ಕರ್ನಾಟಕ

karnataka

ETV Bharat / business

ಕೇಂದ್ರದ ಕೋವಿಡ್​ ಪ್ಯಾಕೇಜ್ ಅನುದಾನ: ಮಹಾರಾಷ್ಟ್ರ, ಯುಪಿ, ಕೇರಳಕ್ಕೆ ಸಿಂಹಪಾಲು - ಹಣಕಾಸು ವರ್ಷ

2020-21ರ ಆರ್ಥಿಕ ವರ್ಷದಲ್ಲಿ ಸೆಪ್ಟೆಂಬರ್ 10ರ ವೇಳೆಗೆ 4,256.79 ಕೋಟಿ ರೂ. ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳಿಗೆ ಬಿಡುಗಡೆ ಮಾಡಲಾಗಿದೆ. ಮಹಾರಾಷ್ಟ್ರವು ಅತ್ಯಧಿಕ 393.82 ಕೋಟಿ ರೂ, ಪಡೆದಿದ್ದರೆ, ಉತ್ತರಪ್ರದೇಶ 334.01 ಕೋಟಿ ರೂ. ಮತ್ತು ಕೇರಳವು 309.97 ಕೋಟಿ ರೂ. ಕೋವಿಡ್ -19 ಸಿದ್ಧತೆಗಾಗಿ ಸ್ವೀಕರಿಸಿದೆ.

covid-19 Emergency Response package
ಕೋವಿಡ್​ ಪ್ಯಾಕೇಜ್ ಅನುದಾನ

By

Published : Sep 18, 2020, 11:40 PM IST

ನವದೆಹಲಿ: ಭಾರತದ ಕೋವಿಡ್ -19 ತುರ್ತು ಪ್ರತಿಕ್ರಿಯೆ ಮತ್ತು ಆರೋಗ್ಯ ವ್ಯವಸ್ಥೆ ಸಿದ್ಧತೆ ಪ್ಯಾಕೇಜ್ ಅಡಿಯಲ್ಲಿ ಉತ್ತರಪ್ರದೇಶ ಮತ್ತು ಕೇರಳದ ನಂತರ ಮಹಾರಾಷ್ಟ್ರವು ಗರಿಷ್ಠ ಆರ್ಥಿಕ ನೆರವು ಪಡೆದುಕೊಂಡಿವೆ.

2020-21ರ ಆರ್ಥಿಕ ವರ್ಷದಲ್ಲಿ ಸೆಪ್ಟೆಂಬರ್ 10ರ ವೇಳೆಗೆ 4,256.79 ಕೋಟಿ ರೂ. ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳಿಗೆ ಬಿಡುಗಡೆ ಮಾಡಲಾಗಿದೆ. ಮಹಾರಾಷ್ಟ್ರವು ಅತ್ಯಧಿಕ 393.82 ಕೋಟಿ ರೂ, ಪಡೆದಿದ್ದರೆ, ಉತ್ತರಪ್ರದೇಶ 334.01 ಕೋಟಿ ರೂ. ಮತ್ತು ಕೇರಳವು 309.97 ಕೋಟಿ ರೂ. ಕೋವಿಡ್ -19 ಸಿದ್ಧತೆಗಾಗಿ ಸ್ವೀಕರಿಸಿದೆ.

ಕೋವಿಡ್-19 ಸಾಂಕ್ರಾಮಿಕ ರೋಗಗಳ ಪ್ರಕರಣಗಳು ಮತ್ತು ಪ್ರವೃತ್ತಿಗಳ ಆಧಾರದ ಮೇಲೆ ರಾಜ್ಯಗಳು/ಯುಟಿಗಳಿಗೆ ಹಣಕಾಸಿನ ನೆರವು ನೀಡಲಾಗಿದೆ ಎಂದು ರಾಜ್ಯಸಭೆ (ಆರೋಗ್ಯ ಮತ್ತು ಕುಟುಂಬ ಕಲ್ಯಾಣ) ಸಚಿವ ಅಶ್ವಿನಿ ಕುಮಾರ್ ಚೌಬೆ ಅವರು ಲೋಕಸಭೆಯಲ್ಲಿ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.

ಎಲ್ಲಾ ರಾಜ್ಯಗಳು/ಯುಟಿಗಳಿಗೆ ಭಾರತದ ಕೋವಿಡ್-19 ತುರ್ತು ಪ್ರತಿಕ್ರಿಯೆ ಮತ್ತು ಆರೋಗ್ಯ ವ್ಯವಸ್ಥೆ ಪೂರ್ವ ಸಿದ್ಧತೆ ಪ್ಯಾಕೇಜ್ ಅಡಿಯಲ್ಲಿ ಅಗತ್ಯವಾದ ಹಣಕಾಸಿನ ನೆರವು ನೀಡಲಾಗುತ್ತದೆ.

ಕೋವಿಡ್-19 ನಿರ್ವಹಣೆಗೆ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ಸಿದ್ಧಪಡಿಸಲು ರಾಷ್ಟ್ರೀಯ ಆರೋಗ್ಯ ಮಿಷನ್ (ಎನ್‌ಎಚ್‌ಎಂ) ಅಡಿಯಲ್ಲಿ ಲಭ್ಯವಿರುವ ಸಂಪನ್ಮೂಲಗಳನ್ನು ಬಳಸಲು ರಾಜ್ಯಗಳು / ಯುಟಿಗಳಿಗೆ ವಿನಾಯಿತಿ ನೀಡಲಾಗಿದೆ ಎಂದು ಚೌಬೆ ತಿಳಿಸಿದರು.

ಕೋವಿಡ್-19 ಪ್ರಕರಣಗಳ ಸಂಖ್ಯೆಯು ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 96,423 ಹೊಸ ಪ್ರಕರಣಗಳೊಂದಿಗೆ 52,14,889ಕ್ಕೆ ಏರಿದೆ. ಕೋವಿಡ್-19ರ ಸಾವುಗಳು ಸಂಖ್ಯೆ ಶುಕ್ರವಾರದ ವೇಳೆಗೆ 85,000ಕ್ಕೆ ತಲುಪಿದ್ದು, 1,171 ಅಧಿಕ ಜನ ಇಂದು ಕಾಯಿಲೆಗೆ ತುತ್ತಾಗಿದ್ದಾರೆ. ಸುಮಾರು ಶೇ. 59.8ರಷ್ಟು ಸಕ್ರಿಯ ಪ್ರಕರಣಗಳು ಮಹಾರಾಷ್ಟ್ರ, ಆಂಧ್ರಪ್ರದೇಶ, ತಮಿಳುನಾಡು, ಕರ್ನಾಟಕ ಮತ್ತು ಉತ್ತರ ಪ್ರದೇಶದಿಂದ ವರದಿಯಾಗುತ್ತಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

ABOUT THE AUTHOR

...view details