ನವದೆಹಲಿ:ಭಾರತೀಯ ಸೈನ್ಯದಲ್ಲಿರುವ ಮಹಿಳಾ ಅಧಿಕಾರಿಗಳಿಗೆ ಶಾಶ್ವತ ಆಯೋಗವೊಂದನ್ನು ಸ್ಥಾಪಿಸುವಂತೆ ಕೇಂದ್ರ ಸರ್ಕಾರ ಭಾರತೀಯ ಸೇನೆಗೆ ಆದೇಶಿಸಿದೆ.
ಸೇನಾ ಪ್ರಧಾನ ಕಚೇರಿಯ ಮಹಿಳಾ ಅಧಿಕಾರಿಗಳಿಗೆ ಶಾಶ್ವತ ಆಯೋಗ ಆಯ್ಕೆ ಮಂಡಳಿಯನ್ನು ನಡೆಸಲು ಪೂರ್ವಸಿದ್ಧತಾ ಕ್ರಮಗಳ ಸರಣಿಯನ್ನು ರೂಪಿಸಿತ್ತು. ಎಲ್ಲಾ ಕಿರು ಸೇವಾ ಆಯೋಗದ (ಎಸ್‌ಎಸ್‌ಸಿ) ಮಹಿಳಾ ಅಧಿಕಾರಿಗಳು ತಮ್ಮ ಆಯ್ಕೆಯನ್ನು ಮತ್ತು ಸಂಪೂರ್ಣ ಅಗತ್ಯ ದಾಖಲಾತಿಗಳನ್ನು ನೀಡದೆ ಕೂಡಲೇ ಆಯ್ಕೆ ಮಂಡಳಿಯನ್ನು ನಿಗದಿಪಡಿಸಲಾಗುತ್ತದೆ ಎಂದು ಸೇನೆಯು ಗುರುವಾರ ಪ್ರಕಟಣೆಯಲ್ಲಿ ತಿಳಿಸಿದೆ.
ಸೇನೆಯ ವಾಯು ರಕ್ಷಣಾ (ಎಎಡಿ), ಸಿಗ್ನಲ್, ಎಂಜಿನಿಯರ್, ಆರ್ಮಿ ಏವಿಯೇಷನ್, ಎಲೆಕ್ಟ್ರಾನಿಕ್ಸ್ ಮತ್ತು ಮೆಕ್ಯಾನಿಕಲ್ ಎಂಜಿನಿಯರ್ (ಇಎಂಇ), ಆರ್ಮಿ ಸರ್ವಿಸ್ ಕಾರ್ಪ್ಸ್ (ಎಎಸ್ಸಿ), ಆರ್ಮಿ ಆರ್ಡನೆನ್ಸ್ ಕಾರ್ಪ್ಸ್ (ಎಒಸಿ) ಮತ್ತು ಇಂಟೆಲಿಜೆನ್ಸ್ ಕಾರ್ಪ್ಸ್ ಜೊತೆಗೆ ಅಸ್ತಿತ್ವದಲ್ಲಿರುವ ಜಡ್ಜ್ ಆ್ಯಂಡ್ ಅಡ್ವೊಕೇಟ್ ಜನರಲ್ (ಜೆಎಜಿ) ಮತ್ತು ಆರ್ಮಿ ಎಜುಕೇಷನಲ್ ಕಾರ್ಪ್ಸ್ (ಎಇಸಿ) ಸೇರಿ ಎಲ್ಲ 10 ವಿಭಾಗಗಳ ಮಹಿಳಾ ಅಧಿಕಾರಿಗಳ ಶಾಶ್ವತ ಆಯೋಗಕ್ಕೆ ಅನುದಾನ ನಿರ್ದಿಷ್ಟಪಡಿಸುವಂತೆ ಕೇಂದ್ರ ಸೂಚಿಸಿದೆ.
ಕೇಂದ್ರ ಸರ್ಕಾರದ ಈ ಆದೇಶವು ಸೈನ್ಯದಲ್ಲಿ ಮಹಿಳೆಯರಿಗೆ ದೊಡ್ಡ ಹುದ್ದೆಗಳನ್ನು ನಿರ್ವಹಿಸಲು ಅವಕಾಶ ಮಾಡಿಕೊಡುವ ಮುಖೇನ ಮಹಿಳಾ ಸಬಲೀಕರಣಗೊಳಿಸಲು ದಾರಿ ಮಾಡಿಕೊಟ್ಟಿದೆ ಎಂದು ಸೇನೆಯ ವಕ್ತಾರ ಅಮನ್ ಆನಂದ್ ಹೇಳಿದ್ದಾರೆ.