ಕರ್ನಾಟಕ

karnataka

ETV Bharat / business

'ಮೋದಿಯ 'ವೋಕಲ್ ಫಾರ್ ಲೋಕಲ್' ಯಶಸ್ಸಿಗೆ ಬಿಎಸ್​ವೈ ಕಬ್ಬಿಣ ಮಾರಾಟ ಮೇಲಿನ ನಿರ್ಬಂಧ ತೆರವುಗೊಳಿಸಲಿ' - ವಾಣಿಜ್ಯ ಸುದ್ದಿ

ಗಣಿಗಾರಿಕೆ ಅವಲಂಬಿತರನ್ನು ಪ್ರತಿನಿಧಿಸುವ ಕೆಜಿಎವಿ, ಪ್ರಧಾನಿ ನರೇಂದ್ರ ಮೋದಿಯವರ 'ವೋಕಲ್ ಫಾರ್ ಲೋಕಲ್​' ಅಭಿಯಾನವನ್ನು ಶ್ಲಾಘಿಸಿದರು. ಕರ್ನಾಟಕದಲ್ಲಿ ಕಬ್ಬಿಣದ ಅದಿರು ಗಣಿಗಾರಿಕೆಗೆ ಇದೇ ರೀತಿಯ ನೀತಿಗಳನ್ನು ಅಳವಡಿಸಿಕೊಳ್ಳಬೇಕೆಂದು ಸರ್ಕಾರಕ್ಕೆ ಮನವಿ ಮಾಡಿದರು.

Mining
ಗಣಿಗಾರಿಕೆ

By

Published : Jul 20, 2020, 5:21 PM IST

ನವದೆಹಲಿ: ರಾಜ್ಯದಿಂದ ಕಬ್ಬಿಣದ ಅದಿರು ಮಾರಾಟಕ್ಕೆ ಇರುವ ನಿರ್ಬಂಧಗಳನ್ನು ತೆಗೆದುಹಾಕುವಂತೆ ಕರ್ನಾಟಕದ ಗಣಿಗಾರಿಕೆ ಅವಲಂಬಿತ ಸಮುದಾಯವು ಸರ್ಕಾರವನ್ನು ಒತ್ತಾಯಿಸಿದೆ.

ಗಣಿಗಾರಿಕೆಯ ಮೇಲೆ ಇರುವ ನಿರ್ಬಂಧ ಹಿಂತೆಗೆದುಕೊಂಡರೆ ಗಣಿಗಾರಿಕೆ ಕ್ಷೇತ್ರದಲ್ಲಿ ಹೆಚ್ಚುವರಿಯಾಗಿ ಒಂದು ಲಕ್ಷ ಉದ್ಯೋಗಗಳು ಸೃಷ್ಟಿಯಾಗಲು ನೆರವಾಗಲಿದೆ. ಕೋವಿಡ್ 19 ಬಿಕ್ಕಟ್ಟಿನ ನಡುವೆ ಹೆಚ್ಚುವರಿ ಅನುಕೂಲವಾಗಲಿದೆ ಎಂದು ಕರ್ನಾಟಕ ಗಣಿ ಅವಲಂಬಿತರ ವೇದಿಕೆ (ಕೆಜಿಎವಿ) ಅಭಿಪ್ರಾಯಪಟ್ಟಿದೆ.

ಗಣಿಗಾರಿಕೆ ಅವಲಂಬಿತರನ್ನು ಪ್ರತಿನಿಧಿಸುವ ಕೆಜಿಎವಿ, ಪ್ರಧಾನಿ ನರೇಂದ್ರ ಮೋದಿಯವರ 'ವೋಕಲ್ ಫಾರ್ ಲೋಕಲ್​' ಅಭಿಯಾನವನ್ನು ಶ್ಲಾಘಿಸಿದರು. ಕರ್ನಾಟಕದಲ್ಲಿ ಕಬ್ಬಿಣದ ಅದಿರು ಗಣಿಗಾರಿಕೆಗೆ ಇದೇ ರೀತಿಯ ನೀತಿಗಳನ್ನು ಅಳವಡಿಸಿಕೊಳ್ಳಬೇಕೆಂದು ಸರ್ಕಾರಕ್ಕೆ ಮನವಿ ಮಾಡಿದರು.

'ಸಿ' ವರ್ಗದ ಗಣಿಗಾರಿಕೆ ಗುತ್ತಿಗೆ ರದ್ದುಗೊಳಿಸುವ ಕುರಿತು ಸುಪ್ರೀಂಕೋರ್ಟ್ ತೀರ್ಪಿನ ಮೊದಲು ಹೊರತೆಗೆಯಲಾದ ಎಂಟು ದಶಲಕ್ಷ ಟನ್ ಕಬ್ಬಿಣದ ಅದಿರು ಮಾರಾಟಕ್ಕೆ ಅನುಮತಿ ನೀಡಿದ ಮುಖ್ಯಮಂತ್ರಿ ಬಿ.ಎಸ್. ಯಡಿಯುರಪ್ಪ ಅವರ ಶಿಫಾರಸನ್ನು ಕೆಜಿಎವಿ ಸ್ವಾಗತಿಸಿದೆ.

ಈ ಉಪಕ್ರಮವು ಆರ್ಥಿಕತೆಗೆ ಅಗತ್ಯವಾದ ಪ್ರಚೋದನೆ ನೀಡಿ, ಕೋವಿಡ್ -19 ವಿರುದ್ಧ ಹೋರಾಡಲು ಅನುಕೂಲವಾಗಲಿದೆ. ಇದರಿಂದ ಬರುವ ಹಣವನ್ನು ರಾಜ್ಯಾದ್ಯಂತ ಕೋವಿಡ್​ ಪೀಡಿತರ ಜೀವ ಮತ್ತು ಜೀವನೋಪಾಯದ ರಕ್ಷಣೆಗಾಗಿ ಪರಿಹಾರ ನೆರವನ್ನು ಇನ್ನಷ್ಟು ವೇಗಗೊಳಿಸಬಹುದು ಎಂದು ಕೆಜಿಎವಿ ಪ್ರಕಟಣೆಯಲ್ಲಿ ತಿಳಿಸಿದೆ.

ಜುಲೈ 2010ರಲ್ಲಿ ಕರ್ನಾಟಕ ಸರ್ಕಾರ ಅದಿರು ರಫ್ತಿಗೆ ನಿಷೇಧ ಹೇರಿತ್ತು, ಅದನ್ನು 2011ರಲ್ಲಿ ಸುಪ್ರೀಂಕೋರ್ಟ್ ಎತ್ತಿಹಿಡಿದಿತ್ತು. ಈ ನಿಷೇಧಾಜ್ಞೆಯ ಅನ್ವಯ, ಕರ್ನಾಟಕದಿಂದ ಗಣಿಗಾರಿಕೆ ಮಾಡಿದ ಕಬ್ಬಿಣದ ಅದಿರನ್ನು ಭಾರತದ ಹೊರಗೆ ಮಾರಾಟ ಮಾಡುವಂತಿಲ್ಲ.

ABOUT THE AUTHOR

...view details