ಕರ್ನಾಟಕ

karnataka

ETV Bharat / business

ಭಾರತದ ಆರ್ಥಿಕ ವೃದ್ದಿಯ ಮೂಡ್​ ಬದಲಿಸಿದ ಮೂಡಿಸ್​: ಶೇ 8ರಷ್ಟು ಅಭಿವೃದ್ದಿ ಅಸಂಭವ? - Moody's Investors Service

ಭಾರತದ ಆರ್ಥಿಕ ಪ್ರಗತಿಯಲ್ಲಿನ ಮಂದಗತಿ ಬೆಳವಣಿಗೆ ಇನ್ನೂ ಕೆಲವು ದಿನಗಳು ಮುಂದುವರಿಯಲಿದೆ. ಕೇಂದ್ರ ಸರ್ಕಾರ ಕೈಗೊಂಡಿದ್ದ ಉತ್ತೇಜಿತ ಕ್ರಮಗಳು ಉದ್ದೇಶಿತ ಮಟ್ಟದಲ್ಲಿ ಫಲ ನೀಡಿಲ್ಲ. ಹೀಗಾಗಿ, ಈ ಹಿಂದೆ ಅಂದಾಜಿಸಿದ್ದ ಆರ್ಥಿಕ ವೃದ್ಧಿ ದರದ ಮುನ್ನೋಟ ಈಗ ಕೆಳಮುಖವಾಗಿದೆ ಎಂದು ದೇಶಗಳ ಆರ್ಥಿಕಾಭಿವೃದ್ದಿಯ ಜಾಗತಿಕ ಮೌಲ್ಯಮಾಪನ ಸಂಸ್ಥೆ ಮೂಡಿಸ್ ತಿಳಿಸಿದೆ.

GDP
ಜಿಡಿಪಿ

By

Published : Dec 13, 2019, 3:23 PM IST

ನವದೆಹಲಿ: ನಿಧಾನಗತಿಯ ಉದ್ಯೋಗ ಬೆಳವಣಿಗೆಯು ಉಪಭೋಗದ ಪ್ರಮಾಣವನ್ನು ತಗ್ಗಿಸಿದ್ದರಿಂದ 2019ರ ಜಿಡಿಪಿ ಬೆಳವಣಿಗೆಯ ಮುನ್ನೋಟವನ್ನು ಶೇ 5.6ಕ್ಕೆ ಇಳಿಸಲಾಗಿದೆ ಎಂದು ಜಾಗತಿಕ ಮೌಲ್ಯಮಾಪನ ಸಂಸ್ಥೆ ಮೂಡಿಸ್ ಇನ್​ವೆಸ್ಟರ್ಸ್​ ಸರ್ವಿಸ್​ ಹೇಳಿದೆ.

ಆರ್ಥಿಕ ಪ್ರಗತಿಯಲ್ಲಿನ ಮಂದಗತಿಯ ಬೆಳವಣಿಗೆ ಇನ್ನೂ ಕೆಲ ದಿನಗಳು ಮುಂದುವರಿಯಲಿದೆ. ಕೇಂದ್ರ ಸರ್ಕಾರ ಕೈಗೊಂಡಿದ್ದ ಉತ್ತೇಜಿತ ಕ್ರಮಗಳು ಉದ್ದೇಶಿತ ಮಟ್ಟದಲ್ಲಿ ಫಲ ನೀಡಿಲ್ಲ. ಹೀಗಾಗಿ, ಸಂಸ್ಥೆ ಈ ಹಿಂದೆ ಅಂದಾಜಿಸಿದ್ದ ವೃದ್ಧಿದರದ ಮುನ್ನೋಟ ಈಗ ಕೆಳಮುಖವಾಗಿದೆ ಎಂದು ತಿಳಿಸಿದೆ.

2020 ಮತ್ತು 2021ರ ಆರ್ಥಿಕ ಬೆಳವಣಿಗೆಯು ಕ್ರಮವಾಗಿ ಶೇ 6.6 ಮತ್ತು ಶೇ 6.7ಕ್ಕೆ ಏರಿಕೆಯಾಗಲಿದೆ. ಆದರೆ, ಹಿಂದಿನ ವೇಗಕ್ಕಿಂತ ಕಡಿಮೆ ವೇಗದ ಬೆಳವಣಿಗೆ ದರವನ್ನು ನಾವು ಎದುರು ನೋಡುತ್ತೇವೆ. 2019ರ ಒಟ್ಟು ದೇಶೀಯ ಉತ್ಪನ್ನ (ಜಿಡಿಪಿ) ಬೆಳವಣಿಗೆಯ ಮುನ್ಸೂಚನೆಯನ್ನು ಶೇ 5.6ಕ್ಕೆ ಇಳಿಸಿದ್ದೇವೆ. ಇದು 2018ರಲ್ಲಿನ ಶೇ 7.4ರಷ್ಟು ಬೆಳವಣಿಗೆಗಿಂತಲೂ ಕಡಿಮೆಯಾಗಿದೆ ಎಂದು ಮೂಡಿಸ್ ವರದಿಯಲ್ಲಿ ಹೇಳಿದೆ.

2018ರ ಮಧ್ಯಭಾಗದಿಂದ ಆರ್ಥಿಕ ಬೆಳವಣಿಗೆ ಕುಸಿಯಲು ಶುರುವಾಗಿದೆ. ನೈಜ ಜಿಡಿಪಿ ಬೆಳವಣಿಗೆಯು 2019ರ ಎರಡನೇ ತ್ರೈಮಾಸಿಕದಲ್ಲಿ (ಏಪ್ರಿಲ್-ಜೂನ್) ಸುಮಾರು 8 ಪ್ರತಿಶತದಿಂದ 5ಕ್ಕೆ ಇಳಿದಿದೆ. ಜುಲೈ-ಸೆಪ್ಟೆಂಬರ್​ ತ್ರೈಮಾಸಿಕದಲ್ಲಿ ಮತ್ತೆ ಶೇ 4.5ಕ್ಕೆ ತಗ್ಗಿದೆ. ಉತ್ಪನ್ನಗಳ ಉಪಭೋಗದ ಬೇಡಿಕೆಯು ಗಮನಾರ್ಹವಾಗಿ ಕಡಿಮೆಯಾಗಿದೆ. ನಿಧಾನಗತಿಯ ಉದ್ಯೋಗ ಬೆಳವಣಿಗೆಯು ಉಪಭೋಗದ ಮೇಲೆ ತೂಗುಗತ್ತಿಯಂತಾಗಿದೆ ಎಂದು ವಿಶ್ಲೇಷಿಸಿದೆ.

ABOUT THE AUTHOR

...view details