ನವದೆಹಲಿ :2 ಟ್ರಿಲಿಯನ್ ಡಾಲರ್ ಬ್ಯಾಂಕಿಂಗ್ ಕ್ಷೇತ್ರವನ್ನು ಗೊಂದಲಕ್ಕೀಡು ಮಾಡುವ ಮುಖೇನ ಮೋದಿ ಸರ್ಕಾರ ಸಾರ್ವಜನಿಕ ವಲಯದ ಬ್ಯಾಂಕ್ಗಳು ಮತ್ತು ಇತರ ಹಣಕಾಸು ಸಂಸ್ಥೆಗಳನ್ನು ನಾಶಪಡಿಸಿ, ಸುಸ್ತಿದಾರರನ್ನು ರಕ್ಷಿಸುವ ಕೆಲಸ ಮಾಡುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ಸಿಇಒ ಮತ್ತು ಭಾರತದ ಬ್ಯಾಂಕಿಂಗ್ ಕ್ಷೇತ್ರದ ಉನ್ನತ ಅಧಿಕಾರಿಗಳ ಜೊತೆ ಪ್ರಸಕ್ತ, ಆರ್ಥಿಕ ಸವಾಲು ಕುರಿತು ಸಭೆ ನಡೆಸಿದರು. ಇದೇ ವೇಳೆ ಕಾಂಗ್ರೆಸ್ ವಕ್ತಾರ ರಂದೀಪ್ ಸಿಂಗ್ ಸುರ್ಜೆವಾಲಾ ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಕೇಂದ್ರ ಸರ್ಕಾರವು ಬ್ಯಾಂಕಿಂಗ್ ಕ್ಷೇತ್ರವನ್ನು ಹೇಗೆ ನಾಶಪಡಿಸಿದೆ ಎಂಬುದನ್ನು ಹಣಕಾಸು ಸಂಸ್ಥೆಗಳು ಪ್ರಧಾನಿ ತಿಳಿಸುವ ಉತ್ಸಾಹ ಹೊಂದಿದ್ದಾರೆ ಎಂದು ನಾವು ಭಾವಿಸುತ್ತೇವೆ ಎಂದರು.
ಕಳೆದ ಒಂದು ವಾರದಲ್ಲಿ ಮೂರು ಪ್ರಮುಖ ಘಟನೆಗಳು ಭಾರತದ ಹಣಕಾಸು ವ್ಯವಸ್ಥೆ ಮತ್ತು ಬ್ಯಾಂಕಿಂಗ್ ಕ್ಷೇತ್ರದ 'ಶೋಚನೀಯ ಸ್ಥಿತಿ'ಯನ್ನು ಪ್ರತಿಬಿಂಬಿಸುತ್ತವೆ ಎಂದು ಕಾಂಗ್ರೆಸ್ ಹೇಳಿದೆ. 202ರ ಜುಲೈ ತಿಂಗಳ ಆರ್‌ಬಿಐನ ಹಣಕಾಸು ಸ್ಥಿರತೆ ವರದಿ ಬ್ಯಾಂಕಿಂಗ್ ಕ್ಷೇತ್ರವು ಕೆಟ್ಟ ಸಾಲದ ಪ್ರಮಾಣವು 20 ವರ್ಷಗಳ ಗರಿಷ್ಠ ಮಟ್ಟ ತಲುಪಬಹುದು ಎಂದು ಎಚ್ಚರಿಸಿದೆ. ಸಾಲ ತೀರಿಸುವವರ ವಿರುದ್ಧ ಆರ್‌ಬಿಐ ಕಠಿಣವಾಗಬೇಕೆಂದು ಆರ್‌ಬಿಐ ಮಾಜಿ ಗವರ್ನರ್ ಉರ್ಜಿತ್ ಪಟೇಲ್ ಸಲಹೆ ನೀಡಿದ್ದಾರೆ. ಆದರೆ, ಮೋದಿ ಸರ್ಕಾರ ಅವರನ್ನು ಮೃದುವಾಗಿ ಪರಿಗಣಿಸುತ್ತದೆ.
ಇಡೀ ಹಣಕಾಸು ವಲಯವನ್ನು 'ಅಸ್ಥಿರ', 'ಅಪಾಯಕಾರಿ' ಮತ್ತು 'ಕುಸಿತದ ಅಂಚಿಗೆ ತಳ್ಳಿದ ಸರ್ಕಾರದ ದುರುಪಯೋಗದ ಕುರಿತು ಆರ್‌ಬಿಐನ ಡೆಪ್ಯುಟಿ ಗವರ್ನರ್ ವೈರಲ್ ಆಚಾರ್ಯ ತಮ್ಮ ಪುಸ್ತಕದಲ್ಲಿ ಉಲ್ಲೇಖಿಸಿದ್ದರು. ಈ ಹೇಳಿಕೆಗಳನ್ನು ಉಲ್ಲೇಖಿಸಿ, ಬ್ಯಾಂಕಿಂಗ್ ಕ್ಷೇತ್ರ ಶೋಚನೀಯ ಸ್ಥಿತಿ ತಲುಪಿದೆ ಎಂಬುದಕ್ಕೆ ಪ್ರತಿಬಿಂಬ ಎಂದು ಆಪಾದಿಸಿದರು. ಮೋದಿ ಸರ್ಕಾರದ ಆಡಳಿತ ಅವಧಿಯಲ್ಲಿ ಭಾರತದ ಹಣಕಾಸು ಕ್ಷೇತ್ರವು ಕುಸಿದಿದೆ. ಎನ್‌ಪಿಎ ಪ್ರಮಾಣ 2019ರ ಸೆಪ್ಟೆಂಬರ್‌ನಲ್ಲಿ (ಶೇ 9.1ರಷ್ಟು) 9,35,000 ಕೋಟಿ ರೂ.ಗೆ ಏರಿದೆ. 2013-14 ಮಾರ್ಚ್ನಲ್ಲಿ ಇದು 2,16,739 ಕೋಟಿ ರೂ. (ಒಟ್ಟು ಸಾಲದ ಶೇ.3.8ರಷ್ಟು) ಇತ್ತು ಎಂದು ಕಾಂಗ್ರೆಸ್ ಮುಖಂಡ ದೂರಿದರು.
ಆರ್‌ಬಿಐನ 2020ರ ಜುಲೈ'ಹಣಕಾಸು ಸ್ಥಿರತೆ ವರದಿ'ಯಲ್ಲಿ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿನ ಕೆಟ್ಟ ಸಾಲದ ಪ್ರಮಾಣ ಶೇ14.7ರಷ್ಟು ತಲುಪಬಹುದು. ಇದು 20 ವರ್ಷಗಳಲ್ಲಿ ಗರಿಷ್ಠವಾಗಲಿದೆ. ಉದ್ದೇಶಪೂರ್ವಕ ಸಾಲ ವಂಚಕರನ್ನು ಸರ್ಕಾರ ರಕ್ಷಿಸುತ್ತಿದೆ. ಆಲ್ ಇಂಡಿಯನ್ ಬ್ಯಾಂಕ್ ನೌಕರರ ಸಂಘ (ಎಐಬಿಇಎ) 2,496 ಉದ್ದೇಶಪೂರ್ವಕ ಡಿಫಾಲ್ಟರ್ಗಳನ್ನು ಪಟ್ಟಿ ಮಾಡಿದೆ ಎಂದು ಸುರ್ಜೆವಾಲಾ ಹೇಳಿದರು.