ಕರ್ನಾಟಕ

karnataka

ಆರ್ಥಿಕತೆ, ಜನರ ಜೇಬಿಗೆ ಕೊರೊನಾ ಸೋಂಕು ತಾಕದಂತೆ RBI ಹೈ ಅಲರ್ಟ್​..!

By

Published : Mar 3, 2020, 4:16 PM IST

ಜಾಗತಿಕ ಹಣಕಾಸು ಮಾರುಕಟ್ಟೆಯು ವೈರಸ್ ತಂದೊಡ್ಡುವ ಪರಿಣಾಮವನ್ನು ಈಗಾಗಲೇ ಅನುಭವಿಸಿದೆ. ಸೋಂಕು ಹರಡುತ್ತಿದ್ದಂತೆ ಆರ್ಥಿಕತೆಯ ಅಪಾಯದ ಮಟ್ಟವೂ ದ್ವಿಗುಣವಾಗುತ್ತದೆ ಎಂದು ಆರ್​ಬಿಐ ಪ್ರಕಟಣೆಯಲ್ಲಿ ತಿಳಿಸಿದೆ.

RBI
ಆರ್​ಬಿಐ

ನವದೆಹಲಿ: ಹಣಕಾಸು ಮಾರುಕಟ್ಟೆಯ ಮೇಲೆ ಮಾರಣಾಂತಿಕ ಕೊರೊನಾ ವೈರಸ್​ ಉಂಟುಮಾಡಲಿರುವ ಪ್ರಭಾವವನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ. ಅಗತ್ಯವಾದ ಕ್ರಮಗಳನ್ನು ತೆಗೆದುಕೊಳ್ಳಲು ಸಿದ್ಧರಾಗಿದ್ದೇವೆ ಎಂದು ಭಾರತೀಯ ರಿಸರ್ವ್​ ಬ್ಯಾಂಕ್ (ಆರ್​ಬಿಐ) ಅಭಯ ನೀಡಿದೆ.

ಜಾಗತಿಕ ಹಣಕಾಸು ಮಾರುಕಟ್ಟೆಯು ವೈರಸ್ ತಂದೊಡ್ಡುವ ಪರಿಣಾಮವನ್ನು ಈಗಾಗಲೇ ಅನುಭವಿಸಿದೆ. ಸೋಂಕು ಹರಡುತ್ತಿದ್ದಂತೆ ಆರ್ಥಿಕತೆಯ ಅಪಾಯದ ಮಟ್ಟವೂ ದ್ವಿಗುಣವಾಗುತ್ತದೆ ಎಂದು ಆರ್​ಬಿಐ ಪ್ರಕಟಣೆಯಲ್ಲಿ ತಿಳಿಸಿದೆ.

ಭಾರತದ ಹಣಕಾಸು ಮಾರುಕಟ್ಟೆ ವಿತ್ತೀಯವಲ್ಲದನ್ನು ಹೆಚ್ಚಾಗಿ ಒಳಗೊಂಡಿದೆ. ಆರ್ಥಿಕ ಚಟುವಟಿಕೆಗೆ ವ್ಯಾಪಕವಾದ ಪರಿಣಾಮವನ್ನು ತಗ್ಗಿಸಲು ಸಂಘಟಿತ ನೀತಿ ಕ್ರಮಗಳ ಆಶಯ ಮಾರುಕಟ್ಟೆಯ ಮನೋಭಾವವನ್ನು ಹೆಚ್ಚಿಸಿದೆ.

ಕೊರೊನಾ ವೈರಸ್ ಏಕಾಏಕಿ ಹಬ್ಬುತ್ತಿರುವ ಹಿನ್ನೆಲೆಯಲ್ಲಿ ಅಮೆರಿಕದ ಫೆಡರಲ್ ರಿಸರ್ವ್ ಇದೇ ರೀತಿಯ ಹೇಳಿಕೆಯನ್ನು ಬಿಡುಗಡೆ ಮಾಡಿದ ಬಳಿಕ, ಆರ್​ಬಿಐ ತನ್ನ ಪ್ರಕಟಣೆಯನ್ನು ಹೊರಡಿಸಿದೆ.

ಭಾರತೀಯ ರಿಸರ್ವ್ ಬ್ಯಾಂಕ್ ಜಾಗತಿಕ ಮತ್ತು ದೇಶಿಯ ಬೆಳವಣಿಗೆಗಳನ್ನು ನಿಕಟವಾಗಿ ಮತ್ತು ನಿರಂತರವಾಗಿ ಮೇಲ್ವಿಚಾರಣೆ ಮಾಡುತ್ತಿದೆ. ಹಣಕಾಸು ಮಾರುಕಟ್ಟೆಗಳ ಕ್ರಮಬದ್ಧವಾದ ಕಾರ್ಯನಿರ್ವಹಣೆಯನ್ನು ಖಚಿತಪಡಿಸಿಕೊಳ್ಳಲು ಮಾರುಕಟ್ಟೆ ವಿಶ್ವಾಸವನ್ನು ಕಾಪಾಡಿಕೊಳ್ಳಬೇಕಿದೆ. ಆರ್ಥಿಕ ಸ್ಥಿರತೆಯನ್ನು ಕಾಪಾಡಲು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಲು ನಾವು ಸಿದ್ಧವಾಗಿದ್ದೇವೆ ಎಂದು ಹೇಳಿದೆ.

ಈ ನಡುವೆ ಭಾರತವು ಇಟಲಿ, ಇರಾನ್, ದಕ್ಷಿಣ ಕೊರಿಯಾ, ಜಪಾನ್ ನಾಗರಿಕರಿಗೆ ಮಾರ್ಚ್ 3ರಂದು ಅಥವಾ ಅದಕ್ಕೂ ಮೊದಲು ನೀಡಲಾದ ಎಲ್ಲಾ ನಿಯಮಿತ ವೀಸಾ / ಇ-ವೀಸಾಗಳನ್ನು ಅಮಾನತುಗೊಳಿಸಿದೆ.

ABOUT THE AUTHOR

...view details