ಕರ್ನಾಟಕ

karnataka

ETV Bharat / business

ಕೇಂದ್ರದಿಂದ ಗ್ರಾಮೀಣಾಭಿವೃದ್ಧಿಗೆ 12,351 ಕೋಟಿ ರೂ. ಅನುದಾನ ಬಿಡುಗಡೆ - ಗ್ರಾಮೀಣ ಸ್ಥಳೀಯ ಸಂಸ್ಥೆಗಳು

ಸಮುದಾಯ ಹಂತದಲ್ಲಿ ಸ್ವತ್ತುಗಳ ರಚನೆ ಮತ್ತು ಆರ್‌ಎಲ್‌ಬಿಗಳ ಆರ್ಥಿಕ ಕಾರ್ಯಸಾಧ್ಯತೆ ಸುಧಾರಿಸಲು 15ನೇ ಹಣಕಾಸು ಆಯೋಗದ ಶಿಫಾರಸುಗಳ ಅನ್ವಯ ಗ್ರಾಮೀಣ ಸ್ಥಳೀಯ ಸಂಸ್ಥೆಗಳಿಗೆ ಅನುದಾನ ಬಿಡುಗಡೆ ಮಾಡಲಾಗುತ್ತದೆ. ಗ್ರಾಮೀಣ ಮಟ್ಟದ ಮತ್ತು ಬ್ಲಾಕ್​​ ಮಟ್ಟದಲ್ಲಿ ಸಂಪನ್ಮೂಲ ಸಂಗ್ರಹಿಸಲು ಪಂಚಾಯತ್​ ರಾಜ್​ನ ಗ್ರಾಮ, ಬ್ಲಾಕ್ ಮತ್ತು ಜಿಲ್ಲೆ ಎಂಬ ಮೂರು ಹಂತಗಳಿಗೆ ಅನುದಾನ ನೀಡಲಾಗುತ್ತದೆ.

rural
rural

By

Published : Jan 27, 2021, 5:07 PM IST

ನವದೆಹಲಿ:ಗ್ರಾಮೀಣ ಸ್ಥಳೀಯ ಸಂಸ್ಥೆಗಳ (ಆರ್‌ಎಲ್‌ಬಿ) ಅಭಿವೃದ್ಧಿಗೆ ಕೇಂದ್ರ ಹಣಕಾಸು ಸಚಿವಾಲಯದ ವೆಚ್ಚ ವಿಭಾಗವು 18 ರಾಜ್ಯಗಳಿಗೆ 12,351.5 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದೆ.

ಬಿಡುಗಡೆಯಾದ ಅನುದಾನದ ಮೊತ್ತವು 2020-21ರ ಆರ್ಥಿಕ ವರ್ಷದಲ್ಲಿ ಬಿಡುಗಡೆಯಾದ ಮೂಲ ಅನುದಾನದ 2ನೇ ಕಂತು ಎಂದು ಕೇಂದ್ರ ಹಣಕಾಸು ಸಚಿವಾಲಯದ ಪ್ರಕಟಣೆಯಲ್ಲಿ ಹೇಳಿದೆ.

ಮೊದಲ ಕಂತು ಮತ್ತು ಪಂಚಾಯತ್​ ರಾಜ್ ಸಚಿವಾಲಯದ ಶಿಫಾರಸಿನ ಮೇರೆಗೆ ಬಳಕೆಯ ಪ್ರಮಾಣಪತ್ರ ಆಧರಿಸಿ 18 ರಾಜ್ಯಗಳಿಗೆ ಈ ಅನುದಾನವನ್ನು ಬಿಡುಗಡೆ ಮಾಡಲಾಗಿದೆ.

ಸಮುದಾಯ ಹಂತದಲ್ಲಿ ಸ್ವತ್ತುಗಳ ರಚನೆ ಮತ್ತು ಆರ್‌ಎಲ್‌ಬಿಗಳ ಆರ್ಥಿಕ ಕಾರ್ಯಸಾಧ್ಯತೆ ಸುಧಾರಿಸಲು 15ನೇ ಹಣಕಾಸು ಆಯೋಗದ ಶಿಫಾರಸುಗಳ ಅನ್ವಯ ಆರ್‌ಎಲ್‌ಬಿಗಳಿಗೆ ಅನುದಾನ ಬಿಡುಗಡೆ ಮಾಡಲಾಗುತ್ತದೆ. ಗ್ರಾಮೀಣ ಮಟ್ಟದ ಮತ್ತು ಬ್ಲಾಕ್​​ ಮಟ್ಟದಲ್ಲಿ ಸಂಪನ್ಮೂಲ ಸಂಗ್ರಹಿಸಲು ಪಂಚಾಯತ್​ ರಾಜ್​ನ ಗ್ರಾಮ, ಬ್ಲಾಕ್ ಮತ್ತು ಜಿಲ್ಲೆ ಎಂಬ ಮೂರು ಹಂತಗಳಿಗೆ ಅನುದಾನ ನೀಡಲಾಗುತ್ತದೆ.

ಇದನ್ನೂ ಓದಿ: ಬಜೆಟ್​ ಫೀವರ್​ಗೆ ಮಕಾಡೆ ಮಲಗಿದ ಗೂಳಿ.. ಮಹಾ ತಲ್ಲಣಕ್ಕೆ ಲಕ್ಷಾಂತರ ಕೋಟಿ ರೂ. ಮಾಯ!

15ನೇ ಹಣಕಾಸು ಆಯೋಗವು ಮೂಲ ಮತ್ತು ಒಕ್ಕೂಟದಡಿ ಅನುದಾನ ಬಿಡುಗಡೆ ಮಾಡುವಂತೆ ಶಿಫಾರಸು ಮಾಡಿದೆ. ಮೂಲ ಅನುದಾನವನ್ನು ಸ್ಥಳೀಯ ಸಂಸ್ಥೆಗಳು ಸಂಬಳ ಅಥವಾ ಇತರ ವೆಚ್ಚಗಳನ್ನು ಹೊರತುಪಡಿಸಿ ನಿರ್ದಿಷ್ಟ ಅಗತ್ಯಗಳಿಗಾಗಿ ಬಳಸಬಹುದು. ಒಕ್ಕೂಟದ ಅನುದಾನವನ್ನು ನೈರ್ಮಲ್ಯ, ಬಯಲು ಶೌಚಾಲಯ ನಿರ್ವಹಣೆ, ಕುಡಿಯುವ ನೀರು ಸರಬರಾಜು, ಮಳೆನೀರು ಕೊಯ್ಲು, ನೀರಿನ ಮರುಬಳಕೆಗಾಗಿ ಬಳಸಬಹುದು.

ಕೇಂದ್ರ ಸರ್ಕಾರದಿಂದ ಪಡೆದ 10 ಕೆಲಸದ ದಿನಗಳಲ್ಲಿ ರಾಜ್ಯಗಳು ಅನುದಾನವನ್ನು ಆರ್‌ಎಲ್‌ಬಿಗಳಿಗೆ ವರ್ಗಾಯಿಸಬೇಕಾಗುತ್ತದೆ. 10 ಕೆಲಸದ ದಿನಗಳನ್ನು ಮೀರಿದ ಯಾವುದೇ ವಿಳಂಬವು ರಾಜ್ಯ ಸರ್ಕಾರಗಳು ಅನುದಾನವನ್ನು ಬಡ್ಡಿಯೊಂದಿಗೆ ಬಿಡುಗಡೆ ಮಾಡಬೇಕಾಗುತ್ತದೆ.

ABOUT THE AUTHOR

...view details