಇದು ಕಳೆದ ಎರಡು ದಶಕಗಳಲ್ಲಿ ಮೊದಲ ಬಾರಿಗೆ ಇಷ್ಟೊಂದು ಪ್ರಮಾಣದಲ್ಲಿ ತಗ್ಗಿಸಿದೆ. ನೀತಿ ರೂಪಿಸುವವರು ಕಡಿಮೆ ಬೆಳವಣಿಗೆಯ ಅಪಾಯಗಳನ್ನು ತಗ್ಗಿಸುವ ಸವಾಲನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದೆ.
ಮೂಡೀಸ್ ಬಿಎಎಯಿಂದ ಬಿಎಎ3ಗೆ ಭಾರತದ ರೇಟಿಂಗ್ ಇಳಿಕೆ ಮಾಡಿದೆ. 40 ವರ್ಷಗಳಲ್ಲಿ ಪ್ರಥಮ ಬಾರಿಗೆ ಜಿಡಿಪಿ ದರ ಶೇ.4ರಷ್ಟು ಕುಸಿತ ಕಾಣಲಿದೆ ಎಂದು ಅಂದಾಜಿಸಿದೆ. ಬಿಎಎ3 ರೇಟಿಂಗ್ ಅತ್ಯಂತ ಕಡಿಮೆ ಹೂಡಿಕೆ ಶ್ರೇಣಿ ಆಗಿದ್ದು, ಕೇವಲ ಕಳೆಪೆಗಿಂತ ಕೇವಲ ಒಂದು ಹಂತ ಮೇಲಿನದ್ದಾಗಿದೆ. ಈ ಹಿಂದೆ 1998ರಲ್ಲಿ ಮೂಡೀಸ್ ಇಂತಹ ಇಳಿಕೆ ರೇಟಿಂಗ್ ನೀಡಿತ್ತು.