ನವದೆಹಲಿ:ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಆರ್ಥಿಕ ನಿರ್ವಹಣೆ ಮೇಲೆ ಟೀಕಾ ಪ್ರಹಾರ ನಡೆಸಿದ ವಿತ್ತ ತಜ್ಞ/ ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರು, '2024ರ ವೇಳೆಗೆ ದೇಶದ ಆರ್ಥಿಕತೆಯನ್ನು 5 ಟ್ರಿಲಿಯನ್ ಡಾಲರ್ಗೆ ತೆಗೆದುಕೊಂಡು ಹೋಗುವ ಯೋಜನೆಯು ಆಶಾಭ್ರಾಂತಿ ಆಗಿದ್ದು, ಕೇಂದ್ರ ಸರ್ಕಾರ ದೇಶದಲ್ಲಿನ ನಿಧಾನಗತಿಯನ್ನು ಪುರಸ್ಕರಿಸಿಕೊಳ್ಳುತ್ತಿಲ್ಲ' ಎಂದು ವ್ಯಂಗ್ಯವಾಡಿದರು.
5 ಟ್ರಿಲಿಯನ್ ಆಶಾಭ್ರಾಂತಿಯಲ್ಲಿರುವ ಮೋದಿಗೆ ದೇಶದಲ್ಲಿನ ಮಂದಗತಿ ಕಾಣಿಸುತ್ತಿಲ್ಲ: ಡಾ ಸಿಂಗ್ ವ್ಯಂಗ್ಯ - 5 ಟ್ರಿಲಿಯನ್ ಆರ್ಥಿಕೆ
ಮಾಂಟೆಕ್ ಸಿಂಗ್ ಅಹ್ಲುವಾಲಿಯಾ ಅವರ 'ಬ್ಯಾಕ್ಸ್ಟೇಜ್' (ತೆರೆಮರೆಯ) ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್, ಆಡಳಿತರೂಢ ಸರ್ಕಾರವು ಪ್ರಸ್ತುತದಲ್ಲಿನ 'ನಿಧಾನಗತಿ' ಎಂಬ ಪದವನ್ನು ಅಂಗೀಕರಿಸಿಕೊಳ್ಳುತ್ತಿಲ್ಲ. ಸಮಸ್ಯೆಗಳನ್ನು ಗುರುತಿಸಿಕೊಂಡು ಅದಕ್ಕೆ ವಿಶ್ವಾಸಾರ್ಹ ಉತ್ತರಗಳನ್ನು ಕಂಡುಕೊಂಡು ಸರಿಪಡಿಸದಿರುವುದೇ ನಿಜವಾದ ಅಪಾಯವ ಎಂದು ಕೇಂದ್ರಕ್ಕೆ ಎಚ್ಚರಿಸಿದರು.
ಮಾಂಟೆಕ್ ಸಿಂಗ್ ಅಹ್ಲುವಾಲಿಯಾ ಅವರ 'ಬ್ಯಾಕ್ಸ್ಟೇಜ್' (ತೆರೆಮರೆಯ) ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಡಾ. ಸಿಂಗ್, ಆಡಳಿತರೂಢ ಸರ್ಕಾರವು ಪ್ರಸ್ತುತದಲ್ಲಿನ 'ನಿಧಾನಗತಿ' ಎಂಬ ಪದವನ್ನು ಅಂಗೀಕರಿಸಿಕೊಳ್ಳುತ್ತಿಲ್ಲ. ಸಮಸ್ಯೆಗಳನ್ನು ಗುರುತಿಸಿಕೊಂಡು ಅದಕ್ಕೆ ವಿಶ್ವಾಸಾರ್ಹ ಉತ್ತರಗಳನ್ನು ಕಂಡುಕೊಂಡು ಸರಿಪಡಿಸದಿರುವುದೇ ನಿಜವಾದ ಅಪಾಯ ಎಂದು ಎಚ್ಚರಿಸಿದರು.
ಮಾಜಿ ಯೋಜನಾ ಆಯೋಗದ ಉಪಾಧ್ಯಕ್ಷರು ಯುಪಿಎ ಸರ್ಕಾರದ ಒಳ್ಳೆಯ ಮತ್ತು ದುರ್ಬಲ ಅಂಶಗಳ ಬಗ್ಗೆ ತಮ್ಮ ಪುಸ್ತಕದಲ್ಲಿ ದಾಖಲಿಸಿದ್ದಾರೆ. ಈ ವಿಷಯಗಳು ಚರ್ಚೆಯಾಗಲಿವೆ. ಮತ್ತು ಚರ್ಚೆಯಾಗಬೇಕು ಎಂದು ನಾನು ಭಾವಿಸುತ್ತೇನೆ. ಏಕೆಂದರೆ, ನಿಧಾನಗತಿಯಂತಹ ಪದವಿದೆ ಎಂದು ಒಪ್ಪಿಕೊಳ್ಳದ ಸರ್ಕಾರವನ್ನು ನಾವು ಇಂದು ನೋಡುತ್ತಿದ್ದೇವೆ. ಇದು ದೇಶಕ್ಕೆ ಒಳ್ಳೆಯದಲ್ಲ ಎಂದು ನಾನು ಭಾವಿಸುತ್ತೇನೆ ಎಂದು ಮಾಜಿ ಪ್ರಧಾನಿ ಹೇಳಿದರು.