ನವದೆಹಲಿ :ಕಾರ್ಯನಿರ್ವಾಹಕೇತರ ನಿರ್ದೇಶಕರು ಮತ್ತು ಕಾರ್ಯನಿರ್ವಾಹಕ ನಿರ್ದೇಶಕರಿಗೆ ಕಂಪನಿ ನಷ್ಟದ ಸಂದರ್ಭದಲ್ಲಿ ಪರಿಹಾರ ನೀಡಲು ಕಂಪನಿ ಕಾಯ್ದೆ-2013 ತಿದ್ದುಪಡಿ ಮಾಡಲಾಗಿದೆ.
ಕಂಪನಿಯ ಕಾರ್ಯನಿರ್ವಾಹಕ ಹುದ್ದೆಗಳಲ್ಲಿ ಇರುವ ವ್ಯಕ್ತಿಗಳ ಸಂಭಾವನೆಯ ಐದನೇ ಒಂದು ಭಾಗವನ್ನು ಅವರಿಗೆ ನೀಡಲು ನಿರ್ಧರಿಸಿದೆ. ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯ ಈ ಕುರಿತು ಅಧಿಸೂಚನೆ ಹೊರಡಿಸಿದೆ.
ಅಸ್ತಿತ್ವದಲ್ಲಿರುವ ನಿಯಮಗಳ ಪ್ರಕಾರ, ನಷ್ಟ ಅಥವಾ ಲಾಭರಹಿತ ಕಂಪನಿಗಳಿಗೆ ಕಾರ್ಯನಿರ್ವಾಹಕ ಅಥವಾ ಸ್ವತಂತ್ರ ನಿರ್ದೇಶಕರಿಗೆ ಪಾವತಿಸಲು ಅನುಮತಿಸುವುದಿಲ್ಲ. ಸಾಂಸ್ಥಿಕ ವ್ಯವಹಾರಗಳ ಸಚಿವಾಲಯ ಹೊರಡಿಸಿದ ಅಧಿಸೂಚನೆಯ ಪ್ರಕಾರ, ವ್ಯವಸ್ಥಾಪಕರು ಅಥವಾ ಕಾರ್ಯನಿರ್ವಾಹಕ ನಿರ್ದೇಶಕರಿಗೆ ನೀಡಬಹುದಾದ ಒಟ್ಟು ಮೊತ್ತದ ಐದನೇ ಒಂದು ಭಾಗದಷ್ಟು ಸಂಭಾವನೆ ಮಿತಿ ಇರುತ್ತದೆ.