ನವದೆಹಲಿ:ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಮೊದಲ ಬಾರಿಗೆ 30 ಉದ್ದೇಶಪೂರ್ವಕ ಸುಸ್ತಿದಾರರ ಪಟ್ಟಿಯನ್ನು ಬಿಡುಗಡೆ ಮಾಡಿದೆ.
ಮಾಹಿತಿ ಹಕ್ಕು ಕಾಯ್ದೆಯಡಿ ಕೇಳಲಾದ ಪ್ರಶ್ನೆಗೆ ಆರ್‌ಬಿಐ ಇದೇ ಪ್ರಥಮ ಬಾರಿಗೆ ಉದ್ದೇಶಪೂರ್ವ ಸುಸ್ತಿದಾರರ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಇದರಲ್ಲಿ ಗೀತಾಂಜಲಿ ಜೆಮ್ಸ್ ಕಂಪನಿಯ ಮೆಹುಲ್ ಚೋಕ್ಸಿ ಅಗ್ರ ಸ್ಥಾನದಲ್ಲಿ ಇದ್ದಾನೆ.
ಆರ್‌ಇಐ ಆಗ್ರೋ, ವಿನ್ಸಮ್ ಡೈಮಂಡ್ಸ್, ರುಚಿ ಸೋಯಾ, ರೊಟೊಮ್ಯಾಕ್ ಗ್ಲೋಬಲ್, ಕಿಂಗ್‌ಫಿಶರ್ ಏರ್‌ಲೈನ್ಸ್, ಕುಡೋಸ್ ಕೆಮಿ, ಜೂಮ್ ಡೆವಲಪರ್ಸ್ ಮತ್ತು ಎಬಿಜಿ ಶಿಪ್‌ಯಾರ್ಡ್ ಟಾಪ್ ಹತ್ತು ಸುಸ್ತಿದಾರರ ಶ್ರೇಣಿಯಲ್ಲಿವೆ.
ಉದ್ದೇಶಪೂರ್ವಕ ಸುಸ್ತಿದಾರರ ಮಾಹಿತಿ ಬಹಿರಂಗಪಡಿಸುವಂತೆ ನಾಲ್ಕು ವರ್ಷಗಳು ಹಿಂದೆ ನೀಡಿದ್ದಸುಪ್ರೀಂಕೋರ್ಟ್ಆದೇಶಕ್ಕೆ ಇದೇ ಮೊದಲ ಬಾರಿಗೆ ಆರ್‌ಬಿಐ ವಂಚಕರ ಮಾಹಿತಿ ಹಂಚಿಕೊಂಡಿದೆ. ಖಾಸಗಿ ಡಿಜಿಟಲ್ ಮಾಧ್ಯಮ ಸಲ್ಲಿಸಿದ್ದ ಆರ್ಟಿಐ ಅರ್ಜಿಗೆ ಪ್ರತಿಕ್ರಿಯಿಸಿ 30 ವಂಚಕರ ಪಟ್ಟಿಯನ್ನು ಸಾರ್ವಜನಿಕರ ಮುಂದಿಟ್ಟಿದೆ.
ಗೀತಾಂಜಲಿ ಜೆಮ್ಸ್- ₹ 5,044 ಕೋಟಿ, ಆರ್‌ಇಐ ಅಗ್ರೋ- ₹ 4,197, ವಿನ್ಸಮ್ ಡೈಮಂಡ್ಸ್- ₹ 3,386 ಕೋಟಿ, ರುಚಿ ಸೋಯಾ- ₹ 3,225 ಕೋಟಿ, ರೊಟೊಮ್ಯಾಕ್ ಗ್ಲೋಬಲ್- ₹ 2,844 ಕೋಟಿ, ಕಿಂಗ್‌ಫಿಶರ್ ಏರ್‌ಲೈನ್ಸ್- ₹ 2,488, ಕುಡೋಸ್ ಕೆಮಿ- ₹ 2,326, ಜೂಮ್ ಡೆವಲಪರ್ಸ್- ₹ 2,024 ಮತ್ತು ಎಬಿಜಿ ಶಿಪ್‌ಯಾರ್ಡ್ ₹ 1,875 ಸೇರಿದಂತೆ ಇತರೆ 21 ಕಂಪನಿಗಳಿಂದ ಒಟ್ಟು 52,598 ಕೋಟಿ ರೂ. ಸುಸ್ತಿದಾರರ ಪಟ್ಟಿಯಲ್ಲಿದೆ.